ಶ್ರೀನಗರ: ಖಚಿತ ಮಾಹಿತಿ ಮೇರೆಗೆ ಕಾಶ್ಮೀರದ ಉರಿ ಸೇನಾನೆಲೆಯಲ್ಲಿ ಜಂಟಿ ಕಾರ್ಯಾ ಚರಣೆಗಿಳಿದ ಭಾರತೀಯ ಸೇನಾ ಪಡೆ ಹಾಗೂ ಪೊಲೀಸರು ಮೂವರು ಉಗ್ರರನ್ನು ಹೊಡೆದು ರುಳಿಸಿದ್ದಾರೆ. ಕಳೆದ ವರ್ಷ ಇದೇ ದಿನ ನಡೆದ ದಾಳಿ ಮಾದರಿಯಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಉಗ್ರರ ಯತ್ನ ವಿಫಲವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಾಳಿ ಸಂಚಿನ ಬಗ್ಗೆ ಮಾಹಿತಿ ಸಿಕ್ಕಿರುವ ಹಿನ್ನೆಲೆಯಲ್ಲಿ ಸೇನಾ ಪಡೆ ಹಾಗೂ ಪೊಲೀಸರು ಬೆಳಗ್ಗೆಯಿಂದಲೇ ಉರಿ ಸೆಕ್ಟರ್‌ನ ಕಾಲ್ಗೆ„ ಪ್ರದೇಶದಿಂದ ಕಾರ್ಯಾಚರಣೆ ಆರಂಭಿಸಿ ದರು. ಅಡಗಿ ಕುಳಿತಿದ್ದ ಉಗ್ರರು ತಪ್ಪಿಸಿಕೊಳ್ಳಲು ಸಾಧ್ಯವಾಗದೇ ಗುಂಡಿನ ದಾಳಿ ನಡೆಸಲಾರಂ ಭಿಸಿದರು. ಪ್ರತಿದಾಳಿ ನಡೆಸಿದ ಸೇನಾ ಪಡೆ ಮೂವರು ಉಗ್ರರನ್ನು ಹೊಡೆದುರುಳಿಸಿದೆ.
ಕಾರ್ಯಾಚರಣೆಯ ವೇಳೆ ಒಬ್ಬ ಯೋಧ ಗಾಯಗೊಂಡಿದ್ದಾರೆ. ಅವರಿಗೆ ಸೇನಾ ಆಸ್ಪತ್ರೆ ಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಿಜಿಪಿ ಎಸ್.ಪಿ. ವೈದ್ ತಿಳಿಸಿದ್ದಾರೆ. ಉಗ್ರವಾದಿಗಳು ಆತ್ಮಾಹುತಿ ದಾಳಿಗೆ ಸಂಚು ಮಾಡಿದ್ದರು. ಆದರೆ ಅದು ಫಲಿಸದೇ ಇದ್ದು ದರಿಂದ ಅಡಗಿ ಕುಳಿತಿದ್ದರು. ಕಾರ್ಯಾಚರಣೆ ವೇಳೆ ಏನೂ ಮಾಡಲು ಸಾಧ್ಯವಾಗದೇ ಗುಂಡಿನ ದಾಳಿಗೆ ಮುಂದಾದರು ಎಂದು ತಿಳಿಸಿದ್ದಾರೆ. ಕಳೆದ ವರ್ಷ ಉರಿಯಲ್ಲಿ ನಡೆದ ಉಗ್ರರ ದಾಳಿಯಲ್ಲಿ 19 ಮಂದಿ ಯೋಧರು ಹುತಾತ್ಮರಾಗಿದ್ದರು.
ಗಾರ್ಡಿಯನ್ ಡ್ರೋನ್ ಖರೀದಿಗೆ ಸಿದ್ಧತೆ: ದಕ್ಷಿಣ ಚೀನಾದ ಸಮುದ್ರದಲ್ಲಿ ಕಾರ್ಯಾಚ ರಣೆಗೆ ಅಮೆರಿಕ ಅಧ್ಯಕ್ಷ ಟ್ರಂಪ್ ಗ್ರೀನ್ ಸಿಗ್ನಲ್ ನೀಡಿರುವ ಬೆನ್ನಲ್ಲೇ ಈಗ ಭಾರತ ಅಮೆರಿಕ ಜತೆಗಿನ ರಕ್ಷಣಾ ಬಾಂಧವ್ಯ ವೃದ್ಧಿಸಿಕೊಳ್ಳಲು ಮುಂದಾಗಿದೆ.
ಅತ್ಯಾಧುನಿಕ ತಂತ್ರಜ್ಞಾನದ ರಿಮೋಟ್ ಕಂಟ್ರೋಲ್ 22 ಸೀ ಗಾರ್ಡಿಯನ್ ಯುದ್ಧ ವಿಮಾನವನ್ನು ಖರೀದಿಸಲು ಭಾರತ ಸಿದ್ಧತೆ ನಡೆಸಿದೆ. 13 ಸಾವಿರ ಕೋಟಿ ರೂ. ನೀಡಿ ಈ “ಡ್ರೋನ್’ ಕೊಂಡುಕೊಂಡಲ್ಲಿ ಭಾರತದ ನೌಕಾ ಸೇನಾ ಬಲ ದುಪ್ಪಟ್ಟು ಆಗಲಿದೆ.