Advertisement

ಮೈದಾನದಲ್ಲೇ ಕುಸಿದ ವೆಸ್ಟ್‌ ಇಂಡೀಸ್‌ ಆಟಗಾರ್ತಿಯರು!

02:05 PM Jul 04, 2021 | Team Udayavani |

ಆ್ಯಂಟಿಗುವಾ: ಕೇವಲ ಹತ್ತು ನಿಮಿಷಗಳ ಅಂತರದಲ್ಲಿ ವೆಸ್ಟ್‌ ಇಂಡೀಸ್‌ ವನಿತಾ ಕ್ರಿಕೆಟ್‌ ತಂಡದ ಇಬ್ಬರು ಆಟಗಾರ್ತಿಯರು ಪ್ರಜ್ಞೆ ತಪ್ಪಿ ಮೈದಾನದಲ್ಲೇ ಕುಸಿದು ಬಿದ್ದ ಆಘಾತಕಾರಿ ಘಟನೆ ಪಾಕಿಸ್ಥಾನ ವಿರುದ್ಧದ ಟಿ20 ಪಂದ್ಯದ ವೇಳೆ ಸಂಭವಿಸಿದೆ.

Advertisement

ಆ್ಯಂಟಿಗುವಾದಲ್ಲಿ ನಡೆದ ದ್ವಿತೀಯ ಟಿ20 ಪಂದ್ಯದ ವೇಳೆ ಕೆರಿಬಿಯನ್‌ ಕ್ರಿಕೆಟಿಗರಾದ ಚಿನೆಲ್ಲಿ ಹೆನ್ರಿ ಮತ್ತು ಚೆಡೀನ್‌ ನೇಶನ್‌ ಕೇವಲ 10 ನಿಮಿಷಗಳ ಅಂತರದಲ್ಲಿ ಪ್ರಜ್ಞೆ ಕಳೆದುಕೊಂಡು ಕುಸಿದು ಬಿದ್ದರು.

ಇದನ್ನೂ ಓದಿ:ಮಿಥಾಲಿ, ಮಂಧನಾ ಬ್ಯಾಟಿಂಗ್ ನೆರವು:  ಗೆಲುವಿನ ಹಳಿಯೇರಿದ ವನಿತೆಯರು

ಕಾರಣ ನಿಗೂಢ!

ಇಬ್ಬರಿಗೂ ಪ್ರಜ್ಞೆ ಮರಳಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ಮಂಡಳಿ ತಿಳಿಸಿದೆ. ಆದರೆ ಅವರು ಹೀಗೆ ಬೀಳಲು ಕಾರಣವೇನೆಂದು ತಿಳಿದು ಬಂದಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next