Advertisement
ಅವರೇ ಎಂಡಿಎಚ್ ಉತ್ಪನ್ನ ಕಂಪೆನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಧರ್ಮಪಾಲ್ ಗುಲಾಟಿ. ಇವರು 2016ರಲ್ಲಿ ಪಡೆದ ಒಟ್ಟು ಸಂಭಾವನೆ 21 ಕೋಟಿ ರೂಪಾಯಿ! ಸಂಭಾವನೆಯ ಶೇ.90 ಭಾಗವನ್ನು ದತ್ತಿ ಸಂಸ್ಥೆಗಳಿಗೆ ದಾನ ನೀಡುತ್ತಿದ್ದಾರೆ.
ದೇಶದ ಬೇರೆಲ್ಲ ಸಿಇಒಗಳು ಪದವಿಗಳ ಮೇಲೆ ಪದವಿ ಪಡೆದಿದ್ದರೂ ಎಂಡಿಎಚ್‌ನ ಗುಲಾಟಿ ಓದಿದ್ದು ಕೇವಲ 5ನೇ ಕ್ಲಾಸ್ ಮಾತ್ರ. 5ನೇ ತರಗತಿಯ ಅರ್ಧದಲ್ಲೇ ಶಾಲೆ ಬಿಟ್ಟವರು! ಇಂಗ್ಲಿಷನ್ನು ನಿರರ್ಗಳ ಮಾತ ನಾಡುತ್ತಾರೆ. 60 ವರ್ಷಗಳಿಂದ “ಎಂಡಿಎಚ್’ನಲ್ಲೇ ಕಾರ್ಯನಿರ್ವಹಿಸಿದ್ದಾರೆ.
Related Articles
ಯಾರಿಗೂ ಇದು ಅಚ್ಚರಿಯೇ! ಭಾರತದ ಹಳ್ಳಿಹಳ್ಳಿಗಳಲ್ಲಿ ಜನಪ್ರಿಯ ವಿರುವ ಎಂಡಿಎಚ್ ಮಸಾಲ ಕಂಪನಿಯ ಹುಟ್ಟಿದ್ದು ಪಾಕಿಸ್ಥಾನದ ಸಿಯಾಲ್‌ಕೋಟ್‌ನಲ್ಲಿ, 1919ರಲ್ಲಿ. ಗುಲಾಟಿ ಅವರ ತಂದೆ ಚುನ್ನಿ ಲಾಲ್ ಈ ಕಂಪೆನಿಯನ್ನು ಸ್ಥಾಪಿಸಿದ್ದು, ನಂತರ ಈ ಕಂಪೆನಿ ದಿಲ್ಲಿಯ ಕರೋಲ್‌ಬಾಗ್‌ಗೆ ಸ್ಥಳಾಂತರವಾಯಿತು. ಗುಲಾಟಿ ಅವಧಿಯಲ್ಲಿ ಭಾರತದಾದ್ಯಂತ 15 ಫ್ಯಾಕ್ಟರಿಗಳು ಆರಂಭಗೊಂಡಿದ್ದು, ದುಬೈ ಹಾಗೂ ಲಂಡನ್ನಿನಲ್ಲೂ ಇದರ ಶಾಖೆಗಳಿವೆ. ಎಂಡಿಎಚ್‌ನ 60ಕ್ಕೂ ಅಧಿಕ ಮಸಾಲಾ ಉತ್ಪನ್ನಗಳು 100 ದೇಶಗಳಿಗೆ ರವಾನೆ ಆಗುತ್ತಿವೆ. ಕಂಪೆನಿಯ ಸದ್ಯದ ಮೌಲ್ಯ 1500 ಕೋಟಿ ರೂಪಾಯಿ.
Advertisement