Advertisement

ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್ ಕುರಿತಾಗಿ ನಿಮ್ಮ ಅಭಿಪ್ರಾಯವೇನು

05:24 PM Feb 02, 2020 | keerthan |

ಮಣಿಪಾಲ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಮಂಡಿಸಿದ ಬಜೆಟ್ ಕುರಿತಾಗಿ ನಿಮ್ಮ ಅಭಿಪ್ರಾಯವೇನು ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು ಆಯ್ದ ಉತ್ತರಗಳು ಇಲ್ಲಿವೆ.

Advertisement

ಬಕ್ಕೇಶಿ ಯಲಮಳ್ಲಿ: ಈ ಸಂದರ್ಭದಲ್ಲಿ ಇದಕ್ಕಿಂತ ಒಳ್ಳೆಯ ಬಜೆಟ್ ಸಾಧ್ಯವಿಲ್ಲ .

ಪ್ರದೀಪ್ ಎಚ್ ದರ್ಶನ್: ಆಟೋಮೊಬೈಲ್ ಮಕಾಡೆ ಮಲಗಿದೆ ಜಿಡಿಪಿ 2% ಗೆ ಇಳಿದಿದೆ. 2ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೀನಿ ಅಂತ ಸುಳ್ಳು ಭರವಸೆಯನ್ನು ಯಾಕೆ ಕೊಡಬೇಕು . ಖಾಸಗಿ ಕಂಪನಿಗಳು ಮೂರು ಪಾಳಿಯಲ್ಲಿ ಕೆಲಸ ಮಾಡುವ ಬದಲು ಕೇವಲ ಎಂಟು ಗಂಟೆಗಳ ಕಾಲ ನಡೆಯುತ್ತಿವೆ!

ಮೊಹಮ್ಮದ್ ರಫೀಕ್ ಕೊಲ್ಪೆ: ಬಜೆಟ್ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಗೆ ಪೂರಕವಾಗಿಲ್ಲ ಎಂಬುದು ಸ್ಪಷ್ಟವಾಗಿದೆ. ಇವತ್ತಿನ ಬಜೆಟ್ ಪ್ರಸ್ತಾವಗಳು ವಿಶ್ವಾಸ ಮೂಡಿಸದ ಹಿನ್ನೆಲೆಯಲ್ಲಿ ಷೇರುಪೇಟೆ ತೀವ್ರ ಕುಸಿತ ಕಂಡಿದೆ. ಇದು ಬಜೆಟ್ ವಿಫಲತೆಯನ್ನು ತೋರಿಸುತ್ತದೆ.

ರಾಜೇಶ್ ಅಂಚನ್ ಎಂ ಬಿ: ಇಂದಿನ ವಿಶ್ವದ ಆರ್ಥಿಕ ಹಿಂಜರಿತದ ಸಮಯದಲ್ಲಿ ಈ ಬಜೆಟ್ ಚೇತೋಹಾರಿಯಾಗಿದೆ.ಇ ದಕ್ಕಿಂತ ಉತ್ತಮ ಬಜೆಟ್ ನಿರೀಕ್ಷೆ ಈ ಸಮಯದಲ್ಲಿ ಸಾಧ್ಯವಿಲ್ಲ. ತೆರಿಗೆ ವಿನಾಯಿತಿ, ತೆರಿಗೆ ಆಯ್ಕೆ ವಿಧಾನ ತೆರಿಗೆದಾರರಿಗೆ ಬಿಟ್ಟಿರೋದು,ಬ್ಯಾಂಕ್ ಠೇವಣಿ ಖಾತರಿ ಮೊತ್ತ 5 ಲಕ್ಷಕ್ಕೆ ಏರಿಕೆ, ಆಯುಸ್ಮಾನ್ ಯೋಜನೆಗೆ ಹೆಚ್ಚು ಹಣ ನಿಗದಿ, ರೈತರಿಗೆ ಅನೇಕ ಉಪಯುಕ್ತ ಯೋಜನೆಗಳು ಇವೆಲ್ಲಾ ಈ ಬಜೆಟ್ ನಲ್ಲಿ ಮೆಚ್ಚ ತಕ್ಕ ಅಂಶಗಳು. ಈ ಸಾಲಿನಲ್ಲಿ ಜಿಡಿಪಿ ದರ ಖಂಡಿತಾ ಏರು ಗತಿಯಲ್ಲಿ ಸಾಗುತ್ತೆ ಅನ್ನೋ ನಂಬಿಕೆ ಖಂಡಿತಾ ಇದೆ

Advertisement

ಶಶೀಂದ್ರ ಸಿ ಎಸ್: ಬಜೆಟ್ ಅವರ ಏಳಿಗೆಗಾಗಿ… ಕೂಲಿಕಾರ್ಮಿಕರು, ಮಧ್ಯಮ ವರ್ಗದವರ ಗೊಳಾಟಕ್ಕೆ ಕೊನೆಯಿಲ್ಲ. ಬಡವರ ಬೆವರಿನ ತೆರಿಗೆಯಲ್ಲಿ, ಎಸಿ ಹಾಕಿಕೊಂಡು ಕಾರಿನಲ್ಲಿ ತಿರುಗಾಡುವ ಕುತಂತ್ರಿ ರಾಜಕಾರಣಿಗಳ ನಿರ್ನಾಮ ಆಗುವರೆಗೂ ಇಂತಹ ಬಜೆಟ್ ಅಪ್ರಯೋಜಕ.

Advertisement

Udayavani is now on Telegram. Click here to join our channel and stay updated with the latest news.

Next