Advertisement

ಸೋನೆಪತ್‌ ಬಾಂಬ್‌ ಸ್ಫೋಟ: ತುಂಡಾಗೆ ಜೀವಾವಧಿ ಶಿಕ್ಷೆ

07:10 AM Oct 11, 2017 | Harsha Rao |

ಸೋನೆಪತ್‌: 1996ರಲ್ಲಿ ನಡೆದ ಹರ್ಯಾಣದ ಸೋನೆಪತ್‌ ಬಾಂಬ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಲಷ್ಕರ್‌ -ಇ-ತೊಯ್ಬಾ ಉಗ್ರ ಸಂಘಟನೆಯ ಬಾಂಬ್‌ ತಯಾರಕ ಸಯ್ಯದ್‌ ಅಬ್ದುಲ್‌ ಕರೀಂ ತುಂಡಾಗೆ ಜೀವಾವಧಿ ಶಿಕ್ಷೆ ವಿಧಿಸಿ ಇಲ್ಲಿನ ನ್ಯಾಯಾಲಯ ಮಂಗಳವಾರ ತೀರ್ಪು ನೀಡಿದೆ. ಜೊತೆಗೆ 1 ಲಕ್ಷ ರೂ. ದಂಡವನ್ನೂ ವಿಧಿಸಿದೆ.

Advertisement

ಕೊಲೆ ಯತ್ನ, ಕ್ರಿಮಿನಲ್‌ ಸಂಚು, ಜನಜೀವನ, ಆಸ್ತಿ ಪಾಸ್ತಿಗೆ ಹಾನಿ ಮಾಡುವಂಥ ನಡವಳಿಕೆ ಸೇರಿದಂತೆ ಹಲವು ಆರೋಪಗಳಲ್ಲಿ ಆತ ದೋಷಿ ಎಂದು ಸಾಬೀತಾಗಿದೆ. 1996ರ ಡಿ.28ರಂದು ಸೋನೆಪತ್‌ನಲ್ಲಿ ಬಸ್‌ ನಿಲ್ದಾಣ ಮತ್ತು ಸಿಹಿ ತಿನಿಸು ಅಂಗಡಿಯಲ್ಲಿ 2 ಪ್ರತ್ಯೇಕ ಬಾಂಬ್‌ ಸ್ಫೋಟಗೊಂಡಿತ್ತು. ಕೇವಲ 10 ನಿಮಿಷಗಳ ಒಳಗೆ 12 ಮಂದಿ ಗಾಯಗೊಂಡಿದ್ದರು. ಪೊಲೀಸರು ಶಕೀಲ್‌ ಅಹ್ಮದ್‌, ಮೊಹಮದ್‌ ಅಮೀರ್‌ ಖಾನ್‌ ಮತ್ತು ತುಂಡಾ ವಿರುದ್ಧ ಮೊಕದ್ದಮೆ ದಾಖಲಿಸಿದ್ದರು. 1993ರ ಮುಂಬೈ ಸ್ಫೋಟ ಸೇರಿ ದೇಶದಲ್ಲಿ ನಡೆದ 40 ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ತುಂಡಾ ಮೇಲಿದೆ.

Advertisement

Udayavani is now on Telegram. Click here to join our channel and stay updated with the latest news.

Next