ನವ ದೆಹಲಿ : “ರಾಯಲ್ ಎನ್ ಫೀಲ್ಡ್” ಅಂದರೇ ಯಾರಿಗಿಷ್ಟವಿಲ್ಲ ಹೇಳಿ..? ರಾಯಲ್ ಎನ್ ಫೀಲ್ಡ್ ತೆಗೆದುಕೊಳ್ಳಬೇಕು ಎಂದು ಕನಸು ಕಂಡ ಯುವಕರು ಅದೆಷ್ಟು ಮಂದಿ ಇದ್ದಾರೇನೋ.. ಆ ಎಲ್ಲಾ ಕನಸುಗಾರರಿಗೆ ರಾಯಲ್ ಎನ್ ಫೀಲ್ಡ್ ಸಂಸ್ಥೆ ತನ್ನ ಟು ವೀಲ್ಹರ್ ವೊಂದರ ಹೊಸ ಆವೃತ್ತಿಯನ್ನು ಸದ್ಯದಲ್ಲೇ ಬಿಡುಗಡೆಗೊಳಿಸುತ್ತಿದೆ. ಆ ಕುರಿತಾಗಿ ನೀವು ಕುತೂಹಲರಾಗಿದ್ದರೇ, ಇಂಟ್ರೆಸ್ಟಿಂಗ್ ಡೀಟೇಲ್ಸ್ ಇಲ್ಲಿದೆ.
ಓದಿ : ನಮ್ಮ ಫೇಸ್ ಬುಕ್ ಅನ್ನು ಮತ್ತೊಬ್ಬರು ಬಳಸುವುದನ್ನು ತಡೆಯುವುದು ಹೇಗೆ?
ರಾಯಲ್ ಎನ್ ಫೀಲ್ಡ್ ಹಿಮಾಲಯನ್ 2021 ಮೋಟರ್ ಸೈಕಲ್ ನ್ನು ಬಿಡುಗಡೆಗೊಳಿಸುವ ದಿನಾಂಕ ನಿಗದಿಯಾಗಿದೆ. ಗುರುವಾರ (ಫೆ. 11)ದಂದು ರಾಯಲ್ ಎನ್ ಫೀಲ್ಡ್ ಹಿಮಾಲಯನ್ 2021 ಬಿಡುಗಡೆಗೊಳ್ಳುತ್ತಿದೆ. ಸಣ್ಣ ಬೆಲೆ ಪರಿಷ್ಕರಣೆಯೊಂದಿಗೆ ಹಾಗೂ ಹೊಸ ಬದಲಾವಣೆಯೊಂದಿಗೆ ಅಂದಾಜು 2 ಲಕ್ಷ(ಎಕ್ಸ್ ಶೋ ರೂಮ್) ಆಸು ಪಾಸಿನ ಬೆಲೆಯಲ್ಲಿ ನಿಮಗೆ ಲಭ್ಯವಾಗಬಹುದು ಎಂದು ನಿರೀಕ್ಷಿಸಲಾಗಿದೆ.
ಟ್ರಿಪರ್ ನ್ಯಾವಿಗೇಶನ್ ಪಾಡ್, ಮೈನರ್ ಕಾಸ್ಮೆಟಿಕ್ ಅಪ್ಡೇಟ್ಸ್ ನೊಂದಿಗೆ ರಾಯಲ್ ಎನ್ ಫೀಲ್ಡ್ ಹಿಮಾಲಯನ್ 2021 ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ಉಳಿದ ಮಾಹಿತಿಯನ್ನು ಇದುವರೆಗೆ ಕಂಪೆನಿ ಬಹಿರಂಗಪಡಿಸಿಲ್ಲ. ನಾಳೆ(ಫೆ.11) ಕಂಪೆನಿಯು ಮಾರುಕಟ್ಟೆ ಬೆಲೆಯನ್ನು ಘೋಷಿಸುವ ಸಂದರ್ಭದಲ್ಲಿ ಹೊಸ ಬದಲಾವಣೆಯ ಬಗ್ಗೆ ಮಾಹಿತಿ ನೀಡಬಹುದು ಎಂದು ವರದಿಯಾಗಿದೆ.
ಓದಿ : ದೇಶದಲ್ಲಿ ಆರಂಭವಾಗಲಿದೆ 5G ಸೇವೆ : ದೂರ ಸಂಪರ್ಕ ಇಲಾಖೆ
ಹೊಸ ಶೈಲಿಯ ನಿರೀಕ್ಷೆಯೊಂದಿಗೆ ಹಿಮಾಲಯನ್ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ಎಂದು ಹೇಳಲಾಗುತ್ತಿದೆ. ವಿನ್ಯಾಸದಲ್ಲಿ ಸಣ್ಣ ಬದಲಾವಣೆ ಹಾಗೂ ಹೊಸ ಬಣ್ಣಗಳಲ್ಲಿ ರಾಯಲ್ ಎನ್ ಫೀಲ್ಡ್ ಹಿಮಾಲಯನ್ 2021 ಬರಲಿದೆ. ಇನ್ನು, ಟ್ಯಾಂಕ್ ಗಾರ್ಡ್ ನಲ್ಲಿನ ಸಣ್ಣ ಬದಲಾವಣೆಗಳು, ಹೆಚ್ಚುವರಿ ಇಂಧನ ಟ್ಯಾಂಕ್, ಲಗೇಜ್ ರ್ಯಾಕ್ ಸೇರಿ ಇನ್ನಿತರ ಹೊಸ ಬದಲಾವಣೆಗಳಿರಲಿವೆ ಎಂಬ ನಿರೀಕ್ಷೆಗಳು ಮಾರುಕಟ್ಟೆಯ ವಲಯದಲ್ಲಿದೆ.
ಇನ್ನು, ರಾಯಲ್ ಎನ್ ಫೀಲ್ಡ್ ಹಿಮಾಲಯನ್ 2021 ಮಾಡೆಲ್ ನಲ್ಲಿ ಮೆಕಾನಿಕಲಿ(ಯಾಂತ್ರಿಕವಾಗಿ) ಯಾವುದೇ ಹೊಸ ಬದಲಾವಣೆಗಳು ಇರುವುದಿಲ್ಲ. ಹಿಂದಿನ ಮಾಡೆಲ್ ನಲ್ಲಿ ಇದ್ದ ಹಾಗೆಯೇ ಇರಲಿದ್ದು, ಬೆಲೆಯಲ್ಲಿ ಸ್ವಲ್ಪ ಮಟ್ಟಿಗೆ ಹೆಚ್ಚಳವಾಗಬಹುದು ಎಂದು ಹೇಳಲಾಗಿದೆ.
ಓದಿ : ಸುಳ್ಳು ಸುದ್ದಿಗಳನ್ನು ಹರಡಿಸುತ್ತಿದ್ದ 500 ಖಾತೆಗಳನ್ನು ಅಮಾನತುಗೊಳಿಸಿದ ಟ್ವೀಟರ್