Advertisement

Seized: 21.34 ಲೀ. ಮದ್ಯ, 1.65 ಕೆಜಿ ಡ್ರಗ್ಸ್‌ ವಶಕ್ಕೆ

10:57 AM Mar 21, 2024 | Team Udayavani |

ಮಂಗಳೂರು: ಲೋಕಸಭಾ ಚುನಾವಣೆಗೆ ಸಂಬಂ ಧಿಸಿದಂತೆ ಚುನಾವಣ ಅಕ್ರಮಗಳನ್ನು ತಡೆಹಿಡಿಯಲು ಜಿಲ್ಲೆಯಲ್ಲಿ ಒಟ್ಟು 8 ಖರ್ಚು ವೆಚ್ಚ ಪರೀವೀಕ್ಷಕರರನ್ನು, 72 ಫ್ಲೈಯಿಂಗ್‌ ಸ್ಕ್ವ್ಯಾಡ್‌ (ಎಫ್‌.ಎಸ್‌.ಟಿ), 69 ಎಸ್‌ಎಸ್‌ಟಿ ತಂಡಗಳು ಮತ್ತು 8 ಅಬಕಾರಿ ತಂಡಗಳನ್ನು ಜಿಲ್ಲೆಯಾದ್ಯಂತ ನಿಯೋಜಿಸಲಾಗಿದೆ.

Advertisement

ಚುನಾವಣೆ ನೀತಿಸಂಹಿತೆ ಜಾರಿಯಾದ ದಿನದಿಂದ ಮಾ. 20ರ ವರೆಗೆ 12,300 ರೂ. ಮೌಲ್ಯದ 21.34 ಲೀಟರ್‌ ಮದ್ಯವನ್ನು ಜಪ್ತಿ ಮಾಡಲಾಗಿದೆ. 3,13,500 ರೂ.ಗಳ ಮೌಲ್ಯದ 1.65 ಕೆಜಿ ಡ್ರಗ್ಸ್‌ ವಶಪಡಿಸಿಕೊಳ್ಳಲಾಗಿದೆ.

2024 ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಾದ ದಿನದಿಂದ ಮಾ. 20ರ ವರೆಗೆ ದೂರವಾಣಿ ಮೂಲಕ (1950) 75 ಸಾರ್ವಜನಿಕರಿಂದ ಮಾಹಿತಿ ಕೋರಿಕೆಗಳನ್ನು ಸ್ವೀಕರಿಸಿ ವಿಲೇವಾರಿ ಮಾಡಲಾಗಿದೆ. ಸಿ-ವಿಸಿಲ್‌ ಆಪ್‌ ಮೂಲಕ ಇಲ್ಲಿಯವರೆಗೆ 11 ದೂರುಗಳು ಸ್ವೀಕೃತಗೊಂಡಿದ್ದು ಎಲ್ಲ ದೂರುಗಳನ್ನು ವಿಲೇವಾರಿ ಮಾಡಲಾಗಿರುತ್ತದೆ.

ಎನ್‌ಜಿಆರ್‌ಎಸ್‌ ಪೋರ್ಟಲ್‌ (ರಾಷ್ಟ್ರೀಯ ಕುಂದುಕೊರತೆಗಳ ಪರಿಹಾರ ವ್ಯವಸ್ಥೆ)ಮೂಲಕ ಜಿಲ್ಲೆಯಲ್ಲಿ ಒಟ್ಟು 27 ದೂರುಗಳು ಸ್ವೀಕೃತಗೊಂಡಿದ್ದು, 22 ದೂರುಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿ ಕಾರಿಗಳು/ ಜಿಲ್ಲಾ ಧಿಕಾರಿಯವರ ಕಚೇರಿ ಪ್ರಕಟನೆ ತಿಳಿಸಿದೆ.

ಆಯುಧ ನಿಷೇಧ

Advertisement

ಕಾಸರಗೋಡು: ಲೋಕಸಭಾ ಚುನಾವಣೆ ಪ್ರಕ್ರಿಯೆಯನ್ನು ಶಾಂತಿಯುತವಾಗಿ ನಡೆಸಲು ಮತ್ತು ಸಾರ್ವಜನಿಕರ ರಕ್ಷಣೆಯನ್ನು ಖಚಿತಪಡಿಸಲು ಜಿಲ್ಲೆ ವ್ಯಾಪ್ತಿಯ ವ್ಯಕ್ತಿಗಳು ಪರವಾನಿಗೆ ಇರುವ ಆಯುಧಗಳನ್ನು ಸ್ವಾಧೀನದಲ್ಲಿರಿಸುವುದು, ಸಾಗಾಟ ನಡೆಸುವುದನ್ನು ಜಿಲ್ಲಾಧಿಕಾರಿ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.

ಯಾರಾದರೂ ಆಯುಧವನ್ನು ಸ್ವಾಧೀನದಲ್ಲಿರಿಸಿದರೆ ಕ್ರಿಮಿನಲ್‌ ಕಾಯ್ದೆ 1973 ಸೆಕ್ಷನ್‌ 144ರ ಪ್ರಕಾರ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಕ್ರಮ ಕೈಗೊಳ್ಳುವರು. ಚುನಾವಣೆ ಘೋಷಣೆ ದಿನದಿಂದ ಫಲಿತಾಂಶ ಪ್ರಕಟಗೊಳ್ಳುವ ವರೆಗೆ ನಿಷೇಧ ಜಾರಿಯಲ್ಲಿರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next