Advertisement

ತುರ್ತು ಸಂಖ್ಯೆಗೆ 20 ರಾಜ್ಯಗಳ ಸೇರ್ಪಡೆ

12:06 AM Apr 20, 2019 | Team Udayavani |

ಹೊಸದಿಲ್ಲಿ: ಆಪತ್ತಿನಲ್ಲಿರುವವರಿಗೆ ತುರ್ತು ಸಹಾಯ ಮಾಡುವ ಉದ್ದೇಶದಿಂದ ಸ್ಥಾಪಿಸಲಾದ 112 ತುರ್ತು ಸಹಾಯವಾಣಿಗೆ ಈಗಾಗಲೇ ಕರ್ನಾಟಕ ಹೊರತು ಪಡಿಸಿ 20 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸೇರ್ಪಡೆ ಯಾಗಿವೆ. ಈ 112 ಸಹಾಯ ವಾಣಿಯಲ್ಲಿ ಪೊಲೀಸ್‌, ಅಗ್ನಿಶಾಮಕ ದಳ ಮತ್ತು ಮಹಿಳಾ ಸಹಾಯವಾಣಿಯೂ ಸೇರಿ ರುತ್ತವೆ. ಕೇಂದ್ರ ಸರಕಾರದ ನಿರ್ಭಯಾ ನಿಧಿ ಅಡಿಯಲ್ಲಿ ಈ ಯೋಜನೆ ಜಾರಿಗೊಳಿ ಸಲಾಗುತ್ತಿದೆ. ಅಮೆರಿಕದಲ್ಲಿರುವ 911 ಸಹಾಯ ವಾಣಿಯ ರೀತಿಯಲ್ಲೇ ಇದನ್ನು ಸ್ಥಾಪಿಸಲಾಗಿದೆ. 112 ಗೆ ಕರೆ ಮಾಡಿದರೆ ಅಥವಾ ಸ್ಮಾರ್ಟ್‌ಫೋನ್‌ಗಳಲ್ಲಿ ಮೂರು ಬಾರಿ ಪವರ್‌ ಬಟನ್‌ ಒತ್ತಿದರೆ ತುರ್ತು ಕರೆ ರವಾನೆಯಾ ಗುತ್ತದೆ. ಇದರೊಂದಿಗೆ ವ್ಯಕ್ತಿಯ ಸ್ಥಳದ ವಿವರವೂ ಪೊಲೀಸರಿಗೆ ಲಭ್ಯ ವಾಗುತ್ತದೆ. 278 ಕೋಟಿ ರೂ. ವೆಚ್ಚದಲ್ಲಿ ಈ ಸಹಾಯವಾಣಿಯನ್ನು ಸ್ಥಾಪಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next