Advertisement

ದ.ಕ. ಜಿಲ್ಲೆಯಲ್ಲಿ 213 ಕೋಟಿ ರೂ. ಕೃಷಿ ಹಾನಿ

10:36 AM Oct 07, 2018 | |

ಪುತ್ತೂರು: ದ. ಕನ್ನಡ ಜಿಲ್ಲೆಯಲ್ಲಿ ಅಡಿಕೆ ಕೊಳೆರೋಗ, ರಬ್ಬರ್‌ ಸಹಿತ ಸಮಗ್ರ ಕೃಷಿಯಲ್ಲಿ 213 ಕೋಟಿ
ರೂ. ಹಾನಿಯಾಗಿದೆ. ಇದರ ವರದಿ ಯನ್ನು ಜಿಲ್ಲಾಡಳಿತವು ಸರಕಾರಕ್ಕೆ ಸಲ್ಲಿಸಿದೆ ಎಂದು ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್‌ ತಿಳಿಸಿದರು.

Advertisement

ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನದಲ್ಲಿ ಶನಿವಾರ ನಡೆದ ಜನಸ್ಪಂದನ ಸಭೆಯಲ್ಲಿ ಅವರು ಮಾತನಾಡಿದರು. ವಿಷಯ ಪ್ರಸ್ತಾವಿಸಿದ ಕೃಷಿಕ ರಾಮಚಂದ್ರ ನೆಕ್ಕಿಲು, ಕೊಳೆರೋಗದಿಂದ ಶೇ. 50ಕ್ಕಿಂತ ಹೆಚ್ಚು ಅಡಿಕೆ ಕೃಷಿಗೆ ಹಾನಿಯಾಗಿದೆ. ಕೆಲವೆಡೆ ಗಿಡಗಳೇ ಸಾಯುತ್ತಿವೆ. ಬಿರುಗಾಳಿಯೂ ಹಾನಿ ಮಾಡಿದೆ. ಆದ್ದರಿಂದ ಜಿಲ್ಲೆಯ ಸಮಗ್ರ ಕೃಷಿ ಹಾನಿಯ ಸಮೀಕ್ಷೆ ನಡೆಸಿ, ವರದಿ  ಸಲ್ಲಿಸುವಂತೆ ಮನವಿ ಮಾಡಿಕೊಂಡರು.

ಉತ್ತರಿಸಿದ ಜಿಲ್ಲಾಧಿಕಾರಿ, ಕೃಷಿ ಹಾನಿಯ ಸಮಗ್ರ ವರದಿಯನ್ನು ಸರಕಾರಕ್ಕೆ ಕಳುಹಿಸಲಾಗಿದೆ. 213 ಕೋಟಿ ರೂ. ನಷ್ಟ ಉಂಟಾಗಿದೆ ಎನ್ನುವುದನ್ನೂ ತಿಳಿಸಲಾಗಿದೆ. ಮುಂದೆ ಕೇಂದ್ರದ ತಂಡ ಬಂದು ಪರಿಶೀಲನೆ ನಡೆಸಲಿದೆ ಎಂದರು.

ಸಾಲಮನ್ನಾದ ವಿಚಾರದಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ ಹಾಗೂ ಸೊಸೈಟಿಗಳು ಹಲವು ದಾಖಲೆಗಳನ್ನು ಕೇಳುತ್ತಿವೆ. ಇದರ ಬಗ್ಗೆ ಸರಿಯಾಗಿ ಮಾಹಿತಿಯೇ ಸಿಗುತ್ತಿಲ್ಲ ಎಂದು ಕೃಷಿಕರು ದೂರಿದರು. ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ, ಇದರ
ಬಗ್ಗೆ ಜಿಲ್ಲಾಮಟ್ಟದಲ್ಲಿ ಸಭೆ ಕರೆದು ಸರಿಯಾದ ಮಾಹಿತಿ ಪಡೆಯಲಾಗುವುದು ಎಂದರು.

ಮುಂಡೂರು ಗ್ರಾ.ಪಂ. ಅಧ್ಯಕ್ಷ ವಸಂತ ಎಸ್‌.ಡಿ. ಮಾತನಾಡಿ, ಗ್ರಾ.ಪಂ. ಹಾಗೂ ನಗರಸಭೆ ವ್ಯಾಪ್ತಿಯಲ್ಲಿ ಸಾಕಷ್ಟು ಜಾಗವನ್ನು ಕೆಸಿಡಿಸಿಗೆ ಲೀಸ್‌ಗೆಕೊಡಲಾಗಿದೆ. ಲೀಸ್‌ ಅವಧಿ ಮುಗಿದರೂ ಆ ಜಾಗಗಳನ್ನು ಹಿಂಪಡೆದಿಲ್ಲ. ಹಿಂದಕ್ಕೆ ಪಡೆದುಕೊಂಡರೆ ನಿವೇಶನವಾಗಿ ಹಂಚಿಕೆ ಮಾಡಬಹುದು ಎಂದರು. ಈ ಬಗ್ಗೆ ಈಗಾಗಲೇ ಸಚಿವರ ಮಟ್ಟದಲ್ಲಿ ಚರ್ಚೆ ನಡೆದಿದೆ. ಅಲ್ಲೇ ನಿರ್ಧಾರ ತೆಗೆದುಕೊಳ್ಳಬೇಕಿದೆ ಎಂದು ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿದರು.

Advertisement

ರವಳನಾಥ ಪ್ರಭು ಮಾತನಾಡಿ, ಅಪೇಕ್ಷಿತ ನಕ್ಷೆ ಸಿಗುತ್ತಿಲ್ಲ. ಇದರಿಂದಹೆಚ್ಚಿನವರಿಗೆ ಕೆಲಸವೇ ಇಲ್ಲದಂತಾ
ಗಿದೆ. ನಕ್ಷೆಯ ಶುಲ್ಕವಾಗಿ 1,200 ಸಂಗ್ರಹಿಸಿದರೂ ಸಮಸ್ಯೆ ಇಲ್ಲ ಎಂದರು. ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಇದುವ
ರೆಗೆ ಸರ್ವೆ ಇಲಾಖೆ ನೀಡುತ್ತಿದ್ದ ಅಪೇಕ್ಷಿತ ನಕ್ಷೆ ಇನ್ನು ಸಿಗುವುದಿಲ್ಲ. ಹೀಗೆ ನೀಡುತ್ತಿದ್ದುದೇ ಸಮಸ್ಯೆಗಳಿಗೆ ಕಾರಣ. ಸ್ವಲ್ಪ ಕಷ್ಟವಾದರೂ ಪರವಾಗಿಲ್ಲ, ಸರಿಯಾದ ರೀತಿಯಲ್ಲೇ ನಕ್ಷೆಗಳು ಸಿಗಬೇಕು. ಇದರ ಬಗ್ಗೆ ಸರಕಾರವೇ ಸರಿಯಾದ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದರು.

ಶಾಸಕ ಸಂಜೀವ ಮಠಂದೂರು, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು. ಜಿ.ಪಂ. ಸಿಇಒ ಸೆಲ್ವಮಣಿ ಆರ್‌., ಅಪರ ಜಿಲ್ಲಾಧಿಕಾರಿ ಕುಮಾರ್‌, ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ್‌, ಸಹಾಯಕ ಆಯುಕ್ತ ಎಚ್‌.ಕೆ. ಕೃಷ್ಣಮೂರ್ತಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next