Advertisement

ನವದೆಹಲಿ: ಕೋವಿಡ್ 19 ವೈರಸ್ ಗೆ ಇಬ್ಬರು ಬಿಎಸ್ ಎಫ್ ಯೋಧರು ಸಾವು

08:20 AM May 08, 2020 | Nagendra Trasi |

ನವದೆಹಲಿ:ಕೋವಿಡ್ 19 ವೈರಸ್ ಗೆ ಇಬ್ಬರು ಗಡಿ ಭದ್ರತಾಪಡೆಯ (ಬಿಎಸ್ ಎಫ್) ಯೋಧರು ಸಾವನ್ನಪ್ಪಿರುವ ಘಟನೆ ಗುರುವಾರ ನಡೆದಿದೆ. ಕೋವಿಡ್ 19 ವೈರಸ್ ನಿಂದ ಬಿಎಸ್ ಎಫ್ ನಲ್ಲಿ ವರದಿಯಾದ ಮೊದಲ ಸಾವಿನ ಪ್ರಕರಣ ಇದಾಗಿದೆ ಎಂದು ವರದಿ ತಿಳಿಸಿದೆ.

Advertisement

ಬಿಎಸ್ ಎಫ್ ನ ಒಬ್ಬರು ಯೋಧರು ಗುರುವಾರ ವಿಧಿವಶರಾಗಿದ್ದು, ಮತ್ತೊಬ್ಬರು ಸೋಮವಾರ ದಿಲ್ಲಿಯ ಸಫ್ದರ್ ಜಂಗ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು ಎಂದು ವರದಿ ಹೇಳಿದೆ.

ಕಳೆದ ತಿಂಗಳು ಸಿಆರ್ ಪಿಎಫ್ ನ 55 ವರ್ಷದ ಸಬ್ ಇನ್ಸ್ ಪೆಕ್ಟರ್ ವಿಧಿವಶರಾಗಿದ್ದರು. ಬಿಎಸ್ ಎಫ್ ಪ್ರಕಟಣೆ ಪ್ರಕಾರ, ಕೋವಿಡ್ 19 ವೈರಸ್ ನಿಂದ ಸಾವನ್ನಪ್ಪಿರುವ ಬಿಎಸ್ ಎಫ್ ಯೋಧರ ಕುಟುಂಬಕ್ಕೆ ತೀವ್ರ ಸಂತಾಪ ಸೂಚಿಸಿದ್ದು, ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಬರಲಿ ಎಂದು ತಿಳಿಸಿದ್ದಾರೆ.

ಬುಧವಾರ ನಡೆಸಿದ ಪರೀಕ್ಷೆಯಲ್ಲಿ 85 ಬಿಎಸ್ ಎಫ್ ಸಿಬ್ಬಂದಿಗಳಿಗೆ ಕೋವಿಡ್ 19 ವೈರಸ್ ಪಾಸಿಟಿವ್ ವರದಿ ಬಂದಿತ್ತು. ಒಂದೇ ದಿನದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಪ್ರಕರಣ ಪತ್ತೆಯಾಗಿದೆ. ಕೋವಿಡ್ 19 ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರದ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next