Advertisement

20 ಪಾಕ್‌ ಫೈಟರ್‌ ಜೆಟ್‌ಗಳಿಂದ ಭಾರತ ವಾಯು ಪ್ರದೇಶ ಉಲ್ಲಂಘನೆ

10:25 AM Feb 28, 2019 | Team Udayavani |

ಹೊಸದಿಲ್ಲಿ : ಪಾಕ್‌ ವಾಯು ಪಡೆಯ ಸುಮಾರು 20 ಫೈಟರ್‌ ಜೆಟ್‌ಗಳು ನಿನ್ನೆ ಬುಧವಾರ ಭಾರತೀಯ ವಾಯು ಪ್ರದೇಶವನ್ನು ಉಲ್ಲಂಘಿಸಿ ಒಳ ಬಂದಿವೆ ಮತ್ತು ಅವಷ್ಟನ್ನೂ ಭಾರತೀಯ ವಾಯು ಪಡೆ ಹಿಮ್ಮೆಟ್ಟಿಸಿದೆ ಎಂದು ಸೇನಾ ಮೂಲಗಳು ಹೇಳಿವೆ. 

Advertisement

ಪಾಕಿಸ್ಥಾನ ಇಂದು ಜಮ್ಮು ಕಾಶ್ಮೀರದ ನೌಶೇರಾ ವಲಯದಲ್ಲಿ ಭಾರೀ ಮೋಟಾರ್‌ಗಳನ್ನು ಬಳಸಿ ಫೈರಿಂಗ್‌ ನಡೆಸಿದೆ. ಭಾರತೀಯ ಪಡೆಗಳು ಇದಕ್ಕೆ ಅತ್ಯಂತ ಪರಿಣಾಮಕಾರಿಯಾದ ಉತ್ತರ ನೀಡಿವೆ ಎಂದು ತಿಳಿದು ಬಂದಿದೆ. ಭಾರತದ ಕಡೆಯಲ್ಲಿ ಯಾವುದೇ ಸಾವು ನೋವು, ಗಾಯ ಉಂಟಾಗಿಲ್ಲ ಎಂದು ವರದಿ ತಿಳಿಸಿದೆ.

ಪಾಕ್‌ ವಿದೇಶ ಸಚಿವ ಎಸ್‌ ಎಂ ಕುರೇಶಿ ಅವರು ಯುಎಇ ಅಬುಧಾಬಿಯಲ್ಲಿನ ಇಸ್ಲಾಮಿಕ್‌ ಸಹಕಾರ ಸಂಘಟನೆಯ ಸಮಾವೇಶದ ಪಾರ್ಶ್ವದಲ್ಲಿ ಭಾರತದ ವಿದೇಶ ಸಚಿವ ಸುಶ್ಮಾ ಸ್ವರಾಜ್‌ ಅವರನ್ನು ಭೇಟಿಯಾಗುತ್ತಾರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಕುರೇಶಿ ಅವರು, “ಓಐಸಿ ಸಭೆಯಲ್ಲಿ  ಭಾರತ ವಿದೇಶ ಸಚಿವೆ ಸುಶ್ಮಾ ಸ್ವರಾಜ್‌ ಅವರನ್ನು ಭೇಟಿಯಾಗಲು ನಾನು ಹಿಂಜರಿಯುವುದಿಲ್ಲ; ಆದರೆ ಉಭಯ ದೇಶಗಳ ನಡುವಿನ ಬಿಕ್ಕಟ್ಟು ಶಮನ ಮಾತುಕತೆಗೆ ಅದು ಸೂಕ್ತ ವೇದಿಕೆಯಲ್ಲ’ ಎಂದು ಹೇಳಿದರು. 

ಈ ನಡುವೆ ಪಾಕ್‌ ವಿದೇಶಾಂಗ ಕಾರ್ಯಾಲಯ, “ಐಎಎಫ್ ಪೈಲಟ್‌ ಸುರಕ್ಷಿತನಿದ್ದು ಆರೋಗ್ಯದಿಂದ್ದಾರೆ. ಆತನ ಯುದ್ಧ ಕೈದಿಯ ಸ್ಥಾನಮಾನದ ಬಗ್ಗೆ ಇನ್ನೆರಡು ದಿನಗಳಲ್ಲಿ ನಿರ್ಧರಿಸಲಾಗುವುದು’ ಎಂದು ಹೇಳಿದೆ. 

Advertisement

Udayavani is now on Telegram. Click here to join our channel and stay updated with the latest news.

Next