Advertisement

Ayodhya: ಗರ್ಭಗುಡಿಯಲ್ಲಿ ರಾಮಲಲ್ಲಾ ವಿರಾಜಮಾನ… ಮೊದಲ ಫೋಟೋ ಬಹಿರಂಗ

08:32 AM Jan 19, 2024 | Team Udayavani |

ಲಕ್ನೋ: ಅಯೋಧ್ಯೆಯ ರಾಮ ಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾ ಗುರುವಾರ ವಿರಾಜಮಾನ ನಾಗಿದ್ದಾನೆ. ಸಂಜೆ ವೇಳೆಗೆ ಬಾಲರಾಮನ ವಿಗ್ರಹವನ್ನು ಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗಿದೆ. ಗರ್ಭಗುಡಿಯ ಹೊರಗೆ ವಾಸ್ತು ಪೂಜೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳನ್ನು 121 ಅರ್ಚಕರು ಸೇರಿ ನೆರವೇರಿಸುವ ಮೂಲಕ ವಿಗ್ರಹ ಸ್ಥಾಪನೆ ಕಾರ್ಯ ಪೂರ್ಣಗೊಂಡಿದೆ.

Advertisement

ಬುಧವಾರ ರಾತ್ರಿಯೇ ವಿಶೇಷ ಪೂಜೆಯೊಂದಿಗೆ ರಾಮಲಲ್ಲಾನ ವಿಗ್ರಹವನ್ನು ಮಂದಿರದ ಗರ್ಭಗುಡಿಗೆ ತರಲಾಗಿತ್ತು ಆದರೆ, ಕೆಲ ತಾಂತ್ರಿಕ ಕಾರಣಗಳಿಂದ  ಪ್ರತಿಷ್ಠಾಪಿಸಲಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಗುರುವಾರ ಖ್ಯಾತ ಜ್ಯೋತಿಷಿಗಳಾದ ಆಚಾರ್ಯ ಗಣೇಶ್ವರ ಶಾಸ್ತ್ರೀ ಅವರ ನೇತೃತ್ವದಲ್ಲಿ ಜಲಾಧಿವಾಸ್‌ ವಿಧಿಯ ಪ್ರಕಾರ ವಿಗ್ರಹವನ್ನು ಸ್ವತ್ಛಗೊಳಿಸಿ ಸತತ 4 ಗಂಟೆಗಳ ಕಾಲ ಪೂಜೆ, ಮಂತ್ರ ಪಠಣೆಯನ್ನು ನೆರ ವೇರಿಸಿ ಶುಭ ಮುಹೂರ್ತದಲ್ಲಿ ವಿಗ್ರಹ ಪ್ರತಿಷ್ಠಾಪಿಸಲಾಗಿದೆ. ಗೌರಿ ಗಣೇಶ ಪೂಜೆ, ವರುಣ ಪೂಜೆ ಸೇರಿ ವಿವಿಧ ಪೂಜಾ ಪ್ರಕ್ರಿಯೆಗಳನ್ನು ಅನುಸರಿಸಲಾಗಿದೆ ಎಂದು ಮಂದಿರ ಟ್ರಸ್ಟ್‌ ಮಾಹಿತಿ ನೀಡಿದೆ.

ಇದನ್ನೂ ಓದಿ: 

Advertisement

Udayavani is now on Telegram. Click here to join our channel and stay updated with the latest news.

Next