Advertisement

ಕೋವಿಡ್‌ ರೋಗಿಗಳಿಗೆ ನವಚೈತನ್ಯ ನೀಡಲಿರುವ 2-ಡಿಜಿ ಔಷಧಿ

03:04 PM May 15, 2021 | Team Udayavani |

ಬೆಂಗಳೂರು: ಡಿಆರ್‌ಡಿಒದ ಇನ್‌ಸ್ಟಿಟ್ಯೂಟ್‌ಆಫ್‌ ನ್ಯೂಕ್ಲಿ ಯರ್‌ ಮೆಡಿಸಿನ್‌ ಆ್ಯಡ್‌ ಅಲೈಡ್‌ಸೈನ್ಸಸ್‌ ಲ್ಯಾಬ್‌ ಹಾಗೂ ಡಾ.ರೆಡ್ಡೀಸ್‌ ಲ್ಯಾಬ್‌ಸಹಯೋಗದಲ್ಲಿ ತಯಾ ರಿಸಿದ 2-ಡಿಜಿ ಔಷಧಿಕೋವಿಡ್‌ ರೋಗಿಗಳು ಬೇಗನೆ ಗುಣಮುಖರಾಗಲು ನೆರವಾಗ ಲಿದೆ, ಅವರು ಬೇಗನೆ ಚೇತರಿಸಿಕೊಳ್ಳುತ್ತಿದ್ದಾರೆ ಎಂಬುದು ಸಾಬೀತಾಗಿದೆ! ಈ ಮಾಹಿತಿಯನ್ನು ಡಿಆರ್‌ಡಿಒ ವಿಜ್ಞಾನಿಗಳುಸಂಸ್ಥೆಗೆ ಭೇಟಿ ನೀಡಿದ ಆರೋಗ್ಯ ಸಚಿವ ಡಾ. ಕೆ.ಸುಧಾಕರ್‌ ಅವರಿಗೆ ನೀಡಿದರು.

Advertisement

ಕೋವಿಡ್‌ರೋಗಿಗಳಿಗೆ ವೈದ್ಯ ಕೀಯ ಆಮ್ಲಜನಕದಮೇಲಿನ ಅವಲಂಬನೆ ಕಡಿಮೆ ಮಾಡುವ2-ಡಿಜಿ ಔಷಧಿ ಕುರಿತು ಸುಧಾಕರ್‌ವಿಜ್ಞಾನಿಗಳಿಂದ ಮಾಹಿತಿ ಪಡೆದರು.ಈ ಸಂದರ್ಭದಲ್ಲಿ ವಿವರಣೆ ನೀಡಿದವಿಜ್ಞಾನಿಗಳು ತುರ್ತು ಬಳಕೆಯ ಆಧಾರದಲ್ಲಿಕೋವಿಡ್‌ ರೋಗಿಗಳಿಗೆ ಈ ಔಷಧಿ ನೀಡಲುಅನುಮತಿ ದೊರೆತಿದ್ದು, ಸಕಾರಾತ್ಮಕ ಫಲಿತಾಂಶ ಕಂಡುಬಂದಿದೆ. ಕೋವಿಡ್‌ ಎರಡನೇ ಅಲೆಯಲ್ಲಿಅನೇಕರು ಆಸ್ಪತ್ರೆಗೆ ದಾಖಲಾಗುತ್ತಿದ್ದು,ಹೆಚ್ಚಿನವರಿಗೆ ಆಕ್ಸಿಜನ್‌ ಬೇಕಾಗಿದೆ. ಈ ಔಷಧಿನೀಡುವುದರಿಂದ ಆಕ್ಸಿಜನ್‌ ಬಳಕೆ ತಗ್ಗಲಿದೆ.ಜೊತೆಗೆ ರೋಗಿ ಗಳು ಆಸ್ಪತ್ರೆಗೆ ದಾಖಲಾಗುವಪ್ರಮಾಣ ಕಡಿಮೆಯಾಗಲಿದೆ ಎಂದು ತಿಳಿಸಿದರು.

ಆಕ್ಸಿಕೇರ್‌ ಸಿಸ್ಟಮ್‌: ರೋಗಿಗಳಿಗೆ ನೀಡುವಆಕ್ಸಿಜನ್‌ ಅನ್ನು ನಿಯಂತ್ರಿಸಲು ಡಿಆರ್‌ಡಿಒದಿಂದಆಕ್ಸಿಕೇರ್‌ ಸಿಸ್ಟಮ್‌ ಅಭಿವೃದ್ಧಿಪಡಿಸಲಾಗಿದೆ.ಇದರಿಂದಾಗಿ ರೋಗಿಗಳಿಗೆ ನಿರ್ದಿಷ್ಟವಾಗಿ ಎಷ್ಟುಆಕ್ಸಿಜನ್‌ ನೀಡಬೇಕೆಂದು ನಿರ್ಧರಿಸಬಹುದು. ಇದನ್ನು ಆಸ್ಪತ್ರೆ ಮಾತ್ರ ವಲ್ಲದೆ ಮನೆ, ಕೋವಿಡ್‌ಕೇರ್‌ ಸೆಂಟರ್‌ನಲ್ಲೂ ಬಳಸಬಹುದು. ಪಿಎಂಕೇರ್‌ ಫಂಡ್‌ನಿಂದ 322.5 ಕೋಟಿ ರೂ. ವೆಚ್ಚದಲ್ಲಿ1.5 ಲಕ್ಷ ಆಕ್ಸಿಕೇರ್‌ ಸಿÓವå ‌r … ಖರೀದಿಸಲಾ ‌ ಗುತ್ತಿದೆಎಂದು ವಿಜ್ಞಾನಿಗಳು ವಿವರಿಸಿ ದರು.

ಇದೇ ವೇಳೆ ಸಚಿವ ಡಾ.ಕೆ.ಸುಧಾಕರ್‌ತಿಪ್ಪಸಂದ್ರದಲ್ಲಿ ಡಿಆರ್‌ಡಿಒದಿಂದ ಸ್ಥಾಪಿಸುತ್ತಿರುವ ಆಕ್ಸಿಜನ್‌ ಘಟಕ ವೀಕ್ಷಿಸಿದರು. ನಂತರಮಾತನಾಡಿ, ಕೋವಿಡ್‌ ಸಾಂಕ್ರಾಮಿಕದ ವಿರುದ್ಧ ಹೋರಾಡುವಲ್ಲಿ ಡಿಆರ್‌ಡಿಒ ಹಾಗೂ ಐಐಎಸ್‌ಸಿಪ್ರಯತ್ನಗಳು ಶ್ಲಾಘ ನೀಯ. ಐಐಎಸ್‌ಸಿಯಿಂದ ಅಭಿವೃದ್ಧಿಪಡಿ ಸುತ್ತಿರುವ ಸಾಮಾನ್ಯ ತಾಪಮಾನದಲ್ಲೂ ಸಂಗ್ರಹಿಸಿಡಬಹುದಾದ ಲಸಿಕೆ ಹಾಗೂಡಿ ಆರ್‌ಡಿಒ ಅಭಿವೃದ್ಧಿಪಡಿಸಿ 2-ಡಿಜಿ, ಆಕ್ಸಿಕೇರ್‌ಸಿಸ್ಟಮ್‌ ಕೋವಿಡ್‌ ವಿರುದ್ದದ ಹೋರಾಟವನ್ನು ಮತ್ತಷ್ಟು ಬಲಪಡಿಸಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next