Advertisement
ಸೀತಾಮಾತೆ, ಜಾನಕಿಯ ಜನ್ಮಸ್ಥಳ ವೆಂದೇ ಹೇಳಲಾಗುವ ನೇಪಾಲ ದಲ್ಲಿಯೂ ರಾಮಾಯಣ ಕೃತಿಗಳು ಲಭ್ಯವಿವೆ. ರಾಮಾಯಣದ ಅತೀ ಹಳೆಯ ಪ್ರತಿಯು ನೇಪಾಲದಲ್ಲಿ ದೊರಕಿ ದೆ. 19ನೇ ಶತಮಾನದ ಮಧ್ಯ ಭಾಗ ಮತ್ತು 20ನೇ ಶತಮಾನದ ಆರಂಭದಲ್ಲಿ ನೇಪಾಲದಲ್ಲಿ ರಾಮಾಯಣ ಸಂಬಂಧಿ ಎರಡು ಕೃತಿಗಳು ರಚನೆಯಾಗಿದ್ದವು.ಆದಿಕವಿ ಭಾನುಭಕ್ತ ಆಚಾರ್ಯರಿಂದ ರಚಿತವಾದ “ಭಾನುಭಕ್¤ಕೋ ರಾಮಾ ಯಣ’ ವು ನೇಪಾಲಿ ಭಾಷೆಯ ಮೊದಲ ಮಹಾಕಾವ್ಯವಾಗಿದೆ ಹಾಗೂ ಅತ್ಯಂತ ಪ್ರಸಿದ್ಧವಾದ ಕೃತಿಯಾಗಿದೆ. ಈ ಕಾರಣ ದಿಂದ ಭಾನುಭಕ್ತನನ್ನು ಆದಿ ಕವಿ ಎಂದೇ ಕರೆಯಲಾಗಿದೆ.
ನೇಪಾಲದ ಸಂಸ್ಕೃತಿ ಯಲ್ಲೂ ರಾಮಾಯಣ ಹಾಸು ಹೊಕ್ಕಾಗಿದೆ. ಪ್ರತೀ ವರ್ಷ ಭಗವಾನ್ ಶ್ರೀರಾಮ ಹಾಗೂ ಸೀತಾ ಮಾತೆಯ ವಿವಾಹದ ಸಂಕೇತವಾಗಿ “ಬಿಬಾಹ ಪಂಚಮಿ’ ಎಂಬ ಹಬ್ಬವನ್ನು ಆಚರಿ ಸಲಾಗುತ್ತದೆ. ಜನಕಪುರ: ನೇಪಾಲದ ಧಾನುಷಾ ಜಿಲ್ಲೆಯಲ್ಲಿ ಜನಕ್‌ಪುರ್‌ಧಾಮ್ ಅಥವಾ ಜನಕಪುರ ವೆಂಬ ನಗರವಿದೆ. ಸೀತಾಮಾತೆಯ ತಂದೆ, ಜನಕ ಈ ಸ್ಥಳದ ರಾಜನಾಗಿದ್ದ ಹಾಗೂ ಈ ಪುಣ್ಯಭೂಮಿಯಲ್ಲೇ ಜನಕನಿಗೆ ಸೀತೆ ದೊರಕಿದ್ದು ಎಂಬ ನಂಬಿಕೆ ಇಲ್ಲಿನ ರಾಮಭಕ್ತರದ್ದಾಗಿದೆ. ಈ ನಗರದಲ್ಲಿ ಸೀತೆ ಹಾಗೂ ರಾಮರ ದೇಗುಲಗಳಿವೆ. ಜನಕಪುರ ನಗರದ ಮಧ್ಯದಲ್ಲಿ ಜಾನಕಿ ಮಂದಿರವಿದ್ದು ನೇಪಾಲದ ಅತೀ ದೊಡ್ಡ ಮಂದಿರಗಳಲ್ಲಿ ಒಂದಾಗಿದೆ. ಇಲ್ಲಿ ಇರುವ ಸೀತೆಯ ವಿಗ್ರಹವು ಹೂವಿನ ಆಕಾರದಿಂದ ಆವೃತವಾಗಿದ್ದು, ಅಯೋಧ್ಯೆಯ ಸರಯೂ ನದಿಯ ಸಮೀಪದಲ್ಲಿ ಇದು ದೊರಕಿದೆ ಎಂದು ಹೇಳಲಾಗುತ್ತದೆ. ಇದರ ಪಕ್ಕದಲ್ಲೇ ಶ್ರೀರಾಮ ಹಾಗೂ ಸಹೋದರರ ಪ್ರತಿಮೆಗಳನ್ನು ಕಾಣಬಹುದು. ಈ ಮಂದಿರದ ಪಕ್ಕದಲ್ಲೇ ರಾಮ ಸೀತಾ ವಿಹಾರ ಮಂದಿ ರವಿದೆ. ಇನ್ನು ಈ ನಗರದ ಅತೀ ಹಳೆಯ ದೇಗುಲ ಶ್ರೀ ರಾಮ ದೇಗುಲದಲ್ಲಿ 200ಕ್ಕಿಂತಲೂ ಅಧಿಕ ಪವಿತ್ರ ಕೊಳಗಳಿವೆ.
Related Articles
Advertisement