ಬೆಂಗಳೂರು: ಬಿಗ್ ಬಾಸ್ ಸೀಸನ್ -11(Bigg Boss Kannada-11) ಯಶಸ್ವಿಯಾಗಿ ಸಾಗುತ್ತಿರುವ ಬೆನ್ನಲ್ಲೇ ಕಿಚ್ಚ ಸುದೀಪ್ (Kiccha Sudeep) ಇದು ತನ್ನ ಕೊನೆಯ ಸೀಸನ್ ಎಂದು ಟ್ವೀಟ್ ಮಾಡಿದ ಬಳಿಕ ವೀಕ್ಷಕರು ಶಾಕ್ ಆಗಿದ್ದಾರೆ.
ಬಿಗ್ ಬಾಸ್‌ನಲ್ಲಿ ಯಾವುದೇ ಸ್ಪರ್ಧಿಗಳಿರಲಿ, ವಾರಪೂರ್ತಿ ದೊಡ್ಮನೆಯೊಳಗೆ ಏನೇ ಆಗಿರಲಿ ವೀಕ್ಷಕರು ಮಾತ್ರ ಶನಿವಾರ – ಭಾನುವಾರ ಬರುವ ಕಿಚ್ಚನ ಪಂಚಾಯ್ತಿ ನೋಡುವುದನ್ನು ಮಾತ್ರ ಮಿಸ್ ಮಾಡಲ್ಲ. ಕಳೆದ 10 ಸೀಸನ್‌ನಿಂದ ಕಿಚ್ಚ ಕಿರುತೆರೆಯಲ್ಲಿ ʼಬಿಗ್ ಬಾಸ್ʼ ಆಗಿಯೇ ವೀಕ್ಷಕರ ಪ್ರೀತಿ – ಪ್ರೋತ್ಸಾಹವನ್ನು ಗಳಿಸಿದ್ದಾರೆ.
ಇದನ್ನೂ ಓದಿ: Bigg Boss Kannada: ಕಿಚ್ಚನ ಬಳಿಕ ಈ ಸ್ಟಾರ್‌ಗಳು ಆಗ್ತಾರಾ ಕಿರುತೆರೆಯ ʼಬಿಗ್ ಬಾಸ್ʼ..?
2013ರಲ್ಲಿ ಆರಂಭವಾದ ಬಿಗ್ ಬಾಸ್ ಸೀಸನ್ -11ರವರೆಗೂ ಯಶಸ್ವಿಯಾಗಿ ಸಾಗಿ ಬಂದಿರುವುದರ ಹಿಂದೆ ಕಿಚ್ಚ ಸುದೀಪ್ ಅವರ ನಿರೂಪಣೆಯೂ ಒಂದು ಕಾರಣವೆಂದರೆ ತಪ್ಪಾಗದು.
ಸೀಸನ್ ಗಳು ಮುಂದುವರೆದಂತೆ ಬಿಗ್ ಬಾಸ್ ಟಿಆರ್‌ಪಿ ಕೂಡ ಭರ್ಜರಿಯಾಗಿ ಸದ್ದು ಮಾಡಿವೆ. ಮೊನ್ನೆ ಮೊನ್ನೆ ಬಂದ ಬಿಗ್ ಬಾಸ್ ಸೀಸನ್ -11ಗೂ ಉತ್ತಮ ಟಿಆರ್ ಪಿ ಬಂದಿದೆ.
ಬಿಗ್‌ಬಾಸ್ ನಡೆಸಿಕೊಡಲು ಕಿಚ್ಚ ಎಷ್ಟು ಸಂಭಾವನೆ ಪಡೆಯುತ್ತಿದ್ದರು ಎನ್ನುವುದರ ಬಗ್ಗೆ ಮಾಹಿತಿಯೊಂದು ರಿವೀಲ್ ಆಗಿದೆ.
ಮೊದಲ 5 ಬಿಗ್ ಬಾಸ್ ಸೀಸನ್‌ಗಳಿಗಾಗಿ ಕಿಚ್ಚ ಒಟ್ಟಿಗೆಯೇ ಒಪ್ಪಂದ ಮಾಡಿಕೊಂಡಿದ್ದರು. ಅದಕ್ಕಾಗಿ 20 ಕೋಟಿ ರೂ. ಸಂಭಾವನೆ ಪಡೆದಿದ್ದರು. ಅಂದರೆ ಪ್ರತಿ ಸೀಸನ್‌ಗೆ 4 ಕೋಟಿ ರೂ.ಯಂತೆ ಸಂಭಾವನೆ ಪಡೆಯುತ್ತಿದ್ದರು ಎನ್ನಲಾಗಿದೆ. ಅಲ್ಲಿಂದ ಮುಂದೆ ಬಂದ ಸೀಸನ್‌ಗೆ ಕಿಚ್ಚನ ವ್ಯಾಲ್ಯೂಕ್ಕೆ ತಕ್ಕಂತೆ ಅವರ ಸಂಭಾವನೆಯೂ ಹೆಚ್ಚಾಗುತ್ತಾ ಬಂತು.
ಸದ್ಯ ನಡೆಯುತ್ತಿರುವ 11ನೇ ಸೀಸನ್ ನಿರೂಪಣೆ ಮಾಡಲು ಕಿಚ್ಚ ಸುದೀಪ್ 8 ಕೋಟಿ ರೂ. ಸಂಭಾವನೆ ಪಡೆದಿರುವುದಾಗಿ ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ವಾಹಿನಿ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿಯಿಲ್ಲ.
ಬಿಗ್ ಬಾಸ್ ಶೋ ಆರಂಭವಾದಾಗ ಪತ್ರಕರ್ತರೊಬ್ಬರು ಸಂಭಾವನೆ ಬಗ್ಗೆ ಪ್ರಶ್ನೆಯೊಂದನ್ನು ಕೇಳಲಾಗಿತ್ತು. ಆದರೆ ಇದಕ್ಕೆ ಕಿಚ್ಚ ನೇರವಾಗಿ ಉತ್ತರಿಸದೆ, ಜಾಣ್ಮೆಯಿಂದ ಪ್ರತಿಕ್ರಿಯೆ ನೀಡಿದ್ದರು.
ಬಿಗ್ ಬಾಸ್ ಗೆ ಆಯಾ ಭಾಷೆಯಲ್ಲಿ ಅಪಾರ ವೀಕ್ಷಕರಿದ್ದಾರೆ. ಸಾಮಾನ್ಯವಾಗಿ ಸ್ಟಾರ್ ನಟರೇ ಬಿಗ್ ಬಾಸ್ ನಡೆಸಿಕೊಡುತ್ತಾರೆ. ಅವರು ಪ್ರತಿ ಸೀಸನ್‌ಗೆ ತನ್ನ ಸಂಭಾವನೆಯನ್ನು ಹೆಚ್ಚಿಸಿಕೊಳ್ಳುತ್ತಾರೆ.
ಸದ್ಯ ಬಿಗ್ ಬಾಸ್ 11ರ ಬಳಿಕ ದೊಡ್ಮನೆ ಆಟಕ್ಕೆ ಯಾರು ನಿರೂಪಕರಾಗುತ್ತಾರೆ ಅಗುತ್ತಾರೆ ಎನ್ನುವ ಪ್ರಶ್ನೆಗೆ ಉತ್ತರ ಹುಡುಕುವಲ್ಲಿ ವೀಕ್ಷಕರು ನಿರತರಾಗಿದ್ದಾರೆ.