Advertisement

ಮಾಗಿ ಉತ್ಸವದಲ್ಲಿ 2 ದಿನ ಪಕ್ಷಿ ಹಬ್ಬ

11:19 AM Dec 26, 2018 | Team Udayavani |

ಮೈಸೂರು: ಮೈಸೂರು ಮಾಗಿ ಉತ್ಸವದ ಸಂದರ್ಭದಲ್ಲಿ ಅರಣ್ಯ ಇಲಾಖೆ ವನ್ಯಜೀವಿ ವಿಭಾಗದ ಸಹಯೋಗದಲ್ಲಿ ಇದೇ ಮೊದಲ ಬಾರಿಗೆ ಜಿಲ್ಲಾಡಳಿತ ಡಿ.28 ಮತ್ತು 29 ರಂದು ಎರಡು ದಿನಗಳ ಪಕ್ಷಿ ಹಬ್ಬ ಆಯೋಜಿಸಿದೆ. 

Advertisement

ಪಕ್ಷಿಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್‌ ಅವರು, ಪಕ್ಷಿ$ಹಬ್ಬವನ್ನು ವಿಶಿಷ್ಟವಾಗಿ ಆಚರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಹಬ್ಬದಲ್ಲಿ ಮೈಸೂರಿನ ಕಾರಂಜಿ ಕೆರೆ, ಕುಕ್ಕರಹಳ್ಳಿ ಕೆರೆ, ಗಿರಿಬೆಟ್ಟದ ಕೆರೆ, ವರಕೋಡು ಕೆರೆ, ಲಿಂಗಾಂಬುದಿ ಕೆರೆ, ಹೆಬ್ಟಾಳ್‌ ಕೆರೆ ಸೇರಿದಂತೆ ವಿವಿಧ ಸ್ಥಳದಲ್ಲಿ ಪಕ್ಷಿಗಳ ವೀಕ್ಷಣೆ ಹಾಗೂ ಮೈಸೂರು ಮೃಗಾಲಯದ ಸಭಾಂಗಣದಲ್ಲಿ ತಾಂತ್ರಿಕ ಗೋಷ್ಠಿಗಳು ನಡೆಯಲಿದೆ. 

ಡಿ.28 ರಂದು ಬೆಳಗ್ಗೆ 11ಗಂಟೆಗೆ ಮೃಗಾಲಯದ ಸಭಾಂಗಣದಲ್ಲಿ ಮೈಸೂರು ಪಕ್ಷಿ ಹಬ್ಬ ಉದ್ಘಾಟನಾ ಸಮಾರಂಭದ ನಂತರ ಇದೇ ಸಭಾಂಗಣದಲ್ಲಿ ಮಧ್ಯಾಹ್ನ 12 ರಿಂದ 1.30 ರವರೆಗೆ ತಾಂತ್ರಿಕ ಅಧಿವೇಶನ ಇರುತ್ತದೆ. ಕು.ಅಭಿಷೇಕ ರಾಜ್‌ಗೊàಪಾಲ್‌ ಅವರು ಜನರಲ್ಲಿ ಪಕ್ಷಿಗಳ ಪ್ರೀತಿ ತರುವ ವಿಷಯದ ಬಗ್ಗೆ ಮಾತನಾಡುವರು. ಪಕ್ಷಿಗಳ ವೀಕ್ಷಣೆ ಹವ್ಯಾಸದ ಬಗ್ಗೆ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್‌ ಮಾತನಾಡುವರು.

ಮಧ್ಯಾಹ್ನ 2.30 ರಿಂದ 3 ಗಂಟೆವರೆಗೆ ಕ್ಷೇತ್ರ ಕಾರ್ಯಚಟುವಟಿಕೆ ಹಾಗೂ ಪಕ್ಷಿಗಳ ವೀಕ್ಷಣೆಗೆ ಹೊರಡಲು ಸಿದ್ಧತೆಯ ಬಗ್ಗೆ ಮೈಸೂರು ನೇಚರ್‌ನ ಸದಸ್ಯರು ವಿವರಿಸುವರು. ಮಧ್ಯಾಹ್ನ 3.30 ರಿಂದ ಸಂಜೆ 6 ಗಂಟೆಗೆ ವರೆಗೆ ಪ್ರತಿ ತಂಡದಲ್ಲಿ ಗರಿಷ್ಠ 20 ಸದಸ್ಯರಂತೆ 6 ತಂಡಗಳಲ್ಲಿ ವಿವಿಧ ಸ್ಥಳಗಳಲ್ಲಿ ಪಕ್ಷಿಗಳ ವೀಕ್ಷಣೆ ಇರುತ್ತದೆ. ಡಿ.29 ರಂದು ಬೆಳಗ್ಗೆ 6.30 ರಿಂದ 9.30 ವರೆಗೆ ಪಕ್ಷಿ ವೀಕ್ಷಣೆಯು ಹಿಂದಿನ ದಿನದ ಸ್ಥಳಗಳಲ್ಲೇ ಇರುತ್ತದೆ. 

ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.15 ರವರೆಗೆ ತಾಂತ್ರಿಕ ಅಧಿವೇಶನ, ಸುಹೇಲ್‌ ಖ್ವಾಡರ್‌ ಅವರು ನಾಗರಿಕರ ಜ್ಞಾನದ ಮೂಲಕ ಪಕ್ಷಿಗಳ ಬಗ್ಗೆ ಅರಿಯುವಿಕೆ ಬಗ್ಗೆ ಮಾತನಾಡುವರು. ಬಿ.ಆರ್‌.ಶೇಷಗಿರಿ ಅವರು ಮೈಸೂರು ಪ್ರಾಂತ್ಯದಲ್ಲಿ ವಲಸೆ ಹಕ್ಕಿಗಳ ಪ್ರಬೇಧಗಳ ಬಗ್ಗೆ ತಿಳಿಸುವರು. ಶಿವಪ್ರಕಾಶ್‌ ಅವರು ಮೈಸೂರು ಬರ್ಡ್ಸ್‌ ಅಟ್ಲಾಸ್‌ ಪರಿಚಯಿಸುವರು. ಮಧ್ಯಾಹ್ನ 2.30 ರಿಂದ 4 ಗಂಟೆ ವರೆಗೆ ಕ್ಷೇತ್ರ ಅನುಭವದ ಸಂಯೋಜನೆ ಹಾಗೂ ಅನುಭವ ವಿನಿಮಯ ಕಾರ್ಯಕ್ರಮ ನಡೆಯಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next