Advertisement
ಹೈದಾರಾಬಾದ್‌ನ ಮೋಜೋ ಟಿವಿಯ ಪತ್ರಕರ್ತೆ ಕವಿತಾ ಜಕ್ಕಲ್ ಮತ್ತು ರೆಹನಾ ಫಾತಿಮಾ ಮುಸ್ಲಿಂ ಮಹಿಳೆಯಾಗಿಯೂ ಪೊಲೀಸ್ ಕೋಟೆಯ ಬೆಂಬಲದೊಂದಿಗೆ ಶಬರಿ ಮಲೆ ಪ್ರವೇಶಕ್ಕೆ ಮುಂದಾಗಿದ್ದರು. ಆದರೆ ಶುಕ್ರವಾರ ದೇವಾಲಯದ ಮುಂಭಾಗ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಇಬ್ಬರನ್ನೂ ಹಿಂದಕ್ಕೆ ಕಳುಹಿಸಲಾಗಿದೆ.
Related Articles
Advertisement
ಮಹಿಳೆಯರಿಗೆ ದೇವಾಲಯ ಪ್ರವೇಶಿಸುವ ಹಕ್ಕು ಇದೆ ಹಾಗಾಗಿ ನಾವು ಅವರಿಗೆ ಭದ್ರತೆ ನೀಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಬುಧವಾರದಿಂದ ಇಲ್ಲಿಯವರೆಗೆ 50 ವರ್ಷದ ಒಳಗಿನ ಯಾವುದೇ ಮಹಿಳೆಗೆ ದೇವಾಲಯ ಪ್ರವೇಶಿಸಲು ಸಾಧ್ಯವಾಗಿಲ್ಲ. ಗುರುವಾರ ನ್ಯೂಯಾರ್ಕ್ ಟೈಮ್ಸ್ ನ ಪತ್ರಕರ್ತೆಗೆ ಭಾರೀ ವಿರೋಧ ತೋರಿ ಹಿಂದಕ್ಕೆ ಕಳುಹಿಸಲಾಗಿತ್ತು.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮಹಿಳೆಯರು ದೇವಾಲಯ ಪ್ರವೇಶಿಸುವುದನ್ನು ಯಾರೂ ತಡೆಯಬಾರದು.ಯಾರಿಗೂ ಇದಕ್ಕೆ ಅವಕಾಶ ನೀಡುವುದಿಲ್ಲ ಎಂದಿದ್ದಾರೆ
ರೆಹನಾ ವಿರುದ್ಧ ಅಯ್ಯಪ್ಪ ಭಕ್ತರು ಸಾಮಾಜಿಕ ತಾಣಗಳಲ್ಲಿ ವ್ಯಾಪಕ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಕವಿತಾ ಕಾರ್ಯ ನಿರ್ವಹಿಸುವ ಹೈದರಾಬಾದ್‌ನ ಬಂಜಾರಾ ಹಿಲ್ಸ್‌ನಲ್ಲಿರುವ ಮೋಜೋ ಟಿವಿ ಕಚೇರಿಯ ಮೇಲೆ ಉದ್ರಿಕ್ತರು ಕಲ್ಲು ತೂರಾಟ ನಡೆಸಿದ್ದಾರೆ ಟಿವಿ ಕಚೇರಿಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ.