ನವದೆಹಲಿ: ಫೇಸ್ ಬುಕ್ ಒಡೆತನದ “ಮೆಟಾ” ಸಂಸ್ಥೆಯು ನಿರೀಕ್ಷೆಯಂತೆ ಟ್ವಿಟರ್ ಗೆ ಪರ್ಯಾಯವಾಗಿ ನೂತನ ಥ್ರೆಡ್ಸ್ ಮೈಕ್ರೋಬ್ಲಾಗಿಂಗ್ App ಅನ್ನು ಗುರುವಾರ (ಜು.06) ಭಾರತ ಸೇರಿದಂತೆ 100ಕ್ಕೂ ಅಧಿಕ ದೇಶಗಳಲ್ಲಿ ಬಿಡುಗಡೆ ಮಾಡಿದೆ.
ಇದನ್ನೂ ಓದಿ:ʼಸಲಾರ್ʼ – ʼಕೆಜಿಎಫ್ʼ ಲಿಂಕ್: ಟೀಸರ್ ನಲ್ಲಿ ಮಹತ್ವದ ಸುಳಿವು ಪತ್ತೆ ಹಚ್ಚಿದ ಫ್ಯಾನ್ಸ್
ಮೆಟಾದ ನೂತನ ಥ್ರೆಡ್ಸ್ App ಬಿಡುಗಡೆಗೊಂಡ ಕೇವಲ ನಾಲ್ಕು ಗಂಟೆಗಳ ಅವಧಿಯಲ್ಲಿ ಬರೋಬ್ಬರಿ 5 ಮಿಲಿಯನ್ ಜನರು ಸೈನ್ ಅಪ್ಸ್ ಆಗಿರುವುದಾಗಿ ವರದಿ ತಿಳಿಸಿದೆ.
Threads ಬಿಡುಗಡೆಯಾಗಿ ಎರಡು ಗಂಟೆಗಳಲ್ಲಿ 2 ಮಿಲಿಯನ್ ಸೈನ್ ಅಪ್ಸ್ ಆಗಿರುವುದಾಗಿ ಮೆಟಾ ಸಿಇಒ ಮಾರ್ಕ್ ಜುಗರ್ ಬರ್ಕ್ ಆರಂಭದಲ್ಲಿ ಪೋಸ್ಟ್ ಮಾಡಿದ್ದರು. ಬಳಿಕ ನಾಲ್ಕು ಗಂಟೆಯ ಅವಧಿಯಲ್ಲಿ 5 ಮಿಲಿಯನ್ ಮಂದಿ ಸೈನ್ ಅಪ್ಸ್ ಮಾಡಿರುವುದಾಗಿ ಅಪ್ ಡೇಟ್ ಮಾಹಿತಿ ನೀಡಿದ್ದಾರೆ.
ಥ್ರೆಡ್ಸ್ App ಟ್ವಿಟರ್ ಸಂಖ್ಯೆಯನ್ನು ಹಿಂದಿಕ್ಕಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಜುಗರ್ ಬರ್ಗ್, ಇದಕ್ಕೆ ಸಮಯದ ಅವಕಾಶವಿದೆ. ಆದರೆ ಸಾರ್ವಜನಿಕ ಸಂಭಾಷಣೆಯ ಸಾಮಾಜಿಕ ಜಾಲತಾಣವಾದ ಟ್ವಿಟರ್ ಒಂದು ಬಿಲಿಯನ್ ಗಿಂತಲೂ ಅಧಿಕ ಜನರು ಬಳಕೆ ಮಾಡುತ್ತಿದ್ದು, ಟ್ವಿಟರ್ ತನಗೆ ಸಿಕ್ಕ ಅವಕಾಶವನ್ನು ಬಳಸಿಕೊಂಡಿದೆ. ಆ ನಿಟ್ಟಿನಲ್ಲಿ ನಾವೂ (ಥ್ರೆಡ್ಸ್) ಕೂಡಾ ದೊಡ್ಡ ಪ್ರಮಾಣದ ಜನಸಂಖ್ಯೆಯನ್ನು ತಲುಪುವ ನಿರೀಕ್ಷೆ ಹೊಂದಿದ್ದೇವೆ ಎಂದು ತಿಳಿಸಿದ್ದಾರೆ.
Apple store n Appಗಳ ಪಟ್ಟಿಯಲ್ಲಿ ಥ್ರೆಡ್ಸ್ ಈ ಮೊದಲೇ ಕಾಣಿಸಿಕೊಂಡಿದ್ದು, ಇದನ್ನು ಟೆಕ್ಟ್ಸ್ ಆಧಾರಿತ ಸಂಭಾಷಣೆ App ಎಂದು ಹೆಸರಿಸಲಾಗಿದೆ. ಇದನ್ನು ಇನ್ಸ್ ಸ್ಟಾಗ್ರಾಂ ನೊಂದಿಗೆ ಲಿಂಕ್ ಮಾಡಬಹುದಾಗಿದೆ ಎಂದು ಮೆಟಾ ತಿಳಿಸಿತ್ತು.
“ನೀವು ಕಾಳಜಿ ವಹಿಸುವ ವಿಷಯಗಳಿಂದ ಹಿಡಿದು ಟ್ರೆಂಡಿಂಗ್ ಆಗುವ ವಿಷಯಗಳವರೆಗೆ ಎಲ್ಲವನ್ನೂ ಚರ್ಚಿಸಲು ಹಾಗೂ ಸಮುದಾಯಗಳನ್ನು ಒಗ್ಗೂಡಿಸಲು ಥ್ರೆಡ್ಸ್ ವೇದಿಕೆಯಾಗಿದೆ ಎಂದು ಮೆಟಾ ವಿವರಣೆ ನೀಡಿತ್ತು. ಇನ್ಸ್ ಸ್ಟಾಗ್ರಾಂ ಬಳಕೆದಾರರು ತಮ್ಮ ಯೂಸರ್ ನೇಮ್ ಗಳನ್ನೇ ಥ್ರೆಡ್ಸ್ Appನಲ್ಲಿ ಬಳಸಬಹುದಾಗಿದೆ.