2018-19ನೇ ಹಣಕಾಸು ವರ್ಷದಲ್ಲಿ 2,000 ರೂ. ನೋಟುಗಳ ಸಂಖ್ಯೆ ಮತ್ತು ಮೌಲ್ಯದಲ್ಲಿ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದ್ದು, ಸದ್ದಿಲ್ಲದೆ ಆರ್‌ಬಿಐ ಈ ನೋಟುಗಳ ಪ್ರಮಾಣವನ್ನು ಕಡಿತ ಮಾಡುತ್ತಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ. ಸ್ವತಃ ಗುರುವಾರ ಬಿಡುಗಡೆಯಾದ ಆರ್‌ಬಿಐನ ವಾರ್ಷಿಕ ವರದಿಯಲ್ಲೇ ನೋಟುಗಳ ಸಂಖ್ಯೆ ಮತ್ತು ಇವುಗಳ ಮೌಲ್ಯ ಕಡಿಮೆಯಾಗಿರುವುದು ಪ್ರಸ್ತಾವವಾಗಿದೆ.
Advertisement
2016ರ ನ. 8ರಂದು ಪ್ರಧಾನಿ ನರೇಂದ್ರ ಮೋದಿ ಅವರು 500 ಮತ್ತು 1,000 ಮುಖಬೆಲೆಯ ನೋಟುಗಳನ್ನು ಅಮಾನ್ಯ ಮಾಡಿದ ಬಳಿಕ ಜನರ ಅನುಕೂಲಕ್ಕಾಗಿ ಆರ್‌ಬಿಐ 2,000 ರೂ. ನೋಟುಗಳನ್ನು ಪರಿಚಯಿಸಿತ್ತು. ಆದರೆ ಅನಂತರದ ಹಣಕಾಸು ವರ್ಷಗಳಲ್ಲಿ 2,000 ರೂ. ನೋಟುಗಳ ಸಂಖ್ಯೆಯಲ್ಲಿ ಕಡಿತ ಮಾಡುತ್ತಿರುವ ಆರ್‌ಬಿಐ ಮುಂದೊಂದು ದಿನ ಸಂಪೂರ್ಣವಾಗಿ ಇದನ್ನು ವಾಪಸ್ ಪಡೆಯಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಆರ್‌ಬಿಐನ ವಾರ್ಷಿಕ ವರದಿಯಲ್ಲಿ ವಾರ್ನಿಷ್ ಲೇಪಿತ ಹೊಸ 100 ರೂ. ನೋಟುಗಳನ್ನು ಪರಿಚಯಿಸುವ ಬಗ್ಗೆ ಪ್ರಸ್ತಾವಿಸಲಾಗಿದೆ. ದೀರ್ಘಾವಧಿಗೆ ಬಾಳಿಕೆ ಬರುವ ಸಂಬಂಧ ವಿಶೇಷ ದ್ರವ ಲೇಪಿತ ನೋಟುಗಳನ್ನು ಪರಿಚಯಿಸಲು ಆರ್‌ಬಿಐ ಮುಂದಾಗಿದೆ.