ವಾಷಿಂಗ್ಟನ್: ವಿಜ್ಞಾನ ಮತ್ತು ಗಣಿತ ವಿಷಯಗಳ ಬಗ್ಗೆ ಹದಿಹರೆಯದವರಲ್ಲಿ ಇರುವ ಅಭೀಪ್ಸೆಯನ್ನು ಗುರುತಿಸುವ ಉದ್ದೇಶದಿಂದ ಜಾಗತಿಕ ಮಟ್ಟದಲ್ಲಿ ನಡೆಸುವ ‘ಬ್ರೇಕ್ ತ್ರೂ ಜೂನಿಯರ್ ಚಾಲೆಂಜ್’ ಸ್ಪರ್ಧೆಯ ಫೈನಲ್‌ಗೆ ಬೆಂಗಳೂರಿನ ನಿಖೀಯಾ ಶಂಶೀರ್ (16) ಸೇರಿದಂತೆ ಸಮಯ್ ಗೋಡಿಕಾ (16) ಹಾಗೂ ಕಾವ್ಯಾ ನೇಗಿ (18) ಎಂಬ ಮೂವರು ವಿದ್ಯಾರ್ಥಿಗಳು ಕಾಲಿಟ್ಟಿದ್ದಾರೆ. ಸ್ಪರ್ಧೆಗೆ ನಾನಾ ದೇಶಗಳ 1,200 ಸ್ಪರ್ಧಾಳುಗಳು ಭಾಗವಹಿಸಿದ್ದು, ಇವರ ಲ್ಲೀಗ ಪ್ರಶಸ್ತಿ ಕಾಲಿಟ್ಟಿರುವುದು ಕೇವಲ 15 ಜನ. ಇವರಲ್ಲಿ ವಿಜೇತರಾದ ವಿದ್ಯಾರ್ಥಿಯು ತನ್ನ ಕಾಲೇಜು ವ್ಯಾಸಂಗಕ್ಕಾಗಿ 1.83 ಕೋಟಿ ರೂ.ಗಳನ್ನು ಶಿಷ್ಯ ವೇತನದ ರೂಪದಲ್ಲಿ ಪಡೆಯಲಿದ್ದಾರೆ. ಇವರ ಅಭೀಪ್ಸೆಯನ್ನು ಜಾಗತಿಕ ಮಟ್ಟಕ್ಕೆ ಬೆಳೆಸಿದ ಆತನ ಶಿಕ್ಷಕನಿಗೆ 36,65,000 ರೂ.ಗಳನ್ನು ಬಹುಮಾನವಾಗಿ ನೀಡಲಾಗುತ್ತದೆ. ಈ ಇಬ್ಬರನ್ನು ಕಳುಹಿಸಿದ ಶಾಲೆಗೆ ಅತ್ಯುತ್ತಮ ವಿಜ್ಞಾನ ಪ್ರಯೋಗಾಲಯ ವನ್ನು ಹೊಂದಲು 73 ಲಕ್ಷ ರೂ.ಗಳನ್ನು ನೀಡಲಾಗುತ್ತದೆ.