Advertisement

ಗಂಗಾವತಿ: ಬೆಳ್ಳಂ ಬೆಳಿಗ್ಗೆ ಮತ್ತೆ ಗಂಗಾವತಿ ಬೆಟ್ಟಗಳಲ್ಲಿ ಪ್ರತ್ಯಕ್ಷವಾದ 2 ಚಿರತೆಗಳು

12:45 PM Oct 13, 2021 | Team Udayavani |

ಗಂಗಾವತಿ: ಬುಧವಾರ ಬೆಳ್ಳಂಬೆಳಿಗ್ಗೆ ಗಂಗಾವತಿ ಸಮೀಪದ ಗುಡ್ಡಗಳಲ್ಲಿ 2 ಚಿರತೆಗಳು ಪ್ರತ್ಯಕ್ಷವಾಗಿವೆ ಇದನ್ನು ಕಂಡ ವಾಯುವಿಹಾರಕ್ಕೆ ತೆರಳಿದ್ದ ಜನರು ಭಯಭೀತಗೊಂಡಿದ್ದಾರೆ .

Advertisement

ಗಂಗಾವತಿ ನಗರದ ಇಂಜಿನಿಯರಿಂಗ್ ಕಾಲೇಜು ಐಟಿಐ ಕಾಲೇಜ್ ರಸ್ತೆಯ ಹೊಂದಿಕೊಂಡಂತೆ ಇರುವ ಬೆಟ್ಟದಲ್ಲಿ 2 ಚಿರತೆಗಳು ಮಂಗಳವಾರ ಸಂಜೆ ಮತ್ತು ಬುಧವಾರ ಬೆಳಿಗ್ಗೆ ವಾಯುವಿಹಾರ ತೆರಳಿದ್ದ ಜನರಿಗೆ ಕಂಡುಬಂದಿವೆ .

ತಾಲ್ಲೂಕಿನ ಆನೆಗೊಂದಿ ಸಂಗಾಪುರ ಹಿರೇಬೆಣಕಲ್ ಆಗೋಲಿ ಸೇರಿದಂತೆ 7 ಗುಡ್ಡ ಪ್ರದೇಶದಲ್ಲಿ ಚಿರತೆ ,ಕರಡಿ, ಮೊಲ ಹೀಗೆ ವನ್ಯಜೀವಿಗಳು ಹೆಚ್ಚಾಗಿದ್ದು ಇತ್ತೀಚಿನ ವರ್ಷಗಳಲ್ಲಿ ಗ್ರಾಮ ಮತ್ತು ನಗರಕ್ಕೆ ವಲಸೆ ಬರುತ್ತಿವೆ ಇದರಿಂದ ಜನರು ಭಯಭೀತರಾಗಿದ್ದಾರೆ .ಕಳೆದ ವರ್ಷ ಆನೆಗೊಂದಿ ಸುತ್ತಮುತ್ತಲ ಗ್ರಾಮಗಳಲ್ಲಿ ಚಿರತೆಗಳ ದಾಳಿಯಿಂದ 3 ಜನರು ಪ್ರಾಣ ಕಳೆದುಕೊಂಡಿದ್ದು ಅರಣ್ಯ ಇಲಾಖೆ ಮತ್ತು ಜಿಲ್ಲಾಡಳಿತ ಅಧಿಕಾರಿಗಳು  ಬೆಟ್ಟ ಪ್ರದೇಶದಲ್ಲಿ ಬೋನು ಇಟ್ಟು ಚಿರತೆ ಮತ್ತು ಕರಡಿಗಳನ್ನು ಸೆರೆಹಿಡಿದು ಪ್ರಾಣಿ ಸಂಗ್ರಹಾಲಯಕ್ಕೆ ಕಳಿಸಿಕೊಟ್ಟಿದ್ದರು .

6 ತಿಂಗಳಿಂದ ಎಲ್ಲಿಯೂ ಕಾಣದ ಚಿರತೆ ಮತ್ತು ಕರಡಿಗಳು ಬುಧುವಾರ ಬೆಳಿಗ್ಗೆ ವಿಪ್ರ ಸಾಯಿ ನಗರ ಪ್ರದೇಶದಲ್ಲಿರುವ ಇಂಜಿನಿಯರಿಂಗ್ ಮತ್ತು ಐಟಿಐ ಕಾಲೇಜ್ ಪ್ರದೇಶದ ಬೆಟ್ಟದ 2 ಚಿರತೆಗಳು ಪ್ರತ್ಯಕ್ಷವಾಗಿ ವಾಯುವಿಹಾರಕ್ಕೆ ತೆರಳಿದ್ದ ಜನರಿಗೆ ಕಂಡುಬಂದಿವೆ . ಅಲ್ಲಿದ್ದ ಜನರು ತಮ್ಮ ಮೊಬೈಲ್ ಗಳ ಮೂಲಕ ಫೋಟೋ ಮತ್ತು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ .ಕೂಡಲೇ ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ತಾಲ್ಲೂಕು ಆಡಳಿತ ಕ್ರಮ ಕೈಗೊಂಡು ಚಿರತೆಗಳು ಕಂಡುಬಂದಿರುವ ಪ್ರದೇಶದಲ್ಲಿ ಬೋನುಗಳನ್ನು ಇರಿಸಿ ಅವುಗಳನ್ನು ಸೆರೆ ಹಿಡಿದು ದೂರದ ಬೆಟ್ಟಗಳಲ್ಲಿ ಬಿಡಬೇಕಾಗಿದೆ .

ಚಿರತೆಗಳ ಹಾವಳಿಯಿಂದ ತಾಲ್ಲೂಕಿನ ಅಂಜನಾದ್ರಿ, ಪಂಪಾಸರೋವರ , ಆದಿಶಕ್ತಿ ದೇಗುಲಗಳಿಗೆ ಸುಮಾರು 2 ತಿಂಗಳ ಕಾಲ ಸಾರ್ವಜನಿಕ ದರ್ಶನಕ್ಕೆ ನಿರ್ಬಂಧ ಹೇರಲಾಗಿತ್ತು. ಶರನ್ನವರಾತ್ರಿ ಸಂದರ್ಭದಲ್ಲಿ  ಜನರು ಆನೆಗುಂದಿ ಭಾಗ ಮತ್ತು ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡುವ ಸಂದರ್ಭ ಇರುವುದರಿಂದ ಜಾರನ ಚಿರತೆ ಮತ್ತು ಕರಡಿ ಗಳಿಂದ ಕಾಪಾಡಬೇಕಾದ ಜವಾಬ್ದಾರಿ ಜಿಲ್ಲಾಡಳಿತಕ್ಕಿದೆ. ಆದ್ದರಿಂದ ಅರಣ್ಯ ಇಲಾಖೆ ಮತ್ತು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಗಲು ರಾತ್ರಿ ಗಸ್ತು ನಡೆಸುವ ಮೂಲಕ ಪ್ರಾಣಿಗಳಿಂದ ಜನ ಜಾನುವಾರುಗಳನ್ನು  ಕಾಪಾಡಬೇಕಿದ್ದು ಕೂಡಲೇ ಬೋನುಗಳನ್ನು ಇರಿಸುವಂತೆ ಜನರು ಮನವಿ ಮಾಡಿದ್ದಾರೆ .

Advertisement
Advertisement

Udayavani is now on Telegram. Click here to join our channel and stay updated with the latest news.

Next