Advertisement
ಈಗಾಗಲೇ ನ್ಯೂಜಿಲ್ಯಾಂಡ್ ಮತ್ತು ಶ್ರೀಲಂಕಾ ತಂಡವನ್ನು ಸೋಲಿಸಿರುವ ಆಸ್ಟ್ರೇಲಿಯ ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡವಾಗಿದೆ. ಆಸ್ಟೇಲಿಯ ಮುಂದಿನ ರವಿವಾರ (ಅ. 13) ಭಾರತ ತಂಡವನ್ನು ಎದುರಿಸಲಿದೆ. ಭಾರತ ಆಡಿದ ಮೂರು ಪಂದ್ಯದಲ್ಲಿ ಎರಡರಲ್ಲಿ ಗೆದ್ದು ನಾಲ್ಕು ಅಂಕದೊಂದಿಗೆ ಸದ್ಯ ದ್ವಿತೀಯ ಸ್ಥಾನದಲ್ಲಿದೆ. ಆದರೆ ಭಾರತಕ್ಕೆ ನ್ಯೂಜಿಲ್ಯಾಂಡ್ ತೀವ್ರ ಸ್ಪರ್ಧೆ ನೀಡುವ ಸಾಧ್ಯತೆಯಿದೆ. ನ್ಯೂಜಿಲ್ಯಾಂಡ್ ಆಡಿದ ಎರಡು ಪಂದ್ಯದಲ್ಲಿ ಒಂದರಲ್ಲಿ ಗೆದ್ದು ಎರಡಂಕ ಹೊಂದಿದೆ.
ತಂದೆ ನಿಧನ ಹೊಂದಿದ ಹಿನ್ನೆಲೆಯಲ್ಲಿ ಪಾಕಿಸ್ಥಾನದ ನಾಯಕಿ ಫಾತಿಮಾ ಸನಾ ಅವರು ತುರ್ತಾಗಿ ಕರಾಚಿಗೆ ತೆರಳಿದ್ದರಿಂದ ಅವರು ಶುಕ್ರವಾರದ ಆಸ್ಟ್ರೇಲಿಯ ವಿರುದ್ಧದ ಪಂದ್ಯದಲ್ಲಿ ಆಡುವುದಿಲ್ಲ. ಇದು ಪಾಕಿಸ್ಥಾನಕ್ಕೆ ದೊಡ್ಡ ಹೊಡೆತ ಎನ್ನಲಾಗಿದೆ. ಸನಾ ಅವರ ಬದಲಿಗೆ ಮುನೀಬಾ ಅಲಿ ಅವರನ್ನು ತಂಡವನ್ನು ಮುನ್ನಡೆಸಲಿದ್ದಾರೆ.
Related Articles
Advertisement
ರಾತ್ರಿ 7.30ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ವಿಂಡೀಸ್‌ಗೆ ಭರ್ಜರಿ ಗೆಲುವು ಶಾರ್ಜಾ: ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ವೆಸ್ಟ್ ಇಂಡೀಸ್ ವನಿತೆಯರು ಗುರುವಾರ ನಡೆದ ವನಿತಾ ಟಿ20 ವಿಶ್ವಕಪ್ ಕೂಟದ “ಬಿ’ ಬಣದ ಪಂದ್ಯದಲ್ಲಿ ಬಾಂಗ್ಲಾದೇಶ ವನಿತೆಯರನ್ನು 8 ವಿಕೆಟ್‌ಗಳಿಂದ ಭರ್ಜರಿಯಾಗಿ ಸೋಲಿಸಿದ್ದಾರೆ. ಈ ಗೆಲುವಿನಿಂದ ವೆಸ್ಟ್‌ಇಂಡೀಸ್ ತಾನಾಡಿದ ಮೂರು ಪಂದ್ಯಗಳಿಂದ ನಾಲ್ಕು ಅಂಕ ಸಂಪಾದಿಸಿ ಉತ್ತಮ ರನ್‌ಧಾರಣೆಯ ಆಧಾರದಲ್ಲಿ ಬಣದ ಅಗ್ರಸ್ಥಾನ ಪಡೆದು ಸೆಮಿಫೈನಲಿಗೇರುವ ಆಸೆಯನ್ನು ಜೀವಂತವಿರಿಸಿಕೊಂಡಿದೆ. ವೆಸ್ಟ್ ಇಂಡೀಸ್ ಅಂತಿಮ ಲೀಗ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ತಾನಾಡಿದ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿದ ಇಂಗ್ಲೆಂಡ್ ನಾಲ್ಕಂಕ ಗಳಿಸಿದ್ದು ಸದ್ಯ ಮೂರನೇ ಸ್ಥಾನದಲ್ಲಿದೆ. ಆಡಿದ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಗೆದ್ದು ನಾಲ್ಕಂಕ ಪಡೆದ ದಕ್ಷಿಣ ಆಫ್ರಿಕಾ ಉತ್ತಮ ರನ್‌ಧಾರಣೆಯ ಆಧಾರದಲ್ಲಿ ಸದ್ಯ ದ್ವಿತೀಯ ಸ್ಥಾನ ಪಡೆದಿದೆ. ದಕ್ಷಿಣ ಆಫ್ರಿಕಾ ಶನಿವಾರ ಬಾಂಗ್ಲಾವನ್ನು ಎದುರಿಸಲಿದ್ದು ಇಲ್ಲಿ ಗೆದ್ದರೆ ಸೆಮಿಫೈನಲಿಗೇರುವ ಸಾಧ್ಯತೆಯಿದೆ. ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶವು ನಿಗರ್ ಸುಲ್ತಾನಾ (39) ಅವರ ಉತ್ತಮ ಆಟದಿಂದಾಗಿ 8 ವಿಕೆಟಿಗೆ 103 ರನ್ ಗಳಿಸಿತು. ಇದಕ್ಕುತ್ತರವಾಗಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ವೆಸ್ಟ್‌ಇಂಡೀಸ್ ವನಿತೆಯರು ಕೇವಲ ಎರಡು ವಿಕೆಟ್ ಕಳೆದುಕೊಂಡು 12.5 ಓವರ್‌ಗಳಲ್ಲಿ 104 ರನ್ ಗಳಿಸಿ ಜಯಭೇರಿ ಬಾರಿಸಿತು.