ಶ್ರೀನಗರ: ಕಾಶ್ಮೀರಿ ಪಂಡಿತ್ ಹತ್ಯೆಯಾದ ಕೆಲ ದಿನಗಳ ಬಳಿಕ ಮತ್ತೆ ಉಗ್ರರ ಅಟ್ಟಹಾಸ ಮುನ್ನೆಲೆಗೆ ಬಂದಿದೆ. ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್‌ನಲ್ಲಿ ಸೋಮವಾರ ಉಗ್ರರು ನಡೆಸಿದ ಗ್ರೆನೇಡ್ ದಾಳಿಯಲ್ಲಿ ಉತ್ತರ ಪ್ರದೇಶದ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ.
ಶೋಪಿಯಾನ್‌ನ ಹರ್ಮಾನ್‌ನಲ್ಲಿ ಹತ್ಯೆಗೀಡಾದ ಇಬ್ಬರನ್ನು ಉತ್ತರ ಪ್ರದೇಶದ ಕನೌಜ್ ನಿವಾಸಿಗಳಾದ ಮನೀಶ್ ಕುಮಾರ್ ಮತ್ತು ರಾಮಸಾಗರ್ ಎಂದು ಗುರುತಿಸಲಾಗಿದೆ.
ಈ ಘಟನೆಯ ನಂತರ, ಪೊಲೀಸರು ಇಡೀ ಪ್ರದೇಶವನ್ನು ಸುತ್ತುವರೆದರು ಮತ್ತು ಶೋಧ ಕಾರ್ಯಾಚರಣೆ ನಡೆಸಿ ದಾಳಿಕೋರರನ್ನು ಬಂಧಿಸಿದ್ದಾರೆ ಎನ್ನಲಾಗಿದೆ.
ದಾಳಿ ನಡೆದ ಕೆಲವೇ ಗಂಟೆಗಳಲ್ಲಿ ದಾಳಿಕೋರ ಇಮ್ರಾನ್ ಬಶೀರ್ ಗನೈಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಅಧಿಕಾರಿಗಳು ತಿಳಿಸಿದ್ದಾರೆ.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಕಾಶ್ಮೀರ ವಲಯದ ಎಡಿಜಿಪಿ ವಿಜಯ್ ಕುಮಾರ್, ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾದ ಹೈಬ್ರಿಡ್ ಭಯೋತ್ಪಾದಕ ಇಮ್ರಾನ್ ಬಶೀರ್ ಘನಿಯನ್ನು ವಶಕ್ಕೆ ಪಡೆಯಲಾಗಿದ್ದು ವಿಚಾರಣೆ ನಡೆಸುತ್ತಿರುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ : ಕೀವೇ ಎಸ್‌ಆರ್125 ಬಿಡುಗಡೆ: ಯಮಾಹ ಆರ್‌ಎಕ್ಸ್ 100ನಂತೆಯೇ ಕಾಣುವ ಬೈಕ್