Advertisement

2022-23 ; ಬಿಜೆಪಿಗೆ 720 ಕೋ.ರೂ. ದೇಣಿಗೆ!

12:23 AM Dec 05, 2023 | Team Udayavani |

ಹೊಸದಿಲ್ಲಿ: 2022-23ರ ಹಣಕಾಸು ವರ್ಷದಲ್ಲಿ ಬಿಜೆಪಿಯು ವಿವಿಧ ಸಂಸ್ಥೆಗಳು, ರಾಜಕೀಯ ನಾಯಕರು, ವ್ಯಕ್ತಿಗಳು ಹಾಗೂ ಚುನಾವಣ ಟ್ರಸ್ಟ್‌ಗಳಿಂದ ಬರೋಬ್ಬರಿ 720 ಕೋಟಿ ರೂ.ಗಳ ದೇಣಿಗೆಯನ್ನು ಪಡೆದಿದೆ. ಇದೇ ಅವಧಿಯಲ್ಲಿ ಕಾಂಗ್ರೆಸ್‌ ಪಡೆದಿದ್ದು 80 ಕೋಟಿ ರೂ.ಗಳ ದೇಣಿಗೆ ಎಂದು ಚುನಾವಣ ಆಯೋಗ ತಿಳಿಸಿದೆ.

Advertisement

ಸೋಮವಾರ ಆಯೋಗವು ಕಾಂಗ್ರೆಸ್‌ ಪಕ್ಷ ನವೆಂಬರ್‌ನಲ್ಲಿ ಸಲ್ಲಿಸಿದ ದೇಣಿಗೆಯ ವಿವರಗಳನ್ನು ಬಹಿರಂಗಪಡಿಸಿದೆ. ಅದರಂತೆ, ಕಾಂಗ್ರೆಸ್‌ ಕೋಲ್ಕತಾ ಮೂಲದ ಸಮಾಜ್‌ ಎಲೆಕ್ಟೋರಲ್‌ ಟ್ರಸ್ಟ್‌ನಿಂದ 50 ಲಕ್ಷ ರೂ. ಸೇರಿದಂತೆ ಒಟ್ಟು 79.92 ಕೋಟಿ ರೂ. ದೇಣಿಗೆ ಸ್ವೀಕರಿಸಿದೆ. ಆಡಳಿತಾರೂಢ ಬಿಜೆಪಿಯು ಒಟ್ಟು 720 ಕೋಟಿ ರೂ. ದೇಣಿಗೆ ಪಡೆದಿದೆ ಎಂದು ಆಯೋಗ ಮಾಹಿತಿ ನೀಡಿದೆ. ಪ್ರತೀ ಹಣಕಾಸು ವರ್ಷದಲ್ಲಿ 20 ಸಾವಿರ ರೂ.ಗಳಿಗಿಂತ ಹೆಚ್ಚು ದೇಣಿಗೆ ನೀಡಿದವರ ವಿವರಗಳನ್ನು ಎಲ್ಲ ರಾಜಕೀಯ ಪಕ್ಷಗಳೂ ಪ್ರತಿ ವರ್ಷ ಚುನಾವಣ ಆಯೋಗಕ್ಕೆ ಸಲ್ಲಿಸಬೇಕು ಎಂಬ ನಿಯಮವಿದೆ.

Advertisement

Udayavani is now on Telegram. Click here to join our channel and stay updated with the latest news.

Next