Advertisement

ಲಕ್ನೋ : 2 ಹೊಟೇಲ್‌ಗ‌ಳಲ್ಲಿ ಬೆಂಕಿ; ಇಬ್ಬರ ಸಾವು; ನಾಲ್ವರು ಗಂಭೀರ

11:24 AM Jun 19, 2018 | Team Udayavani |

ಲಕ್ನೋ : ಇಲ್ಲಿನ ಚಾರ್‌ಬಾಗ್‌ ಪ್ರದೇಶದಲ್ಲಿನ ಎರಡು ಹೊಟೇಲ್‌ಗ‌ಳಲ್ಲಿ ಇಂದು ನಸುಕಿನ ಆರು ಗಂಟೆಯ ವೇಳೆ ಸಂಭವಿಸಿದ ಅಗ್ನಿ ದುರಂತದಲ್ಲಿ ಇಬ್ಬರು ಮಡಿದು ಇತರ ನಾಲ್ವರು ಗಂಭೀರವಾಗಿ ಗಾಯಗೊಂಡರೆಂದು ಪೊಲೀಸರು ತಿಳಿಸಿದ್ದಾರೆ.

Advertisement

ಲಕ್ನೋ ಪಶ್ಚಿಮ ಪೊಲೀಸ್‌ ಸುಪರಿಂಟೆಂಡೆಂಟ್‌ ವಿಕಾಸ್‌ ಚಾಂದ್‌ ಅವರು ಈ ಅಗ್ನಿ ಅವಘಡದಲ್ಲಿ ಇಬ್ಬರು ಸತ್ತಿರುವುದನ್ನು ದೃಢಪಡಿಸಿದರು. ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಸೇರಿರುವುದಾಗಿ ತಿಳಿಸಿದರು. 

ಪೊಲೀಸರ ಪ್ರಕಾರ ಈ ಅವಳಿ ಹೊಟೇಲ್‌ ಬೆಂಕಿ ದುರಂತದಲ್ಲಿ ಮೃತರ ಸಂಖ್ಯೆ ಇನ್ನೂ ಹೆಚ್ಚುವ ಭೀತಿ ಇದೆ. 

Advertisement

Udayavani is now on Telegram. Click here to join our channel and stay updated with the latest news.

Next