Advertisement

ಕೇರಳ: 20 ಸಾವಿರ ಕೋಟಿ ಕೋವಿಡ್ ಬಜೆಟ್‌ : ವಿತ್ತ ಸಚಿವ ಕೆ.ಎನ್‌.ಬಾಲಗೋಪಾಲ್‌ ಹೇಳಿಕೆ

08:54 PM Jun 04, 2021 | Team Udayavani |

ತಿರುವನಂತಪುರ: ಕೇರಳ ಸರ್ಕಾರ 20 ಸಾವಿರ ಕೋಟಿ ರೂ. ಮೌಲ್ಯದ ಕೊರೊನಾ ಪ್ಯಾಕೆಜ್‌ ಘೋಷಣೆ ಮಾಡಿದೆ. ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಿಕೆ, ಆಹಾರ, ಜೀವನಮಟ್ಟ ಸುಧಾರಣೆಗೆ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ.

Advertisement

ವಿತ್ತ ಸಚಿವ ಕೆ.ಎನ್‌.ಬಾಲಗೋಪಾಲ್‌ ತಮ್ಮ ಬಜೆಟ್‌ ಭಾಷಣದಲ್ಲಿ 1,500 ಕೋಟಿ ರೂ.ಗಳನ್ನು 18 ವರ್ಷ ಮೇಲ್ಪಟ್ಟವರಿಗೆ ಉಸಿತ ಲಸಿಕೆ ನೀಡಲು ಮತ್ತು ಇತರ ವ್ಯವಸ್ಥೆ ಪೂರೈಕೆಗಾಗಿ ಮೀಸಲಿಟ್ಟಿರುವುದಾಗಿ ಹೇಳಿದ್ದಾರೆ.

2,800 ಕೋಟಿ ರೂ.ಗಳನ್ನು ಆರೋಗ್ಯ ತುರ್ತು ಪರಿಸ್ಥಿತಿ ಎದುರಿಸಲು, 8,890 ಕೋಟಿ ರೂ.ಗಳನ್ನು ಜೀವನಾಧಾರ ಕಳೆದುಕೊಂಡವರಿಗೆ ನೇರ ನಗದು ವರ್ಗಾವಣೆ ಮಾಡಲು ಮೀಸಲಿಡಲಾಗಿದೆ. ಸೋಂಕಿನ 3ನೇ ಅಲೆ ಎದುರಿಸಲು ಆರು ಅಂಶಗಳ ಸೂತ್ರವನ್ನೂ ಪ್ರಕಟಿಸಲಾಗಿದೆ. ಮೊದಲ ಬಾರಿಗೆ ಶಾಸಕರಾಗಿ, ಸಚಿವರಾಗಿರುವ ಬಾಲಗೋಪಾಲ್‌ ಯಾವುದೇ ಹೊಸ ತೆರಿಗೆಯನ್ನು ಪ್ರಸ್ತಾಪಿಸಿಲ್ಲ.

ಇದನ್ನೂ ಓದಿ :ರಾಜ್ಯಕ್ಕೆ 9750 ವಯಲ್ಸ್ ಕಪ್ಪು ಶಿಲೀಂಧ್ರ ಔಷಧ ಹಂಚಿಕೆ : ಕೇಂದ್ರ ಸಚಿವ ಸದಾನಂದ ಗೌಡ

Advertisement

Udayavani is now on Telegram. Click here to join our channel and stay updated with the latest news.

Next