ಬೆಂಗಳೂರು: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಟಿಕೆಟ್ ಕಾಯ್ದಿರಿಸುವ ಕೇಂದ್ರದ ಮುಂಭಾಗ ಪ್ರಯಾಣಿಕರೊಬ್ಬರು ಮರೆತು ಬಿಟ್ಟು ಹೋಗಿದ್ದ ಸುಮಾರು 20 ಲಕ್ಷ ರೂ. ಮೌಲ್ಯದ ಚಿನ್ನಾಭರಣವಿದ್ದ ಸೂಟ್ ಕೇಸ್ ಅನ್ನು ನಗರ ರೈಲ್ವೆ ಪೊಲೀಸ್ ಠಾಣೆ ಗೃಹ ರಕ್ಷಕ ಸಿಬ್ಬಂದಿಯೊಬ್ಬರು ಪತ್ತೆ ಹಚ್ಚಿ ವಾರಸುದಾರರಿಗೆ ಹಿಂದಿರುಗಿಸಿದ್ದಾರೆ. ಈ ಮೂಲಕ ಪ್ರಾಮಾಣಿಕತೆ ಪ್ರಜ್ಞೆ ಮೆರೆದಿದ್ದಾರೆ.
ಇದನ್ನೂ ಓದಿ:ಜಮ್ಮು-ಕಾಶ್ಮೀರ: ತಿಲಕ, ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರಿಗೆ ಥಳಿತ, ಶಿಕ್ಷಕ ಅಮಾನತು
ಹೊಂದಸಂದ್ರ ನಿವಾಸಿ ರಮೇಶ್ ಚಂದ್ ಎಂಬುವವರು ಮಂಗಳವಾರ ರಾತ್ರಿ 9.30ರ ಸುಮಾರಿಗೆ ಕುಟುಂಬ ಸಹಿತ ರೈಲಿನಲ್ಲಿ ಅಜ್ಮಿರ್‌ಗೆ ತೆರಳಲು ಮೆಜೆ ಸ್ಟಿಕ್ ರೈಲು ನಿಲ್ದಾಣಕ್ಕೆ ಬಂದಿದ್ದರು. ಈ ವೇಳೆ 20 ಲಗೇಜ್ ಬ್ಯಾಗ್‌ಗಳ ಪೈಕಿ ಒಂದು ಸೂಟ್ ಕೇಸ್ ಅನ್ನು ರೈಲು ನಿಲ್ದಾಣದ ಹಿಂಭಾಗದ ಪ್ರವೇಶ ದ್ವಾರದ ಬಳಿಯ ಟಿಕೆಟ್ ಕಾಯ್ದಿರಿಸುವ ಕೌಂಟರ್ ಬಳಿ ಮರೆತು ಬಿಟ್ಟು ಹೋಗಿದ್ದರು.
ಎರಡು ಗಂಟೆ ಬಳಿಕ ನೋಡಿಕೊಂಡಾಗ ಸುಮಾರು 20 ಲಕ್ಷ ರೂ. ಮೌಲ್ಯದ 350 ಗ್ರಾಂ ಚಿನ್ನಾಭರಣವಿದ್ದ ಸೂಟ್‌ಕೇಸ್ ಇಲ್ಲದಿರುವುದು ಗಮನಕ್ಕೆ ಬಂದಿದೆ. ಕೂಡಲೇ ನಿಲ್ದಾಣದ ಎಲ್ಲೆಡೆ ಹುಡುಕಾಡಿದ್ದು, ಎಲ್ಲೂ ಪತ್ತೆಯಾಗಿಲ್ಲ. ಬಳಿಕ ನಗರ ರೈಲ್ವೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಗೃಹರಕ್ಷಕ ಸಿಬ್ಬಂದಿ ಕಾರ್ಯಕ್ಕೆ ಶ್ಲಾಘನೆ: ಈ ನಡುವೆ ರೈಲು ನಿಲ್ದಾಣದ ಟಿಕೆಟ್ ಕಾಯ್ದಿರಿಸುವ ಕೌಂಟರ್ ಬಳಿ ವಾರುಸುದಾರರು ಇಲ್ಲದೆ ಬಿದ್ದಿದ್ದ ಸೂಟ್‌ಕೇಸ್ ಗಮನಿಸಿರುವ ಗೃಹರಕ್ಷಕ ಸಿಬ್ಬಂದಿ ಗುರುರಾಜ್ ಕೂಡಲೇ ಆ ಸೂಟ್‌ಕೇಸ್ ಅನ್ನು ವಶಕ್ಕೆ ಪಡೆದು ನಗರ ರೈಲ್ವೆ ಪೊಲೀಸ್ ಠಾಣೆಗೆ ತಂದು ಒಪ್ಪಿಸಿದ್ದಾರೆ.
ಬಳಿಕ ಅದನ್ನು ತೆರೆದು ನೋಡಿದಾಗ, ಚಿನ್ನಾಭರಣಗಳು ಇರುವುದು ಬೆಳಕಿಗೆ ಬಂದಿದೆ. ಬಳಿಕ ಸೂಟ್‌ಕೋಸ್‌ನ ಮಾಲಿಕ ರಮೇಶ್ ಚಂದ್‌ರನ್ನು ಸಂಪರ್ಕಿಸಿ ಸೂಟ್‌ಕೇಸ್ ಅನ್ನು ಹಿಂದಿರುಗಿಸಲಾಗಿದೆ. ಸೂಟ್‌ಕೇಸ್‌ನನ್ನು ಪೊಲೀಸ್ ಠಾಣೆಗೆ ತಂದು ಒಪ್ಪಿಸಿದ ಗೃಹರಕ್ಷ ಸಿಬ್ಬಂದಿ ಕಾರ್ಯಕ್ಕೆ ರೈಲ್ವೆ ಪೊಲೀಸ್ ವಿಭಾಗದ ಎಸ್ಪಿ ಸಿರಿ ಗೌರಿ ಹಾಗೂ ಹಿರಿಯ ಅಧಿಕಾರಿಗಳು ಶ್ಲಾ ಸಿದ್ದಾರೆ.