ಅಲಿಗಡ: ಉತ್ತರ ಪ್ರದೇಶನಲ್ಲಿ ಕುಖ್ಯಾತ ಎನ್‌ಕೌಂಟರ್‌ಗಳು ಮುಂದುವರಿದಿದ್ದು, ಗುರುವಾರ ಬೆಳ್ಳಂಬೆಳಗ್ಗೆ ಇಬ್ಬರು ಕುಖ್ಯಾತ ರೌಡಿಗಳನ್ನು ಮಾಧ್ಯಮಗಳ ಕ್ಯಾಮರಾ ಮುಂದೆಯೇ ಪೊಲೀಸರು ಎನ್‌ಕೌಂಟರ್ ಮಾಡಿದ್ದಾರೆ.
ಪೊಲೀಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಯುವ ಸ್ಥಳಕ್ಕೆ ಮಾಧ್ಯಮಗಳನ್ನು ಕರೆಸಿಕೊಂಡಿದ್ದು ವಿಶೇಷವಾಗಿತ್ತು.
ಹತ್ಯೆಗೀಡಾದವರು ಮುಶ್ತಾಕಿಮ್ ಮತ್ತು ನೌಶಾದ್ ಎನ್ನುವರರಾಗಿದ್ದು, ಇಬ್ಬರು ಕಳೆದೊಂದು ತಿಂಗಳೊಳಗೆ 6 ಕೊಲೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಅವರು ಹತ್ಯೆಗೈದವರಲ್ಲಿ ಇಬ್ಬರು ಹಿಂದು ಪುರೋಹಿತರು ಎಂದು ಪೊಲೀಸರು ತಿಳಿಸಿದ್ದಾರೆ.
Related Articles
ರೋಚಕ ಕಾರ್ಯಾಚರಣೆ ವೇಳೆ 4 ಕಿ.ಮೀನಷ್ಟು ಬೈಕನ್ನು ಬೆನ್ನಟ್ಟಿದ ಪೊಲೀಸರು ಗುಂಡಿನ ಚಕಮಕಿ ನಡೆಸಿ ಇಬ್ಬರು ಕ್ರಿಮಿನಲ್‌ಗಳನ್ನು ಹತ್ಯೆಗೈದಿದ್ದಾರೆ. ಕಾರ್ಯಾಚರಣೆಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಗಾಯಗೊಂಡಿದ್ದಾರೆ.
2017 ರಲ್ಲಿ ಯೋಗಿ ಆದಿತ್ಯನಾಥ್ ಅವರು ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಪೊಲೀಸರು ನಡೆಸಿರುವ ಎನ್‌ಕೌಂಟರ್‌ಗೆ ಬಲಿಯಾದ ಕುಖ್ಯಾತರ ಸಂಖ್ಯೆ 66 ಕ್ಕೇರಿದೆ.