ಕುಣಿಗಲ್: ತಾಲೂಕಿನ ಇಪ್ಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ 2019-20ನೇಸಾಲಿನಲ್ಲಿ 602 ಮಂದಿ ಸದಸ್ಯರಿಗೆ 2.47 ಕೋಟಿರೂ. ಸಾಲ ನೀಡಲಾಗಿದೆ ಎಂದು ಸಂಘದ ಅಧ್ಯಕ್ಷ ಐ.ಜಿ.ರಮೇಶ್ ಹೇಳಿದರು.
ಸಂಘದ ಕಚೇರಿ ಆವರಣದಲ್ಲಿ ನಡೆದ 2019-20ನೇ ಸಾಲಿನ ಸಂಘದ ಸರ್ವ ಸದಸ್ಯರ ವಾರ್ಷಿಕಮಹಾಸಭೆ ಉದ್ಘಾಟಿಸಿ ಮಾತನಾಡಿದರು.
602 ಮಂದಿಗೆ ಸಾಲ: ಸಹಕಾರ ಸಂಘಗಳು ರೈತರ ಜೀವನಾಡಿಯಾಗಿವೆ. ಈ ನಿಟ್ಟಿನಲ್ಲಿ ನಮ್ಮ ಸಂಘವು 2017-18ನೇ ಸಾಲಿನಲ್ಲಿ 531 ಜನ ಸದಸ್ಯರಿಗೆ 2,00,35,000 ಕೋಟಿ ಸಾಲಮನ್ನಾ ಮಾಡಿ,2019-20ನೇ ಸಾಲಿನಲ್ಲಿ ಹೊಸದಾಗಿ 602 ಮಂದಿಸದಸ್ಯರಿಗೆ 2,47,70000 ಕೋಟಿ ಸಾಲ ನೀಡಲಾಗಿದೆ ಎಂದರು.
2.97 ಲಕ್ಷ ಲಾಭ: ಕಳೆದ ಸಾಲಿನಲ್ಲಿ ಸಂಘವು ಕೇವಲ 2 ಸಾವಿರ ರೂ. ಲಾಭದಲ್ಲಿತ್ತು, ಗೊಬ್ಬರ ಮಾರಾಟ ಸೇರಿದಂತೆ ವಿವಿಧ ಮೂಲಗಳಿಂದ 2019-20ನೇ ಸಾಲಿನಲ್ಲಿ 2.97 ಲಕ್ಷ ಲಾಭಗಳಿಸಿದೆ. ಇದಕ್ಕೆ ಸಂಘದಎಲ್ಲಾ ನಿರ್ದೇಶಕರ, ಸದಸ್ಯರ ಹಾಗೂ ಸಿಬ್ಬಂದಿ ಸಹಕಾರ ಕಾರಣವಾಗಿದೆ. ಅಲ್ಲದೆ 10 ಗುಂಟೆ ಜಮೀನಿದ್ದು ಪಹಣಿ ಹೊಂದಿರುವ ಎಲ್ಲಾ ರೈತರಿಗೂ ಸಾಲ ನೀಡಲಾಗು ವುದು, ಅಗತ್ಯ ದಾಖಲೆಗಳು ನೀಡಿ ಸೌಲಭ್ಯ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಮೃತರ ಸಾಲಮನ್ನಾ: ಜಿಲ್ಲೆಯ ವಿಎಸ್‌ಎಸ್‌ಎನ್ ನಿಂದ ಸಾಲ ತೆಗೆದುಕೊಂಡು ಕಾರಣಾಂತರಗಳಿಂದ ಮೃತಪಟ್ಟ ರೈತರ ಸಾಲ ಮನ್ನಾ ಮಾಡಿ ದೇಶಕ್ಕೆತುಮಕೂರು ಡಿಸಿಸಿ ಬ್ಯಾಂಕ್ ಮಾದರಿಯಾಗಿದೆ.ಇದಕ್ಕೆ ಅಧ್ಯಕ್ಷ ಕೆ.ಎನ್.ರಾಜಣ್ಣ ಅವರ ಆಡಳಿತಮಂಡಲಿ ಕಾರಣವಾಗಿ ಹೊಸ ದಾಖಲೆ ಬರೆದಿದೆ, ಈ ದಿಸೆಯಲ್ಲಿ ಇಪ್ಪಾಡಿ ವಿಎಸ್‌ಎಸ್‌ಎನ್ 34 ಮೃತಸದಸ್ಯರ 11,77,000 ಲಕ್ಷ ಸಾಲ ಮನ್ನಾ ಮಾಡಿದ್ದು ಇದು ಮೃತ ಕುಟುಂಬಗಳಿಗೆ ಅನುಕೂಲವಾಗಿದೆ ಎಂದು ತಿಳಿಸಿದರು.
ಬ್ಯಾಂಕ್ ಪ್ರಾರಂಭ: ಸಂಘಕ್ಕೆ ಉತ್ತಮ ಕಟ್ಟಡವಿದೆ, ಹಾಗಾಗಿ ಜ.1, 2021 ರಿಂದ ಸಂಘದಲ್ಲಿ ಬ್ಯಾಂಕ್ ಪ್ರಾರಂಭಿಸಲಾಗುತ್ತಿದೆ. ಚಿನ್ನಾಭರಣ ಮೇಲಿನ ಸಾಲ ಸೇರಿದಂತೆ ವಿವಿಧ ಸಾಲ ಸೌಲಭ್ಯಗಳನ್ನುನೀಡಲಾಗುವುದು. ಹೀಗಾಗಿ ಸದಸ್ಯರು ರಾಷ್ಟ್ರೀಕೃತಬ್ಯಾಂಕ್‌ಗಳಲ್ಲಿ ವ್ಯವಹರಿಸುವುದನ್ನು ಬಿಟ್ಟು, ರೈತರ ಅಭಿವೃದ್ಧಿಗೆ ಶ್ರಮಿಸುತ್ತಿರುವ ಸಂಘದಲ್ಲೇ ಉಳಿತಾಯ ಖಾತೆ ತೆರೆದು ವ್ಯವಹರಿಸಿ ಬ್ಯಾಂಕ್‌ಉಳಿವಿಗೆ ಶ್ರಮಿಸಬೇಕು. ಮುಂದಿನ ದಿನದಲ್ಲಿ ಜನತಾ ಬಜಾರ್ ಪ್ರಾರಂಭಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಎಚ್.ಬಿ. ಬೋರೇಗೌಡ, ನಿರ್ದೇಶಕರಾದ ನಿಂಗಯ್ಯ, ಶಿವಾಜಿರಾವ್, ಐ.ಬಿ.ಶಿವಣ್ಣ, ರಂಗಪ್ಪ, ಚಿಕ್ಕಮ್ಮ, ಲಕ್ಷ್ಮೀಕಾಂತಯ್ಯ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ರಂಗಸ್ವಾಮಿ ಇದ್ದರು.