ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಎರಡು ಆಸ್ಪತ್ರೆಗಳಿಗೆ ಬಾಂಬ್ ಬೆದರಿಕೆಯ ಇಮೇಲ್ ಇಮೇಲ್ ಗಳು ಬಂದಿದೆ.
ಭಾನುವಾರ(ಮೇ.12 ರಂದು) ದೆಹಲಿಯ ಬುರಾರಿ ಮತ್ತು ಮಂಗೋಲ್ಪುರಿಯ ಎರಡು ಆಸ್ಪತ್ರೆಗಳಿಗೆ ಬಾಂಬ್ ಸ್ಫೋಟದ ಇಮೇಲ್ ಗಳು ಬಂದಿದೆ ಎಂದು ವರದಿಯಾಗಿದೆ.
ಬುರಾರಿ ಸರ್ಕಾರಿ ಆಸ್ಪತ್ರೆ ಮತ್ತು ದೆಹಲಿಯ ಮಂಗೋಲ್ಪುರಿಯಲ್ಲಿರುವ ಸಂಜಯ್ ಗಾಂಧಿ ಆಸ್ಪತ್ರೆಗೆ ಬಾಂಬ್ ಸ್ಫೋಟಿಸುವ ಬೆದರಿಕೆಯ ಇಮೇಲ್ ಗಳು ಬಂದಿದೆ. ಈ ವಿಚಾರವನ್ನು ಆಸ್ಪತ್ರೆಯವರು ಕರೆ ಮಾಡಿ ತಿಳಿಸಿರುವುದಾಗಿ ದೆಹಲಿ ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರು ಸ್ಥಳದಲ್ಲಿದ್ದು, ಎರಡೂ ಆಸ್ಪತ್ರೆಗಳಲ್ಲಿ ಶೋಧ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇತ್ತೀಚೆಗೆ ದೆಹಲಿ ಮತ್ತು ಗುಜರಾತ್‌ನ ಅಹಮದಾಬಾದ್‌ನ ಶಾಲೆಗಳಿಗೆ ಬಾಂಬ್ ಬೆದರಿಕೆ ಇಮೇಲ್ ಗಳು ಬಂದಿತ್ತು.
ಮೇ 1 ರಂದು ದೆಹಲಿಯ 131 ಶಾಲೆಗಳು, ಗುರುಗ್ರಾಮ್‌ನಲ್ಲಿ ಐದು ಮತ್ತು ನೋಯ್ಡಾ ಮತ್ತು ಗ್ರೇಟರ್ ನೋಯ್ಡಾದ ಮೂರು ಶಾಲೆಗಳಿಗೆ ಇ-ಮೇಲ್‌ಗಳನ್ನು ಕಳುಹಿಸಲಾಗಿತ್ತು.