Advertisement

ಲಭಿಸಿದ ಸಂಜೀವಿನಿ : ಡಿಆರ್‌ಡಿಒದ ಔಷಧ 2-ಡಿ.ಜಿ. ಬಿಡುಗಡೆ

01:59 AM May 18, 2021 | Team Udayavani |

ಹೊಸದಿಲ್ಲಿ: ಕೊರೊನಾ ವಿಷಮ ಸ್ಥಿತಿ ಯಲ್ಲಿರುವ ಭಾರತಕ್ಕೆ “ಸಂಜೀವಿನಿ’ ಸಿಕ್ಕಿದೆ. ರಕ್ಷಣ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ತಯಾರಿಸಿರುವ “2-ಡಿ.ಜಿ.’ ಔಷಧವನ್ನು ಕೇಂದ್ರ ರಕ್ಷಣ ಸಚಿವ ರಾಜನಾಥ್‌ ಸಿಂಗ್‌ ಮತ್ತು ಆರೋಗ್ಯ ಸಚಿವ ಹರ್ಷವರ್ಧನ್‌ ಹೊಸದಿಲ್ಲಿಯಲ್ಲಿ ಸೋಮವಾರ ಬಿಡುಗಡೆ ಮಾಡಿದ್ದಾರೆ.

Advertisement

ತಯಾರಿ ಪಾಲುದಾರರು
ಡಿಆರ್‌ಡಿಒ ಜತೆಗೆ ಇನ್‌ಸ್ಟಿಟ್ಯೂಟ್‌ ಆಫ್ ನ್ಯೂಕ್ಲಿ ಯರ್‌ ಮೆಡಿಸಿನ್‌ ಆ್ಯಂಡ್‌ ಅಲಾಯ್ಡ ಸೈನ್ಸಸ್‌ (ಇನ್‌ಮಾಸ್‌), ಡಾ| ರೆಡ್ಡೀಸ್‌ ಲ್ಯಾಬೊರೆಟರೀಸ್‌ ಈ ಔಷಧ ಹೊರತಂದಿವೆ.

ಸೇವನೆ ಹೇಗೆ?
ಇದನ್ನು ಅಗಾಧ ಪ್ರಮಾಣದಲ್ಲಿ ಉತ್ಪಾ ದಿಸ ಬಹುದು ಎಂದು ತಜ್ಞರು ವಿವರಿಸಿದ್ದಾರೆ. ಇದು ಪುಡಿ ರೂಪದಲ್ಲಿ ಇರಲಿದ್ದು, ನೀರಿನಲ್ಲಿ ಬೆರೆಸಿ ಸೇವಿಸಬಹುದು.

ಔಷಧ ಹೇಗೆ ಕೆಲಸ ಮಾಡುತ್ತದೆ?
ಕೊರೊನಾ ವೈರಾಣುಗಳು ದಾಳಿ ಮಾಡಿರುವ ಜೀವ ಕೋಶ  ಗಳಿಗೆ ಈ ಔಷಧದ ಕಣಗಳು ಲಗ್ಗೆಯಿಡುತ್ತವೆ. ಸಿಂಥೆಸಿಸ್‌ ಮೂಲಕ ವೈರಾಣುಗಳ ಪುನರುತ್ಪಾದನೆ ಯನ್ನು ತಡೆಯುತ್ತವೆ. ವೈರಾಣುಗಳ ಶಕ್ತಿಯೂ ಕುಂದುತ್ತದೆ. ವೈರಾಣು ಬಾಧೆಗೆ ತುತ್ತಾಗಿರುವ ಜೀವ ಕೋಶಗಳನ್ನು ಗುರುತಿಸಿ, ಅವುಗಳೊಳಗೆ ಮಾತ್ರ ಪ್ರವೇಶ ಪಡೆಯುವುದು ಈ ಔಷಧ ಕಣಗಳ ವಿಶೇಷ.

ಯಾವಾಗ ಲಭ್ಯ?
ಸದ್ಯಕ್ಕೆ ಈ ಔಷಧ ಏಮ್ಸ್‌ ಆಸ್ಪತ್ರೆ, ಸೇನಾ ಆಸ್ಪತ್ರೆ ಡಿಆರ್‌ಡಿಒ ಆಸ್ಪತ್ರೆಗಳು ಮತ್ತು ರಕ್ಷಣ ಇಲಾಖೆಯ ಅಧೀನ ಆಸ್ಪತ್ರೆಗಳಲ್ಲಿ ಸಿಗಲಿವೆ. ಜೂನ್‌ ಮೊದಲ ವಾರದಿಂದ ದೇಶದ ಎಲ್ಲ ಆಸ್ಪತ್ರೆಗಳಲ್ಲಿ ಲಭ್ಯವಾಗಲಿದೆ ಎಂದು ಕೇಂದ್ರ ಸರಕಾರ ಪ್ರಕಟಿಸಿದೆ.

Advertisement

ಔಷಧದ ವಿಶೇಷಗಳೇನು?
1. ಕೊರೊನಾ ರೋಗಿಗಳಲ್ಲಿ ಔಷಧ ಗಾಢ ಪರಿಣಾಮಕಾರಿ. ಈ ಔಷಧ ಸೇವಿಸಿದವರಲ್ಲಿ ಗಣನೀಯ ಚೇತರಿಕೆ ಕಾಣಿಸಿದೆ.

2. ಕೊರೊನಾ ರೋಗಿಗಳಿಗೆ ಬಳಸಲಾಗುವ ಸಾಂಪ್ರದಾಯಿಕ ಪ್ರಮಾಣೀಕೃತ ಔಷಧ ಗಳಿಗಿಂತ ವೇಗವಾಗಿ ಕೆಲಸ ಮಾಡುತ್ತದೆ. ಬಹುಬೇಗನೆ ಚೇತರಿಸಿಕೊಳ್ಳುವಂತೆ ಮಾಡುತ್ತದೆ.

3. ರೋಗಪೀಡಿತರು 2.5 ದಿನಗಳಷ್ಟು ಬೇಗನೆ ಚೇತರಿಸಿಕೊಂಡಿರುವ ಉದಾಹರಣೆಗಳಿವೆ.

4. ಸಾಂಪ್ರದಾಯಿಕ ಔಷಧ ಪಡೆಯುವ ರೋಗಿಗಳಲ್ಲಿ 3 ದಿನಗಳಲ್ಲಿ ಆಮ್ಲಜನಕ ಸಿಂಥೆಸಿಸ್‌ ಶೇ.31ರಷ್ಟಿದ್ದರೆ, 2-ಡಿ.ಜಿ. ಔಷಧ ಪಡೆದ ಬಳಿಕ 3 ದಿನಗಳಲ್ಲಿ ಆಮ್ಲಜನಕ ಸಿಂಥೆಸಿಸ್‌ ಶೇ. 41ರಷ್ಟಿರುತ್ತದೆ.

5. 65 ವರ್ಷ ಮೀರಿದ ವ್ಯಕ್ತಿಗಳಿಗೆ ಇದು ಸಂಜೀವಿನಿಯಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next