ಸಿಂಧನೂರು: ರೈತರಿಗೆ ಅಗತ್ಯ ಇರುವ ಎಲ್ಲ ಸೌಲಭ್ಯ ಕಲ್ಪಿಸುವ ಮೂಲಕ ನಮ್ಮ ಸಹಕಾರಿ ಸಂಸ್ಥೆಯು ವಾರ್ಷಿಕ 21.85 ಲಕ್ಷ ರೂ. ಲಾಭಾಂಶ ಗಳಿಸಿದೆ ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಅಮರೇಶ ಅಂಗಡಿ ಹೇಳಿದರು.
ನಗರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಹಮ್ಮಿಕೊಂಡಿದ್ದ 2020-21ನೇ ಸಾಲಿನ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಾರ್ಷಿಕವಾಗಿ ಖರ್ಚು ವೆಚ್ಚವನ್ನು ಸಂಕ್ಷಿಪ್ತಗೊಳಿಸಿ ಸಹಕಾರಿ ಸಂಸ್ಥೆಯನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಸಂಸ್ಥೆ ಮುಂದಡಿ ಇಟ್ಟಿದೆ. ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಅವರ ಸಲಹೆ, ಸೂಚನೆಗಳನ್ನು ಪಾಲಿಸಿ, ಸಂಘವನ್ನು ಮತ್ತಷ್ಟೂ ಆರ್ಥಿಕವಾಗಿ ಬಲಿಷ್ಠಗೊಳಿಸಲಾಗಿದೆ. 3.70 ಕೋಟಿ ರೂ. ವಹಿವಾಟು ಹೊಂದಿರುವ ಸಹಕಾರಿ ಸಂಘವೂ ಲಾಭಾಂಶ ಪಡೆಯುವ ನಿಟ್ಟಿನಲ್ಲಿ ಪ್ರಗತಿ ಸಾ ಧಿಸಿದೆ ಎಂದರು.
ಕೆ.ಭೀಮಣ್ಣ ವಕೀಲರು, ಅಮರೇಶಪ್ಪ ಮೈಲಾರ್, ಹಂಪಯ್ಯಸ್ವಾಮಿ, ಈರೇಶ ಇಲ್ಲೂರು, ಸೈವಲಿ ಮಿಟ್ಟಿಮನಿ, ಟಿ.ಹನುಮಂತಪ್ಪ ಅಂಗಡಿ, ಕಾರ್ಯಕಾರಿ ಮಂಡಳಿ ಸದಸ್ಯರಾದ ಟಿ.ಮಲ್ಲಯ್ಯ, ಹಿರೇಲಿಂಗಪ್ಪ ಬಾದರ್ಲಿ, ಗಂಗಪ್ಪ ಸೌದ್ರಿ, ಸಗರಪ್ಪ ಕಂಬಳಿ, ಬಸಪ್ಪ ಬಾಯತಾಳ, ಹಿರೇಲಿಂಗಪ್ಪ ಹಂಚಿನಾಳ, ಪಂಪಾಪತಿ ನಾಯಕ, ವಿ. ಶ್ರೀನಿವಾಸ್, ಜಗದೀಶ್ವರಿ ಪಂಪಯ್ಯಸ್ವಾಮಿ, ಲಕ್ಷ್ಮೀ ಗೊಲ್ಲರ್, ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ವಿಜಯಕುಮಾರ ಬರಸಿ, ಸಿಬ್ಬಂದಿ ಶರಣಪ್ಪ ಡಿ., ಬಸವರಾಜ ಬನ್ನದ, ನಾಗರಾಜ, ರೇಣುಕಾಪ್ರಸಾದ ಇದ್ದರು.