Advertisement

ಹೊಸ ಬಗೆಯ ಸಸ್ಪೆನ್ಸ್ – ಥ್ರಿಲ್ಲರ್; 1975 ಚಿತ್ರ ವಿಮರ್ಶೆ

01:23 PM Feb 26, 2023 | Team Udayavani |

ಕನ್ನಡ ಚಿತ್ರರಂಗಕ್ಕೆ ಬರುವ ಹೊಸಬರು ಈಗ ಒಂದಷ್ಟು ಭಿನ್ನ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ರೆಗ್ಯುಲರ್‌ ಶೈಲಿ ಬಿಟ್ಟು, ಹೊಸ ಕಥೆಯೊಂದಿಗೆ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಅದರಲ್ಲೂ ಹೊಸಬರಿಗೆ ಸಸ್ಪೆನ್ಸ್‌-ಥ್ರಿಲ್ಲರ್‌ ಜಾನರ್‌ ಎಂದರೆ ಸ್ವಲ್ಪ ಹೆಚ್ಚೇ ಇಷ್ಟ. ಈ ಸಾಲಿಗೆ ಸೇರುವ ಸಿನಿಮಾ “1975′.

Advertisement

ಇದು ಸಂಪೂರ್ಣ ಹೊಸಬರೇ ಸೇರಿ ಮಾಡಿರುವ ಸಿನಿಮಾ. ಕಾಲೇಜು ಬ್ಯಾಕ್‌ ಡ್ರಾಪ್‌ ಹಿನ್ನೆಲೆಯಲ್ಲಿ ಆರಂಭವಾಗುವ ಸಿನಿಮಾ ಮುಂದೆ ಸಾಗುತ್ತಾ, ಥ್ರಿಲ್ಲರ್‌ ಹಾದಿ ಹಿಡಿಯುತ್ತದೆ. ಕಾಲೇಜು ವಿದ್ಯಾರ್ಥಿಗಳ ಕೊಲೆ ಸುತ್ತ ಸಾಗುವ ಸಿನಿಮಾದಲ್ಲಿ ಪ್ರೇಕ್ಷಕರಿಗೆ ಬೇಕಾದ ಥ್ರಿಲ್ಲರ್‌ ಅಂಶ ನೀಡಲು ನಿರ್ದೇಶಕರು ಪ್ರಯತ್ನಿಸಿದ್ದಾರೆ. ಕೊಲೆಯ ಜೊತೆಗೆ ಮಾದಕ ವಸ್ತು ಜಾಲವನ್ನು ಸಿನಿಮಾದಲ್ಲಿ ಸೇರಿಸಿದ್ದಾರೆ. ಕ್ರೈಂ, ಸಸ್ಪೆನ್ಸ್‌, ಥ್ರಿಲ್ಲರ್‌ ಜೊತೆಗೆ ಉಪ ಕಥೆಗಳು ಇದೆಯಂತೆ.

ಇನ್ನು, 1975′ ಅಂದ್ರೆ ನಂಬರಾ? ವರ್ಷನಾ? ಗಾಡಿ ನಂಬರಾ? ಎಂಬ ಕುತೂಹಲಕ್ಕೆ ಸಿನಿಮಾ ಉತ್ತರ ನೀಡಲಿದೆ. ಈ ಚಿತ್ರದಲ್ಲಿ ತಂದೆ ಮಗಳ ಅನುಬಂಧವಿದೆ, ಫ‌ುಡ್‌ ಡೆಲಿವರಿ ಬಾಯ್‌ ನೋವಿನ ಕಥೆಯಿದೆ, ಕಾಲೇಜ್‌ ಲವ್‌ ಸ್ಟೋರಿ ಇದೆ ಹೀಗೆ ಎಲ್ಲಾ ಅಂಶಗಳು ಚಿತ್ರದಲ್ಲಿದೆ. ಹಾಗಂತ ಇಡೀ ಸಿನಿಮಾ ಗಂಭೀರವಾಗಿಯೇ ಸಾಗುತ್ತದೆ ಎಂದಲ್ಲ. ಒಂದಷ್ಟು ಮನರಂಜನೆಯ ಅಂಶಗಳನ್ನು ಕೂಡಾ ಸೇರಿಸಿದ್ದಾರೆ. ಒಂದು ಪ್ರಯತ್ನವಾಗಿ “1975′ ಮೆಚ್ಚಬಹುದು.

ಚಿತ್ರದಲ್ಲಿ ನಾಯಕರಾಗಿ ನಟಿಸಿರುವ ಜೈ ಶೆಟ್ಟಿ, ನಾಯಕಿ ಮಾನಸ ಸೇರಿದಂತೆ ಇತರ ಕಲಾವಿದರು ತಮ್ಮ ಪಾತ್ರಗಳಿಗೆ ಹೊಂದಿಕೊಂಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next