ಮುಂಬಯಿ: ನಟ ಸಲ್ಮಾನ್ ಖಾನ್ ಅವರ ಫಾರ್ಮ್‌ಹೌಸ್‌ಗೆ ನುಗ್ಗಲು ಯತ್ನಿಸಿದ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜ.4 ರಂದು ಈ ಘಟನೆ ನಡೆದಿದ್ದು, ಮಹಾರಾಷ್ಟ್ರದ ಮುಂಬೈ ಸಮೀಪದ ಪನ್ವೇಲ್‌ನಲ್ಲಿರುವ ನಟ ಸಲ್ಮಾನ್ ಖಾನ್ ಅವರ ಫಾರ್ಮ್‌ಹೌಸ್‌ಗೆ ನುಗ್ಗಲು ಯತ್ನಿಸಿದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಾದ ಅಜೇಶ್ ಕುಮಾರ್ ಮತ್ತು ಗುರುಸೇವಕ್ ಸಿಂಗ್ ಅವರು ಅರ್ಪಿತಾ ಫಾರ್ಮ್‌ಹೌಸ್‌ನಲ್ಲಿರುವ ಭದ್ರತಾ ಸಿಬ್ಬಂದಿಯ ಬಳಿ ನಾವು ಸಲ್ಮಾನ್ ಖಾನ್ ಅವರ ಅಭಿಮಾನಿ, ಅವರನ್ನು ಭೇಟಿ ಆಗಬೇಕೆಂದಿದ್ದಾರೆ.
ಆ ಬಳಿಕ ಕಂಪೌಂಡ್ ಮೇಲೆ ಹಾರಲು ಯತ್ನಿಸಿ, ಕಂಪೌಂಡ್ ಮೇಲಿನ ತಂತಿಯನ್ನು ತೆಗೆಲು ಯತ್ನಿಸಿ, ಫಾರ್ಮ್ ಹೌಸ್ ಪ್ರವೇಶಿಸಲು ಹೊರಟಿದ್ದಾರೆ.
ಅವರ ಚಟುವಟಿಕೆಗಳ ಬಗ್ಗೆ ಭದ್ರತಾ ಸಿಬ್ಬಂದಿಗೆ ಅನುಮಾನ ಬಂದಾಗ ಅವರು ಪೊಲೀಸರಿಗೆ ಕರೆ ಮಾಡಿದ್ದಾರೆ. ನಂತರ ಆರೋಪಿಗಳನ್ನು ಹಿಡಿದು ಪೊಲೀಸ್ ತಂಡಕ್ಕೆ ಒಪ್ಪಿಸಲಾಗಿದೆ. ಆರೋಪಿಗಳನ್ನು ಬಂಧಿಸಿ ಅವರಿಂದ ನಕಲಿ ಆಧಾರ್ ಕಾರ್ಡ್ ವಶಕ್ಕೆ ಪಡೆದಿದ್ದು, ಭದ್ರತಾ ಸಿಬ್ಬಂದಿಯ ಬಳಿ ಆರೋಪಿಗಳು ಬೇರೆ ಹೆಸರನ್ನು ಹೇಳಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.