Advertisement
ಹೊಸ ವರ್ಷದ ದಿವಸ ನಾವು ಬಾಲ್ಯದ ದಿನಗಳಿಂದ ಇವತ್ತಿನ ದಿನದವರೆಗೂ ಸಹ ಹೊಸ ವರುಷ ಎಂದರೆ ಬಹಳ ಉತ್ಸಾಹಿಗಳಾಗಿ ಸ್ವಚ್ಛಂದ ಮನಸ್ಸಿಗೆ ಏನೆಲ್ಲಾ ಬಯಕೆಗಳನ್ನು ಬಯಸಿ ಅನುಭವಿಸುವಂತಹ ಸುಂದರ ದಿನ ಹೊಸ ವರ್ಷದ ದಿನ.
Related Articles
Advertisement
ಹೊಸ ವರುಷ ಎಂದರೆ ಎಲ್ಲರಿಗೂ ಸಹ ಮನೆಯ ಆಚೆ ಎಲ್ಲೋ ಮಾದಕ ವಸ್ತುಗಳನ್ನು ಸೇವನೆ ಮಾಡಿ ಸುದಿನವನ್ನು ತಮಗೆ ಮನಬಂದಂತೆ ಅನುಭವಿಸುತ್ತಾರೆ. ಇವುಗಳಿಗೆ ಎಡೆ ಮಾಡಿಕೊಡದೆ ನೂತನ ದಿವಸವನ್ನು ನಾವು ಮಾಡಿದಂತಹ ತಪ್ಪುಗಳನ್ನು ಮರೆತು ಒಳ್ಳೆಯ ಮನುಷ್ಯರಾಗಿ ಇತರರಿಗೆ ಮಾರ್ಗದರ್ಶಕರಾಗಿ ಬೆಳವಣಿಗೆಯನ್ನು ಮಾಡಿಕೊಳ್ಳುವುದು ಬಹಳ ಸಂತಸಕರ ವಾದಂತಹ ಸಂಗತಿಯಾಗಿರುತ್ತದೆ.
ಇದರ ಜೊತೆಗೆ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಂಡು ಉತ್ತಮ ಸಮಾಜದಲ್ಲಿ ನಮ್ಮ ಪಾತ್ರವೂ ಸಹ ಬಹಳ ಮುಖ್ಯ. ಹಾಗಾಗಿ ನೂತನ ವರುಷವನ್ನು ಕೇವಲ ಕ್ಷಣಿಕ ಆಸೆ-ಆಕಾಂಕ್ಷೆಗಳಿಗೆ ತಮ್ಮನ್ನು ತಾವು ಬಲಿಪಶು ಮಾಡಿಕೊಳ್ಳದೆ ಕೋವಿಡ್ ಕಾಲದಲ್ಲಿ ಕಲಿತಂತಹ ಪಾಠವನ್ನು ಯೋಚಿಸಿ ಆ ಗಳಿಗೆಯಲ್ಲಿ ಅನುಭವಿಸಿದಂತಹ ಕಠೋರ ದಿನಗಳಿಗೆ ಅಂತ್ಯಹಾಡಿ ನೂತನ ವರ್ಷದ ಆರಂಭದ ದಿನವನ್ನು ಹೊಸ ಮನುಷ್ಯರಾಗಿ ಉತ್ತಮ ಪ್ರಜೆಯಾಗಿ ಬೆಳವಣಿಗೆಯ ಹಾದಿಯನ್ನು ಕಂಡುಕೊಳ್ಳುವುದು ನಿಜಕ್ಕೂ ಪುಣ್ಯದ ಕೆಲಸ.
ನೂತನ ವರ್ಷವನ್ನು ಹಿಂದಿನ ವರುಷದಲ್ಲಿ ಸ್ವಾಗತಿಸಿದ ಹಾಗೆ ಈ ವರ್ಷವೂ ಸ್ವಾಗತಿಸಲು ಸಾಧ್ಯವಾಗುವುದಿಲ್ಲ ಆದರೂ ಸಹ ಎಲ್ಲರಿಗೂ ನೂತನ ದಿನ ಸಂತೋಷಕರವಾದ ದಿನ ಹಾಗಾಗಿ ತಮ್ಮ ಆರೋಗ್ಯದ ಕಡೆಯೂ ಗಮನಹರಿಸಿ ಬಹಳ ಜಾಗರೂಕತೆಯಿಂದ ಆಚರಣೆ ಮಾಡಬೇಕು. ಸರಿಯಾದ ರೀತಿಯಲ್ಲಿ ಮುಖಗವಸು (ಮಾಸ್ಕ್) ಧರಿಸಿಕೊಂಡು ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ನೂತನ ವರ್ಷವನ್ನು ಬರಮಾಡಿಕೊಳ್ಳುಬೇಕು ಯುವಜನತೆ ತಮ್ಮ ಹಾಗೂ ಕುಟುಂಬದ ಆರೋಗ್ಯಕ್ಕಾಗಿ ಎಲ್ಲಾ ರೀತಿಯ ಮೋಜು-ಮಸ್ತಿಗಳನ್ನು ಮರೆತು ಒಳ್ಳೆಯ ಕಾರ್ಯಗಳನ್ನು ಮಾಡುವುದರ ಮೂಲಕ ನೂತನ ವರುಷವನ್ನು ಬರಮಾಡಿಕೊಳ್ಳುವುದು ಸರಿ.
ಮತ್ತೊಮ್ಮೆ ಎಲ್ಲರಿಗೂ ನೂತನ ವರ್ಷದ ಶುಭಾಶಯಗಳು…
ಉಲ್ಲಾಸ್ ಎನ್.ಎಂ. ನಾಗವಳ್ಳಿ
ಪತ್ರಿಕೋದ್ಯಮ ವಿದ್ಯಾರ್ಥಿ
ಮಾನಸಗಂಗೋತ್ರಿ, ಮೈಸೂರು.