Advertisement
ಸಿನಿಮಾರಂಗವನ್ನು ದೂಷಿಸಬೇಡಿ:
Related Articles
Advertisement
ಹೊಸದು ಕೊಡಲು ಪ್ರಯತ್ನಿಸೋಣ: ಇವತ್ತು ಪ್ರೇಕ್ಷಕರಿಗೆ ಬೇಕಾಗಿರೋದು ಹೊಸತನ. ಆ ವಿಚಾರದಲ್ಲಿ ಚಿತ್ರರಂಗ ಗಮನ ಹರಿಸಬೇಕು. ಅದು ಬಿಟ್ಟು ಅಮೆಜಾನ್, ನೆಟ್‌ಪ್ಲಿಕ್ಸ್ ಎಂದು ತಡಕಾಡಿದರೆ ಅದರಿಂದ ನಮ್ಮ ಕಂಟೆಂಟ್ ಕೆಡಬಹುದೇ ಹೊರತು ಬೇರೇನು ಲಾಭವಿಲ್ಲ. ಜನ ಹೊಸ ಕಂಟೆಂಟ್ ಕೊಟ್ಟಾಗ ಯಾವತ್ತೂ ರಿಜೆಕ್ಟ್ ಮಾಡಿಲ್ಲ. ಆ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕಿದೆ. ಜನರ ಕೈಯಲ್ಲೇ ಮನರಂಜನೆ ಇದೆ. ಹೀಗಿರುವಾಗ ನಾವು ಹೊಸದೆಂದು ಹೇಳಿ ಅಲ್ಲಿಂದ ಇಲ್ಲಿಂದ ತೆಗೆದುಕೊಟ್ಟರೆ ನಮಗೆ ತೊಂದರೆಯಾದೀತು. ಆ ನಿಟ್ಟಿನಲ್ಲಿ ಹೆಚ್ಚು ಎಚ್ಚರಿಕೆ ವಹಿಸಬೇಕಿದೆ. –ದುನಿಯಾ ವಿಜಯ್, ನಟ, ನಿರ್ದೇಶಕ
ಗೆಲುವು ಡಬಲ್ ಆಗಲಿ:
ಹೊಸ ವರ್ಷಕ್ಕೆ ಚಿತ್ರರಂಗ ಖುಷಿಯಾಗಿರಬೇಕು. ಈ ವರ್ಷವೂ ಭೀಮ, ಕೃಷ್ಣಂ ಪ್ರಣಯ ಸಖೀ, ಯು-ಐ, ಮ್ಯಾಕ್ಸ್ ಹೀಗೆ ಹಲವು ಸಿನಿಮಾಗಳು ಗೆದ್ದಿವೆ. ಮುಂದಿನ ವರ್ಷ ಈ ಗೆಲುವು ಡಬಲ್ ಆಗಲಿ ಎಂಬುದು ನನ್ನ ಬಯಕೆ. ಪ್ರೇಕ್ಷಕರು ಕನ್ನಡ ಸಿನಿಮಾಗಳಿಗೆ ಕೈ ಹಿಡಿದರೆ, ಕನ್ನಡ ಚಿತ್ರರಂಗ ಬೆಳವಣಿಗೆಯೂ ಉನ್ನತಿಯಾಗುತ್ತದೆ. ನಿರ್ದೇಶಕರು, ತಂತ್ರಜ್ಞರಿಗೆ ಹೊಸ ಹುಮ್ಮಸ್ಸು ಬರುತ್ತೆ. –ಕೆ. ಎಂ. ಪ್ರಕಾಶ್, ಸಂಕಲನಕಾರ
ಮಾಸ್-ಕ್ಲಾಸ್ ಎಲ್ಲ ಜಾನರ್ ಸಿನಿಮಾ ಬರಲಿ:
2024 ವರ್ಷಾಂತ್ಯಕ್ಕೆ ಯು-ಐ, ಮ್ಯಾಕ್ಸ್ ಸಿನಿಮಾಗಳು ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿಕೊಂಡು, ಯಶಸ್ವಿ ಪ್ರದರ್ಶನ ಕಾಣುತ್ತಿವೆ. 2025ರಲ್ಲೂ ಈ ಗೆಲುವಿನ ಸಂಭ್ರಮ ಹೀಗೆ ಮುಂದುವರೆಯಲಿ. ಹೊಸ ವರ್ಷಕ್ಕೆ ಹೊಸ ಸಿನಿಮಾಗಳು ಸಾಕಷ್ಟು ಬರುತ್ತಿವೆ. ಪ್ರೇಕ್ಷಕರು ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸಿನಿಮಾ ಆನಂದಿಸಲಿದ್ದಾರೆ. ಈಗ ಕನ್ನಡದಲ್ಲಿ ಒಳ್ಳೆಯ ಕಂಟೆಂಟ್ ಸಿನಿಮಾಗಳು ಬರುತ್ತಿವೆ, ಅದಕ್ಕೆ ಪ್ರೇಕ್ಷಕರಿಂದಲೂ ಪ್ರೋತ್ಸಾಹ ಸಿಗುತ್ತಿದೆ. ಕನ್ನಡ ಸಿನಿಮಾ ಅಭಿಮಾನಿಯಾಗಿ ನನಗೆ ರೊಮ್ಯಾಂಟಿಕ್ ಡ್ರಾಮಾ ಕಥೆಗಳು ಇಷ್ಟ. ಆ ರೀತಿ ಸಿನಿಮಾ, ಮಾಸ್ ಹೀಗೆ ಎಲ್ಲ ಜಾನರ್ ಸಿನಿಮಾಗಳು ಬರಲಿ. –ರುಕ್ಮಿಣಿ ವಸಂತ್, ನಟಿ
ಹೆಚ್ಚು ಸಿನಿಮಾಗಳು ಗೆಲ್ಬೇಕು :
2025 ಕನ್ನಡ ಚಿತ್ರರಂಗಕ್ಕೆ ಒಳ್ಳೆಯದಾಗಬೇಕು. ಅದು ಸಣ್ಣ ಅಥವಾ ದೊಡ್ಡ ಸಿನಿಮಾವಿರಲಿ ಚಿತ್ರಮಂದಿ ರದಲ್ಲಿ ಓಡಬೇಕು. ಹೆಚ್ಚು ಜನರನ್ನು ತಲುಪಿದಾಗ, ಓಟಿಟಿಯವರೇ ಹುಡುಕಿಕೊಂಡು ಬರುತ್ತಾರೆ. ಅದ ಕ್ಕಾಗಿ ಒಳ್ಳೆ ಕಥೆ, ಮನರಂಜನೆಯ ಸಿನಿಮಾ ಬರಬೇಕು. ಬಂದಾಗ ಜನ ಅದರ ಬಗ್ಗೆ ಮಾತಾಡಬೇಕು. ಕನಿಷ್ಟ 5-6 ಸಿನಿಮಾ ಗಳು ಬ್ಯಾಕ್ ಟು ಬ್ಯಾಕ್ ಯಶ ಕಂಡರೆ, ಹೊಸ ಹೂಡಿಕೆದಾರರೂ ಸಿಗುತ್ತಾರೆ. ●ಸತ್ಯ ಹೆಗ್ಡೆ, ಛಾಯಾಗ್ರಾಹಕ
ಯೋಚಿಸುವ ಶೈಲಿಯೇ ಭಿನ್ನವಾಗಿರಲಿ:
ಸಿನಿಮಾಗಳಲ್ಲಿ ನಟನೆ, ಛಾಯಾಗ್ರಹಣ, ಸಂಕಲನ ಎಲ್ಲದರಲ್ಲೂ ಒಂದು ಜೋಶ್ ಇರಬೇಕು. ಸಂಗೀತದಲ್ಲೂ ಹಾಗೆ, ಹಾಡು ಬರೆಯುವು ದರಿಂದ ಸಂಗೀತ ನೀಡುವವರೆಗೆ ಒಂದು ರೀತಿಯ ಆಕ್ರಮಣಶೀಲ ಮನೋಭಾವ ಇರಬೇಕು. ನಾವು ಯೋಚನೆ ಮಾಡುವ ಶೈಲಿ ಕೂಡ ಹಾಗೆ ಇರುವುದರ ಜೊತೆಗೆ, ಸಿನಿಮಾ ಮಾಡುವವರ ಕೌಶಲ್ಯ ಹೆಚ್ಚಬೇಕು. ಕನ್ನಡ ಚಿತ್ರರಂಗಕ್ಕೆ ಹೊಸತನ್ನು ಸ್ವೀಕರಿಸುವ ಸಾಮರ್ಥ್ಯವಿದೆ. ಅದರಂತೆ ಚಿತ್ರಗಳು ನಿರ್ಮಾಣ ವಾಗಬೇಕು. –ಅಜನೀಶ್ ಲೋಕನಾಥ್, ಸಂಗೀತ ನಿರ್ದೇಶಕ