ಮಂಡ್ಯ: ಪಡಿತರ ನೀಡುವುದಕ್ಕೆ ಫಲಾನುಭವಿಗಳಿಂದ ನ್ಯಾಯಬೆಲೆ ಅಂಗಡಿ ಮಾಲೀಕರು 20 ರೂ. ವಸೂಲಿ ಮಾಡುತ್ತಿದ್ದಾರೆ ಎಂದು ಶಾಸಕ ಡಾ.ಕೆ.ಅನ್ನದಾನಿ ದೂಷಿಸಿ ದರು.ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಕೋವಿಡ್-19 ನಿಯಂತ್ರಣ ಕುರಿತು ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಥಮ್ ನೀಡದೆ ಫಲಾನುಭವಿಗಳಿಗೆ ಪಡಿತರ ನೀಡಬೇಕು ಎಂದು ಸಿಎಂ ಬಹಳ ದಿನಗಳ ಹಿಂದೆಯೇ ಆದೇಶ ಮಾಡಿದ್ದಾರೆ. ಆದರೆ, ನ್ಯಾಯಬೆಲೆ ಅಂಗಡಿಯವರು ಒಟಿಪಿ ಇಲದೇ ಪಡಿತರ ನೀಡಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಆಹಾರ ಪದಾರ್ಥ ಪಡೆಯುವುದಕ್ಕೂ ಅವರಿಗೆ 20ರೂ. ಕೊಡಬೇಕು ಎಂದು ದೂರಿದರು. ಅನ್ನದಾನಿ ಅವರ ಮಾತನ್ನು ಬೆಂಬಲಿಸಿ ಸಚಿವ ನಾರಾಯಣಗೌಡರು ಮಾತನಾಡಿ, ಈ ವಿಷಯ ನನ್ನ ಗಮನಕ್ಕೂ ಬಂದಿದೆ. ಇದರ ಬಗ್ಗೆ ತ್ವರಿತ ಕ್ರಮ ವಹಿಸುವಂತೆ ಆಹಾರ ಇಲಾಖೆ ಉಪ ನಿರ್ದೇಶಕರಿಗೆಸೂಚಿಸಿದರು.
ಈಗಾಗಲೇ ಶೇ.80ರಷ್ಟು ಪಡಿತರ ವಿತರಣೆಯಾಗಿದೆ. ನಾವೂ ಪರಿಶೀಲಿಸಿದ್ದೇವೆ. ಹಣ ಪಡೆದು ಪಡಿತರ ನೀಡುತ್ತಿರುವ ದೂರು ನಮಗೆ ಬಂದಿಲ್ಲ ಎಂದು ಉಪ
ನಿರ್ದೇಶಕಿ ಕುಮುದಾ ಹೇಳಿದಾಗ, ಈ ಬಗ್ಗೆ ನನಗೆ ನಿತ್ಯ ನೂರು ಫೋನ್ ಬರಿ¤ದೆ. ಶಾಸಕರೊಂದಿಗೆ ಸಮಾಲೋಚನೆ ಮಾಡಿದ್ದೇನೆ. ಸಿಎಂ ಆದಿಯಾಗಿ ಯಾರ ಮಾತಿಗೂ ಬೆಲೆಯೇ ಇಲ್ಲದಂತಾಗಿದೆ ಎಂದು ಜೋರು ದನಿಯಲ್ಲಿ ಹೇಳಿದರು.
ಮಳವಳ್ಳಿ ತಹಶೀಲ್ದಾರ್ ಮಾತನಾಡಿ, ನ್ಯಾಯಬೆಲೆ ಅಂಗಡಿ ಮಾಲೀಕರು ಆಹಾರ ಇಲಾಖೆ ಉಪ ನಿರ್ದೇಶಕರಿಂದ ಪತ್ರ ಕೊಡಿಸುವಂತೆ ಕೇಳಿದ್ದಾರೆ ಎಂದು ಹೇಳಿದಾಗ ಶಾಸಕರಾದ ಪುಟ್ಟರಾಜು ಮತ್ತು ರವೀಂದ್ರ ಶ್ರೀಕಂಠಯ್ಯ, ನೀವು ಪತ್ರ ಕಳುಹಿಸಲಿಲ್ಲವೇನ್ರಿ ಎಂದು ಪ್ರಶ್ನಿಸಿದರು. ಇವತ್ತು ಪತ್ರ ಕಳುಹಿಸಿಕೊಡುವುದಾಗಿ ಹೇಳಿದಾಗ, ಕೋಪಗೊಂಡ ಶಾಸಕ ಡಾ.ಕೆ.ಅನ್ನದಾನಿ ಸಿಎಂ ಆದೇಶ ಬಂದು ಎಷ್ಟು ದಿನವಾಯಿತು. ಈಗ ಪತ್ರ ಕಳುಹಿಸುತ್ತಿದ್ದೀರಾ. ಇಷ್ಟು ದಿನ ಏನು ಮಾಡುತ್ತಿದ್ದೀರಿ ಎಂದು ಗುಡುಗಿದರು.