Advertisement

ಗಡಿ ಜಿಲ್ಲೆ ಬೀದರ್ ನಲ್ಲಿ 2 ಕೋವಿಡ್ ಸೋಂಕು ದೃಢ

07:28 PM Jun 01, 2020 | Sriram |

ಬೀದರ್: ಮಹಾರಾಷ್ಟ್ರ ಕಂಟಕದಿಂದ ತಲ್ಲಣಗೊಂಡಿರುವ ಗಡಿ ಜಿಲ್ಲೆ ಬೀದರ್ ನಲ್ಲಿ ಸೋಮವಾರ ಕೋವಿಡ್-19 ಆರ್ಭಟ ಕೊಂಚ ತಗ್ಗಿದ್ದು, ಎರಡು ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಸೋಂಕಿನಿಂದ ಬಳಲುತ್ತಿದ್ದ 14 ಜನರು ಗುಣಮುಖರಾಗಿ ಬಿಡುಗಡೆ ಆಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

Advertisement

ರಕ್ಕದ ಕೋವಿಡ್ 19 ನಿಂದ ನಿರಂತರ ಸಾವು ಮತ್ತು ಸೋಂಕಿತರ ಸಂಖ್ಯೆ ಏರಿಕೆಯಿಂದಾಗಿ ಬೀದರ ನಲುಗಿ ಹೋಗಿತ್ತು. ಆದರೆ, ಸೋಮವಾರ ಇಬ್ಬರಲ್ಲಿ ಪಾಸಿಟಿವ್ ಕಾಣಿಸಿಕೊಂಡಿದೆ. ಚಿಟಗುಪ್ಪ ಪಟ್ಟಣದ ಇಬ್ಬರು ಸಹೋದರರಾದ 36 ವರ್ಷದ ಪಿ 3339ಮತ್ತು 40 ವರ್ಷದ ಪಿ  3340 ರೋಗಿಗಳಿಗೆ ಕಂಟೈನ್ಮೆಂಟ್ ಝೋನ್ ಸಂಪರ್ಕದಿಂದ ವೈರಾಣು ತಗುಲಿದೆ.

ಆಸ್ಪತ್ರೆಯಲ್ಲಿ ಡಿಸ್ಚಾರ್ಜ್ ಆಗಿರುವ 14 ಜನ ಕೋವಿಡ್ 19 ಸೋಂಕಿತರಲ್ಲಿ 8 ಮಂದಿ ಪುರುಷರು ಮತ್ತು 6 ಜನ ಮಹಿಳೆಯರು ಸೇರಿದ್ದಾರೆ. ಪಿ  1430, ಪಿ 1451, ಪಿ 1452, ಪಿ 1453, ಪಿ 1455, ಪಿ 1456, ಪಿ 1458, ಪಿ 1666, ಪಿ 1667, ಪಿ 1730, ಪಿ 1731, ಪಿ 1950, 1952 ಮತ್ತು ಪಿ 1042 ಸಂಖ್ಯೆಯ ರೋಗಿಗಳು ಬಿಡುಗಡೆ ಆಗಿದ್ದಾರೆ. ಇವರಲ್ಲಿ ಬೀದರ ನಗರದ 9, ಭಾಲ್ಕಿ 3, ಚಿಟಗುಪ್ಪ ಮತ್ತು ಧನ್ನೂರನ ತಲಾ 1 ಸೇರಿದ್ದಾರೆ.

ಜಿಲ್ಲೆಯಲ್ಲಿ ಈಗ ಸೋಂಕಿತರ ಸಂಖ್ಯೆ 165ಕ್ಕೆ ಏರಿಕೆಯಾಗಿದೆ. ಒಟ್ಟು 14 ಜನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಇನ್ನೂ 119 ಪ್ರಕರಣಗಳು ಸಕ್ರೀಯವಾಗಿವೆ ಎಂದು ಆರೋಗ್ಯ ಇಲಾಖೆಯ ಹೆಲ್ತ್ ಬುಲೇಟಿನ್ ದೃಡಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next