Advertisement

ವನಿತಾ ವಿಶ್ವಕಪ್‌ ಕ್ರಿಕೆಟ್‌: ಭಾರತದ ಭವಿಷ್ಯ ಇಂದೇ ನಿರ್ಧಾರ?

10:32 PM Mar 23, 2022 | Team Udayavani |

ವೆಲ್ಲಿಂಗ್ಟನ್‌: ವನಿತಾ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಭಾರತದ ನಾಕೌಟ್‌ ಪ್ರವೇಶದ ಭವಿಷ್ಯ ಗುರುವಾರವೇ ನಿರ್ಧಾರಗೊಳ್ಳುವ ಸಾಧ್ಯತೆ ಇದೆ.

Advertisement

ಅಂದಮಾತ್ರಕ್ಕೆ ಗುರುವಾರ ಭಾರತಕ್ಕೆ ಯಾವುದೇ ಪಂದ್ಯವಿಲ್ಲ. ಮಿಥಾಲಿ ಪಡೆ ತನ್ನ ಉಳಿದೊಂದು ಲೀಗ್‌ ಪಂದ್ಯವಾಡುವುದು ರವಿವಾರ. ಎದುರಾಳಿ ದಕ್ಷಿಣ ಆಫ್ರಿಕಾ. ಅದು ಲೀಗ್‌ ಹಂತದ ಕಟ್ಟಕಡೆಯ ಪಂದ್ಯವೂ ಹೌದು.

ಆದರೆ ಗುರುವಾರ ನಡೆಯುವ ದ. ಆಫ್ರಿಕಾ-ವೆಸ್ಟ್‌ ಇಂಡೀಸ್‌ ನಡುವಿನ ಲೀಗ್‌ ಪಂದ್ಯದ ಫ‌ಲಿತಾಂಶ ಭಾರತದ ಪಾಲಿಗೆ ನಿರ್ಣಾಯಕವಾಗಲಿದೆ. ಇಲ್ಲಿ ದಕ್ಷಿಣ ಆಫ್ರಿಕಾ ಗೆದ್ದರೆ ಹರಿಣಗಳ ಪಡೆಯ ಸೆಮಿಫೈನಲ್‌ ಪ್ರವೇಶ ಖಾತ್ರಿಯಾಗಲಿದೆ. ಜತೆಗೆ ಅದು ಭಾರತವನ್ನೂ ನಾಕೌಟ್‌ಗೆ ಕರೆದೊಯ್ಯುವ ಸಾಧ್ಯತೆ ಇದೆ!

ಇದನ್ನು ಗೆದ್ದರೆ ದಕ್ಷಿಣ ಆಫ್ರಿಕಾ 6 ಪಂದ್ಯಗಳಿಂದ 10 ಅಂಕ ಗಳಿಸಿದಂತಾ ಗುತ್ತದೆ. ತನ್ನ ಕೊನೆಯ ಲೀಗ್‌ ಪಂದ್ಯ ಆಡಲಿರುವ ವಿಂಡೀಸ್‌ ಅಂಕ ಆರರಲ್ಲೇ ಉಳಿಯಲಿದೆ. ಜತೆಗೆ ರನ್‌ರೇಟ್‌ ಕೂಡ ಮೈನಸ್‌ನಲ್ಲಿದೆ. 6 ಅಂಕಗಳೊಂದಿಗೆ +0.768 ರನ್‌ರೇಟ್‌ ಹೊಂದಿರುವುದು ಭಾರತಕ್ಕೊಂದು ಪ್ಲಸ್‌ ಪಾಯಿಂಟ್‌.

ಇದನ್ನೂ ಓದಿ:ಇನ್‌ಸ್ಟಾಗ್ರಾಂನಲ್ಲಿ ನಾಗಚೈತನ್ಯರನ್ನು ಅನ್ ಫಾಲೋ ಮಾಡಿದ ನಟಿ ಸಮಂತಾ

Advertisement

ರೇಸ್‌ನಲ್ಲಿರುವ ತಂಡಗಳು
ರೇಸ್‌ನಲ್ಲಿ ಉಳಿಯಲಿರುವ ಉಳಿದೆರಡು ತಂಡಗಳೆಂದರೆ ಇಂಗ್ಲೆಂಡ್‌ ಮತ್ತು ನ್ಯೂಜಿಲ್ಯಾಂಡ್‌. ಇವುಗಳಲ್ಲಿ ಇಂಗ್ಲೆಂಡ್‌ ಅಷ್ಟೇನೂ ಬಲಿಷ್ಠವಲ್ಲದ ಪಾಕಿಸ್ಥಾನ ಮತ್ತು ಬಾಂಗ್ಲಾದೇಶವನ್ನು ಎದುರಿಸಲಿಕ್ಕಿದೆ. ಎರಡನ್ನೂ ಗೆಲ್ಲುವ ಸದವಕಾಶ ಆಂಗ್ಲರ ಮುಂದಿದೆ. ಆಗ ಅಂಕ 8ಕ್ಕೆ ಏರಲಿದ್ದು, ಇಂಗ್ಲೆಂಡ್‌ ನಾಕೌಟ್‌ ಪ್ರವೇಶಿಸಲಿದೆ. ಆಂಗ್ಲರ ರನ್‌ರೇಟ್‌ ಕೂಡ ಪ್ಲಸ್‌ನಲ್ಲಿದೆ.

4 ಅಂಕ ಹೊಂದಿರುವ ಆತಿಥೇಯ ನ್ಯೂಜಿಲ್ಯಾಂಡ್‌ಗೆ ಉಳಿದಿರುವುದು ಒಂದೇ ಪಂದ್ಯ. ಎದುರಾಳಿ ಪಾಕಿಸ್ಥಾನ. ಇಲ್ಲಿ ಕಿವೀಸ್‌ ಗೆದ್ದೀತಾದರೂ ರನ್‌ರೇಟ್‌ -0.229ರಲ್ಲಿರುವುದು ಭಾರೀ ಹಿನ್ನಡೆಗೆ ಕಾರಣವಾಗಬಹುದು.
ದಕ್ಷಿಣ ಆಫ್ರಿಕಾ ಎದುರಿನ ಪಂದ್ಯದಲ್ಲಿ ಭಾರತ ಸೋತರೂ ರನ್‌ರೇಟ್‌ ಉತ್ತಮ ಮಟ್ಟದಲ್ಲಿರುವುದರಿಂದ 4ನೇ ಸ್ಥಾನಿಯಾಗಿ ಸೆಮಿಫೈನಲ್‌ ತಲುಪಲು ಸಾಧ್ಯ ಎಂಬುದು ಸದ್ಯದ ಲೆಕ್ಕಾಚಾರ. ಆದರೆ ದಕ್ಷಿಣ ಆಫ್ರಿಕಾ ವಿರುದ್ಧ ವಿಂಡೀಸ್‌ ಸೋಲುವುದು ಮುಖ್ಯ!

Advertisement

Udayavani is now on Telegram. Click here to join our channel and stay updated with the latest news.

Next