Advertisement
ಈ ರಸ್ತೆ ಸುಮಾರು ಎರಡೂವರೆ ಕಿ.ಮೀ. ಇದ್ದು ಸರಿ ಸುಮಾರು ಒಂದೂವರೆ ಕಿ.ಮೀ. ರಸ್ತೆಗೆ ಕಾಂಕ್ರೀಟ್ ಅಳವಡಿಸಲಾಗಿದೆ. ಆದರೆ ನಾಲ್ಕು ವರ್ಷಗಳಿಂದ ಕಾಮಗಾರಿ ಮುಂದಕ್ಕೆ ನಡೆದಿಲ್ಲ. ಪರಿಣಾಮ ರಸ್ತೆ ಸಂಚಾರಕ್ಕೆ ಅಯೋಗ್ಯವಾಗಿದೆ.
ರಸ್ತೆ ಕೆಸರುಮಯವಾಗಿರುವ ಕಾರಣ ಪಾದಚಾರಿಗಳಿಗೆ ನಡೆದುಕೊಂಡು ತೆರಳಲು ಅಸಾಧ್ಯವಾಗಿದೆ. ರಸ್ತೆ ತುಂಬಾ ಕೆಸರಿನಿಂದಾಗಿ ಪರದಾಡುವಂತಾಗಿದೆ. ಮಳೆ ಬಂದರೆ ಇಲ್ಲಿನ ಜನರ ಕಷ್ಟ ಕೇಳುವಂತಿಲ್ಲ. ಹಲವು ವಿದ್ಯಾರ್ಥಿಗಳು ಕೂಡ ಈ ರಸ್ತೆ ಅವಲಂಬಿಸಿದ್ದು, ಕಷ್ಟಪಡುತ್ತಿದ್ದಾರೆ.
Related Articles
ರಸ್ತೆ ಅಭಿವೃದ್ಧಿಗಾಗಿ ಸ್ಥಳೀಯ ನಿವಾಸಿಗಳು ವಿವಿಧ ಇಲಾಖೆಗೆ ಅಲೆದಾಡಿದ್ದಾರೆ. ಶಾಸಕರಿಗೂ ಮನವಿ ಮಾಡಿಕೊಂಡಿದ್ದಾರೆ. ಈ ನಡುವೆ ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿಯಾಗಿ ರಸ್ತೆ ದುರಸ್ತಿಗೊಳಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಲೋಕಸಭಾ ಚುನಾವಣೆಯ ಬಳಿಕ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಆದರೆ, ಇಲ್ಲಿಯವರೆಗೆ ಯಾವುದೇ ಕ್ರಮವಾಗಿಲ್ಲ ಎಂಬುವುದು ಸ್ಥಳೀಯರ ಅಳಲು.
Advertisement
ಸ್ಥಳೀಯರಿಂದ ರಸ್ತೆ ದುರಸ್ತಿಮಳೆಗಾಲದಲ್ಲಿ ಕೆಸರು ಗದ್ದೆಯಂತಾಗುವ ರಸ್ತೆಯನ್ನು ಸ್ಥಳೀಯ ನಿವಾಸಿಗಳು ದುರಸ್ತಿ ನಡೆಸಿದ್ದಾರೆ. ಆದರೆ, ಘನವಾಹನ ಸಂಚರಿಸಿ ಮತ್ತೆ ಕೆಸರುಮಯವಾಗಿದೆ. ರಸ್ತೆ ಅಭಿವೃದ್ಧಿಗೆ ಕೋಟ್ಯಂತರ ಅನುದಾನ ಅಗತ್ಯ. ಪಾಲಿಕೆಯ ಅನುದಾನ ಸಾಲದು. ನದಿ ಪಕ್ಕದ ರಸ್ತೆಯಾಗಿರುವ ಕಾರಣ ಪ್ರವಾಸೋದ್ಯಮ ಇಲಾಖೆ ಸೇರಿದಂತೆ ರಾಜ್ಯ ಸರಕಾರದ ಅನುದಾನಕ್ಕಾಗಿ ಹಲವು ಬಾರಿ ಶಾಸಕರ ಮೂಲಕ ಸರಕಾರಕ್ಕೆ ಮನವಿ ನೀಡಿದ್ದೇವೆ. ಆದರೆ, ಸರಕಾರ ಅನುದಾನ ಬಿಡುಗಡೆ ಮಾಡಿಲ್ಲ. ಬೋಟ್‌ಗಳ ನಿಲುಗಡೆಯಿಂದ ಘನ ವಾಹನ ಸಂಚಾರದಿಂದ ರಸ್ತೆ ಹಾಳಾಗಿದೆ.
-ಕಿರಣ್ ಕುಮಾರ್, ಪಾಲಿಕೆ ಸದಸ್ಯರು 40 ವರ್ಷಗಳಿಂದ ಈ ಭಾಗದಲ್ಲಿ ನೆಲೆಸಿದ್ದೇನೆ. ಇಲ್ಲಿಯ ವರೆಗೆ ಒಮ್ಮೆಯೂ ರಸ್ತೆಗೆ ಡಾಮರು ಅಳವಡಿಸಿಲ್ಲ. ಪಾಲಿಕೆಗೆ ಜನಪ್ರತಿನಿಧಿಗಳಿಗೆ ಮನವಿ ನೀಡಿದ್ದೇ ಬಂತು.
-ರೋಹನ್ ಡಿ’ಸೋಜಾ, ಸ್ಥಳೀಯ ನಿವಾಸಿ -ಸಂತೋಷ್ ಮೊಂತೇರೊ