Advertisement
ಕೇಂದ್ರ ಮಾನವ ಸಂಪ ನ್ಮೂಲ ಸಚಿವಾಲಯದ ಮಾರ್ಗದರ್ಶಿ ಸೂಚಿಯನ್ವಯ ಮಾಹೆ ವಿ.ವಿ. “ನ್ಯಾಶನಲ್ ಇನ್ನೋವೇಶನ್ ಆ್ಯಂಡ್ ಸ್ಟಾರ್ಟ್‌ಅಪ್ ಪಾಲಿಸಿ-2019 ಫಾರ್ ಸ್ಟೂಡೆಂಟ್ಸ್ ಆ್ಯಂಡ್ ಫ್ಯಾಕಲ್ಟಿ: ಎ ಗೈಡಿಂಗ್ ಫ್ರೆಮ್ ವರ್ಕ್ ಫಾರ್ ಹೈಯರ್ ಎಜುಕೇಶನ್ ಇನ್‌ಸ್ಟಿಟ್ಯೂಶನ್’ ಅನ್ನು ಅಳವಡಿಸಿದೆ. ಶಿಕ್ಷಣ ಸಚಿವಾಲಯ, ಯುಜಿಸಿ, ಅಖೀಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ (ಎಐಸಿಟಿಇ)ನಂತಹ ಅತ್ಯು ನ್ನತ ನಿಯಂತ್ರಕ ಸಂಸ್ಥೆಗಳು ಈ ನೀತಿಯನ್ನು ರೂಪಿಸಿವೆ.
Related Articles
ರಂಜನ್ ಪೈ
ಮಾಹೆ ವಿ.ವಿ. ಸಂಶೋಧನೆ ಮತ್ತು ಹೊಸ ಮಾದರಿಯ ಶಿಕ್ಷಣದ ಕುರಿತು ಗಮನಹರಿಸುವ ಜತೆಗೆ ಸಮಾಜದ ಒಳಿತಿನ ಕುರಿತು ಗಮನಾರ್ಹ ಕ್ರಿಯಾಶೀಲ ಪ್ರಯತ್ನ ಮಾಡುತ್ತ ಬಂದಿದೆ. ಯುವ ಮನಸ್ಸು ಮತ್ತು ಪ್ರತಿಭೆಗಳನ್ನು ಉದ್ಯಮಶೀಲತೆಯತ್ತ ಉತ್ತೇಜಿಸುವ ನಿಟ್ಟಿನಲ್ಲಿ ಇದು ಪರಿ ಣಾಮಕಾರಿ ಹೆಜ್ಜೆ. ನ್ಯಾಶನಲ್ ಇನ್ನೋವೇಶನ್ ಆ್ಯಂಡ್ ಸ್ಟಾರ್ಟ್ ಅಪ್ ಪಾಲಿಸಿ-2019ರ ಮಾರ್ಗದರ್ಶಿ ಸೂತ್ರಗಳನ್ನು ಅನುಸರಿಸಿ ಮಾಹೆಯ ಎಲ್ಲ ಸಂಸ್ಥೆಗಳಲ್ಲಿ ಉದ್ಯಮಶೀಲತೆಯ ಪರಿಸರ ನಿರ್ಮಿಸುವ ಉದ್ದೇಶ ಹೊಂದಲಾಗಿದೆ. ಇದು ವಿದ್ಯಾರ್ಥಿಗಳು- ಬೋಧಕರಲ್ಲಿ ಕ್ರಿಯಾಶೀಲ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವಲ್ಲಿ ಸಹಾಯಕವಾಗಲಿದೆ ಎಂದು ಮಾಹೆ ಟ್ರಸ್ಟ್ , ಎಂಇಎಂಜಿ ಅಧ್ಯಕ್ಷ ಡಾ| ರಂಜನ್ ಪೈ ಹೇಳಿದ್ದಾರೆ.
Advertisement
ವಿದ್ಯಾರ್ಥಿ-ಚಾಲಿತ ಇನ್ನೋ ವೇಶನ್‌ಗಳನ್ನು ಉತ್ತೇಜಿಸುವಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳು ಮಹತ್ವದ ಪಾತ್ರ ವಹಿಸುತ್ತವೆ. 2022ನೇ ವರ್ಷದಲ್ಲಿ ಮಾಹೆಯು ವಿದ್ಯಾರ್ಥಿಗಳು, ಬೋಧಕರಲ್ಲಿ ನಾವೀನ್ಯ, ಕೌಶಲ ಮತ್ತು ಉದ್ಯಮಶೀಲತೆಯನ್ನು ಪ್ರೇರೇಪಿಸುವಲ್ಲಿ ಒತ್ತು ನೀಡುತ್ತಿದೆ. ಮಾಹೆಯು ಉದ್ಯಮಶೀಲರನ್ನು ರೂಪಿಸುವ ಶ್ರೇಷ್ಠ ಪರಂಪರೆಯನ್ನು ಹೊಂದಿದೆ. ಕ್ಯಾಂಪಸ್‌ನಲ್ಲಿರುವ ಉದಯೋನ್ಮುಖ ಉದ್ಯಮಶೀಲ ರನ್ನು ನಿರಂತರವಾಗಿ ಪ್ರೋತ್ಸಾಹಿಸಲಾ ಗು ತ್ತಿದೆ. ಇದು ದೇಶದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ಮಾಹೆ ವಿ.ವಿ. ಸಹಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್ ತಿಳಿಸಿದರು.
ಇನ್ನೋವೇಶನ್ ಸೆಂಟರ್ ತನ್ನ 15ನೇ ವರ್ಷದ ಸಂಭ್ರಮದಲ್ಲಿದ್ದರೆ, ಮಣಿಪಾಲ್ ಯೂನಿವರ್ಸಲ್ ಟೆಕ್ನಾ ಲಜಿ ಬಿಸಿನೆಸ್ ಇನ್‌ಕ್ಯೂಬೇಟರ್ (ಎಂಯುಟಿಬಿಐ) 12 ವರ್ಷಗಳನ್ನು ಪೂರೈಸುತ್ತಿದೆ. ಮಣಿಪಾಲ ಗವರ್ನ್ಮೆಂಟ್ ಆಫ್ ಕರ್ನಾಟಕ ಬಯೋ ಇನ್‌ಕ್ಯೂಬೇಟರ್‌ಗೆ 4 ವರ್ಷಗಳಾಗುತ್ತಿವೆ. ಮಾಹೆಯಲ್ಲಿ “2022′ ಅನ್ನು ದ ಇಯರ್ ಆಫ್ ಇನ್ನೋವೇಶನ್ ಎಂಟರ್‌ಪ್ರೈನರ್ ಶಿಪ್ ಇಯರ್ ಆಗಿ ಘೋಷಿಸಲು ಹೆಮ್ಮೆಯಾಗುತ್ತಿದೆ. ಪೂರ್ವ ವಿದ್ಯಾರ್ಥಿಗಳು ಯಶಸ್ವಿ ಉದ್ಯಮಿಗಳಾಗಿ ಉದ್ಯೋಗ ಸೃಷ್ಟಿಗೆ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿಗೆ ಕಾರಣರಾಗಿರುವುದು ಪ್ರಸಂಶನೀಯ. ಪೂರ್ವ ವಿದ್ಯಾರ್ಥಿ ಗಳ ಪರಂಪರೆಯನ್ನು ಬಳಸಿಕೊಳ್ಳಲಿ ದ್ದೇವೆ. ಅಲ್ಲದೆ, ಲೀಡರ್‌ಶಿಪ್ ಸೆಮಿ ನಾರ್ ಸರಣಿ ಆಯೋಜಿಸಿ ವಿದ್ಯಾರ್ಥಿ ಗಳು, ಬೋಧಕರನ್ನು ಪ್ರೋತ್ಸಾಹಿ ಸಲಿದ್ದೇವೆ. ಶೀಘ್ರವೇ ಮಾಹೆಯಲ್ಲಿ ಟೆಕ್ನಾಲಜಿ ರಿಸರ್ಚ್ ಪಾರ್ಕ್ ರೂಪು ಗೊಳ್ಳುವ ನಿರೀಕ್ಷೆಯಿದೆ ಎಂದು ಕುಲಪತಿ ಲೆ| ಜ| ಡಾ| ಎಂ.ಡಿ. ವೆಂಕಟೇಶ್ ಹೇಳಿದ್ದಾರೆ.