Advertisement

ಮೂವರಿಗೆ ಭೌತಶಾಸ್ತ್ರ ನೊಬೆಲ್‌

08:30 AM Oct 03, 2018 | Team Udayavani |

ಸ್ಟಾಕ್‌ಹೋಮ್‌: 2018ರ ಭೌತಶಾಸ್ತ್ರ ನೊಬೆಲ್‌ ಅನ್ನು ಲೇಸರ್‌ ಕ್ಷೇತ್ರದಲ್ಲಿ ನಡೆಸಿದ ಸಂಶೋಧನೆಗಾಗಿ ಮೂವರಿಗೆ ನೀಡಲು ನಿರ್ಧರಿಸಲಾಗಿದೆ. ಅಮೆರಿಕದ ಆರ್ಥರ್‌ ಆಶ್ಕಿನ್‌, ಫ್ರಾನ್ಸ್‌ನ ಗೆರಾರ್ಡ್‌ ಮೌರೌ ಮತ್ತು ಕೆನಡಾದ ಡೊನ್ನಾ ಸ್ಟ್ರಿಕ್‌ಲಾಂಡ್‌ ಈ ಪುರಸ್ಕಾರ ಪಡೆದಿದ್ದಾರೆ. 55 ವರ್ಷಗಳ ಬಳಿಕ ಮಹಿಳೆಯೊಬ್ಬರಿಗೆ (ಡೊನ್ನಾ) ಭೌತಶಾಸ್ತ್ರ ನೊಬೆಲ್‌ ನೀಡಲಾಗಿದೆ. ಲೇಸರ್‌ ಕಿರಣದ ಬೆರಳುಗಳ ಮೂಲಕ ಅಣು-ಕಣಗಳು, ವೈರಸ್‌ಗಳು ಹಾಗೂ ಇತರ ಜೀವ ಕೋಶಗಳನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಚಲಿಸುವಂತೆ ಮಾಡುವ ಆಪ್ಟಿಕಲ್‌ ಟ್ವೀಜರ್‌ಗಳ ಸಂಶೋಧನೆ ನಡೆಸಿದ್ದಕ್ಕಾಗಿ ಆಶ್ಕಿನ್‌ಗೆ ಈ ಪುರಸ್ಕಾರ ನೀಡಲಾಗಿದೆ. ಅತ್ಯಂತ ಸಣ್ಣದಾದ ಆಪ್ಟಿಕಲ್‌ ಪಲ್ಸ್‌ಗಳನ್ನು ಉತ್ಪಾದಿಸುವ ವಿಧಾನವನ್ನು ಮೌರೌ ಹಾಗೂ ಸ್ಟ್ರಿಕ್‌ಲ್ಯಾಂಡ್‌ ಕಂಡು ಹಿಡಿದಿದ್ದಾರೆ. ಇವರು ಕಂಡುಕೊಂಡ ಈ ವಿಧಾನವನ್ನು ಈಗ ಕಣ್ಣಿನ ಶಸ್ತ್ರಚಿಕಿತ್ಸೆಯಲ್ಲಿ ಬಳಸಲಾಗುತ್ತಿದೆ. ಎಕನಾಮಿಕ್ಸ್‌ನಲ್ಲಿ ಸಾಧನೆಗೈದವರಿಗೆ ಅ.8ರಂದು ಪುರಸ್ಕಾರ ನೀಡಲಾಗುತ್ತದೆ. 

Advertisement

ಲೈಂಗಿಕ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ, 1949ರ ಅನಂತರ ಇದೇ ಮೊದಲ ಬಾರಿಗೆ ಸಾಹಿತ್ಯ ನೊಬೆಲ್‌ ಘೋಷಣೆಯನ್ನು ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next