Advertisement

Research; 1 ಲೀಟರ್‌ ಬಾಟಲಿ ನೀರಲ್ಲಿ 2.40 ಲಕ್ಷ ಪ್ಲಾಸ್ಟಿಕ್‌ ಕಣ!‌

01:11 AM Jan 10, 2024 | Team Udayavani |

ಹೊಸದಿಲ್ಲಿ: ಒಂದು ಲೀಟರ್‌ ಪ್ಲಾಸ್ಟಿಕ್‌ ಬಾಟಲಿಯಲ್ಲಿನ ನೀರಿನಲ್ಲಿ 2,40,000 ಅತೀಸೂಕ್ಷ್ಮ ಪ್ಲಾಸ್ಟಿಕ್‌ (ನ್ಯಾನೋಪ್ಲಾಸ್ಟಿಕ್‌) ಕಣಗಳಿರುತ್ತವೆ! ಹೀಗೆಂದು ಅಮೆರಿಕದ ನ್ಯಾಶನಲ್‌ ಅಕಾಡೆಮಿ ಆಫ್ ಸೈನ್ಸಸ್‌ ನಿಯತಕಾಲಿಕೆಯಲ್ಲಿ ಪ್ರಕಟವಾದ ಲೇಖ ನದಲ್ಲಿ ಸಂಶೋಧಕರು ತಿಳಿಸಿದ್ದಾರೆ.

Advertisement

ಈ ಹಿಂದೆ ಪ್ಲಾಸ್ಟಿಕ್‌ ಬಾಟಲಿಯಲ್ಲಿ ಇರುತ್ತವೆ ಎಂದು ಅಂದಾಜಿಸಿದ್ದ ಸೂಕ್ಷ್ಮ ಕಣಗಳಿಗಿಂತ, 100 ಪಟ್ಟು ಹೆಚ್ಚು ಅಪಾ ಯ ಕಾರಿ ಕಣಗಳು ಒಂದು ಲೀ. ಬಾಟಲಿ ಯಲ್ಲಿ ಇರುವುದನ್ನು ವಿಜ್ಞಾನಿಗಳು ಈಗ ಪತ್ತೆಹಚ್ಚಿದ್ದಾರೆ.

ಈ ನ್ಯಾನೋಪ್ಲಾಸ್ಟಿಕ್‌ಗಳು ಮನುಷ್ಯನ ಜೀವಕೋಶಗಳು, ರಕ್ತದಲ್ಲಿ ನುಗ್ಗಿ ಗಂಭೀರ ಅನಾರೋಗ್ಯಗಳಿಗೆ ಕಾರಣ ವಾಗಬಹುದು ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. ಮಾತ್ರವಲ್ಲ ಇನ್ನೂ ಗರ್ಭದಲ್ಲೇ ಇರುವ ಮಗುವಿನ ದೇಹ ದೊ ಳಕ್ಕೂ ಈ ಸೂಕ್ಷ್ಮ ಕಣಗಳು ಪ್ರವೇಶಿಸಿ ಅನಾರೋಗ್ಯಕ್ಕೆ ಕಾರಣವಾಗುವ ಶಕ್ತಿ ಹೊಂದಿವೆ. ಈ ಹಿಂದೆ ಮೈಕ್ರೋಮೀಟರ್‌ ಗಾತ್ರದ ಪ್ಲಾಸ್ಟಿಕ್‌ ಕಣಗಳಿರುವುದನ್ನು ವಿಜ್ಞಾನಿಗಳು ತಿಳಿಸಿದ್ದರು. ಇದೀಗ ಅದಕ್ಕೂ ಸೂಕ್ಷ್ಮವಾದ ನ್ಯಾನೋ ಪ್ಲಾಸ್ಟಿಕ್‌ ಕಣಗಳನ್ನು ಪತ್ತೆಹಚ್ಚಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next