Advertisement
ದೇಶ ದಲ್ಲಿ 15 ವರ್ಷ ಮೇಲ್ಪಟ್ಟ ವಾಹನಗಳಿಂದ ವಾಯುಮಾಲಿನ್ಯ ಪ್ರಮಾಣ ಹೆಚ್ಚಾಗುತ್ತಿದ್ದು, ಇದನ್ನು ತಪ್ಪಿ ಸುವ ನಿಟ್ಟಿನಲ್ಲಿ ಗುಜರಿ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಅಸ್ತು ಎಂದಿದೆ. ಆದರೆ, ಈ ಗುಜರಿ ವಾಹ ನ ಗಳ ವಿಲೇ ವಾರಿ ಯಾವ ರೀತಿ ಆಗ ಬೇಕು ಹಾಗೂ ಗುಜರಿ ಯಾರ್ಡ್‌ಗಳ ನಿರ್ಮಾಣ ಸೇರಿ ದಂತೆ ವಾಹ ನ ಗಳ ಮೆಟಲ್ ಬಿಡಿ ಭಾಗ ಗ ಳನ್ನು ಹೇಗೆ ವಿಲೇ ವಾರಿ ಮಾಡ ಬೇಕು ಎನ್ನು ವು ದಕ್ಕೆ ಸಂಬಂಧಿ ಸಿ ದಂತೆ ಕೇಂದ್ರ ಸರ್ಕಾರ ಇನ್ನಷ್ಟೇ ಮಾರ್ಗ ಸೂಚಿ ಬಿಡುಗಡೆ ಮಾಡಬೇಕಿದೆ.
Related Articles
Advertisement
ಕೇಂದ್ರ ಸರ್ಕಾರ ವಾಯು ಮಾ ಲಿನ್ಯ ಪ್ರಮಾಣ ಕಡಿಮೆ ಮಾಡುವ ಉದ್ದೇ ಶ ದಿಂದ 15 ವರ್ಷ ಜೀವಿತಾ ವಧಿ ಪೂರೈ ಸಿ ರುವ ವಾಹ ನ ಗ ಳ ನ್ನು ಗುಜ ರಿಗೆ ಹಾಕುವ ನಿಯಮ ಜಾರಿ ಮಾಡಲು ಮುಂದಾ ಗಿದೆ. ಇದರ ಭಾಗ ವಾಗಿ ಗುಜರಿ ವಾಹನಗಳ ವಿಲೇವಾರಿಗೆ ನಗರಗಳಲ್ಲಿ ಯಾರ್ಡ್ (ಗುಜರಿ ಬಿಡಿ ಭಾಗ ಬೇರ್ಪಡಿಸು ವುದು, ಮರು ಬಳಕೆ ಹಾಗೂ ಅನುಪಯುಕ್ತ ವಿಲೇವಾರಿ ಸ್ಥಳ) ಅಭಿವೃದ್ಧಿಪಡಿಸುವ ಅವಶ್ಯಕತೆ ಇದೆ ಎಂದು ಸೆಂಟರ್ ಆಫ್ ಸ್ಟಡಿ ಆಫ್ ಸೈನ್ಸ್ ಟೆಕ್ನಾ ಲಜಿ ಆ್ಯಂಡ್ ಪಾಲಿಸಿ ಸಂಸ್ಥೆಯ ಸಂಶೋ ಧನಾ ವಿಜ್ಞಾನಿ ಡಾ. ಪ್ರತಿಮಾ ಸಿಂಗ್ ತಿಳಿಸಿದರು.
ಕೇಂದ್ರ ಸರ್ಕಾರ ಗುಜರಿ ವಾಹನಗಳ ವಿಲೇವಾರಿಗೆ ಯಾರ್ಡ್ ನಿರ್ಮಿಸಲು ಅನುದಾನ ನೀಡಲಿದೆಯೇ, ಸರ್ಕಾರ ಅಥವಾ ಸ್ಥಳೀಯ ಆಡಳಿತವೇ ಇದರ ವ್ಯವಸ್ಥೆ ಮಾಡಿಕೊಳ್ಳ ಬೇಕೆ ಎನ್ನುವುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ. ಅದೇ ರೀತಿ ಗುಜರಿ ವಾಹನಗಳ ಮೆಟಲ್ ವಿಲೇವಾರಿ ಹಾಗೂ ಬಿಡಿ ಭಾಗಗಳನ್ನು ಯಾವ ರೀತಿ ವಿಲೇ ವಾರಿ ಮಾಡ ಬೇಕು ಎನ್ನುವುದು ಸೇರಿ ದಂತೆ ಸಂಪೂರ್ಣ ಮಾರ್ಗ ಸೂಚಿ ಬಂದ ಮೇಲೆ ಗುಜರಿ ಪ್ರಕ್ರಿಯೆ ಪ್ರಾರಂಭ ವಾಗುವ ಸಾಧ್ಯತೆ ಇದೆ ಎಂದು ಹೇಳಿ ದರು.