ಹೊಸದಿಲ್ಲಿ: ಕೊರೊನಾ ಸೋಂಕಿನ ವಿರುದ್ಧ ದೇಶ ಅತ್ಯಂತ ಎಚ್ಚರಿಕೆ ಯಿಂದ ಹೋರಾಟ ನಡೆಸಲಿದೆ. ಜತೆಗೆ ದೇಶದ ಹಿತಾಸಕ್ತಿಯನ್ನೂ ಕಾಯ್ದುಕೊಳ್ಳಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪಿಎಂ- ಕಿಸಾನ್ ಯೋಜನೆಯ ಅನ್ವಯ 10.09 ಕೋಟಿ ರೈತರಿಗೆ 10ನೇ ಕಂತಿನ ರೂಪ ದಲ್ಲಿ ಶನಿ ವಾರ 20,900 ಕೋಟಿ ರೂ. ಮೊತ್ತವನ್ನು ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಿದ ಬಳಿಕ ಅವರು ಮಾತನಾಡಿದರು.
ದೇಶದಲ್ಲಿ ಇದುವರೆಗೆ 145 ಕೋಟಿ ಡೋಸ್ ಕೊರೊ ನಾ ಲಸಿಕೆ ನೀಡಲಾಗಿದೆ. ಇದೊಂದು ಸಾಧನೆಯಾಗಿ ದೆ ಎಂದು ಪ್ರಧಾನಿ ಮೋದಿಯವರು ಪ್ರತಿಪಾದಿಸಿದ್ದಾರೆ. ಸೋಂಕಿನ ಅತ್ಯಂತ ತುರ್ತು ಸಂದರ್ಭದಲ್ಲಿ 80 ಕೋಟಿ ಮಂದಿ ಬಡವರಿಗೆ ಉಚಿತವಾಗಿ ಆಹಾರ ಧಾನ್ಯ ಪೂರೈಸಲಾಗುತ್ತಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಬಾಂಗ್ಲಾದೇಶ ವಿರುದ್ಧದ ಪ್ರಥಮ ಟೆಸ್ಟ್: ಕಾನ್ವೆ ಶತಕ; ಚೇತರಿಸಿದ ಕಿವೀಸ್
ಇದೇ ಕಾರ್ಯಕ್ರಮದಲ್ಲಿ 351 ರೈತ ಉತ್ಪಾದನ ಕೇಂದ್ರ (ಎಫ್ಪಿಒ)ಗಳಿಗೆ 14 ಕೋಟಿ ರೂ. ಮೊತ್ತದ ನೆರವನ್ನು ನೀಡಿದ್ದಾರೆ. ಈ ಕೇಂದ್ರಗಳಿಂದ 1.24 ಲಕ್ಷ ರೈತರಿಗೆ ನೆರವಾಗಲಿದೆ. ವರ್ಚುವಲ್ ಆಗಿ ನಡೆದ ಕಾರ್ಯಕ್ರಮದಲ್ಲಿ ಒಂಬತ್ತು ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಏಳು ರಾಜ್ಯಗಳ ಕೃಷಿ ಸಚಿವರು ಭಾಗವಹಿಸಿದ್ದರು.