Advertisement

ಜನರ ಕಣ್ಮಣಿ: 1971ರ ಭಾರತ-ಪಾಕ್‌ ಸಮರದ ವೈಜಯಂತ್‌ ಟ್ಯಾಂಕ್‌

04:06 PM Oct 07, 2017 | Team Udayavani |

ಶಿಲ್ಲಾಂಗ್‌ : 1971ರ ಭಾರತ – ಪಾಕಿಸ್ಥಾನ ಯುದ್ಧದಲ್ಲಿ ಭಾರತೀಯ ಸೇನಾ ಪಡೆ ಅತ್ಯಂತ ಪರಿಣಾಮಕಾರಿಯಾಗಿ ಬಳಸಿದ್ದ ವೈಜಯಂತ್‌  ಸಮರ ಟ್ಯಾಂಕ್‌ ಅನ್ನು ಇದೀಗ ಇಲ್ಲಿನ ಹೆರಿಟೇಜ್‌ ಮ್ಯೂಸಿಯಂನಲ್ಲಿ ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗಿದ್ದು ಅದು ವಸ್ತುತಃ ಜನರ ಕಣ್ಮಣಿಯಾಗಿದೆ.

Advertisement

ವೈಜಯಂತ್‌ ಟ್ಯಾಂಕ್‌  ದರ್ಶನದಿಂದ ಜನರಲ್ಲಿ ದೇಶ ಪ್ರೇಮ ಪುಟಿದೇಳಬಲ್ಲುದು ಎಂದು ಹಿರಿಯ ಅಧಿಕಾರಿಯೋರ್ವರು ಹೇಳಿದ್ದಾರೆ. 

ದಿಲ್ಲಿಯಿಂದ ಶಿಲ್ಲಾಂಗ್‌ ವರೆಗಿನ 3,600 ಕಿ.ಮೀ. ದೂರವನ್ನು ಕ್ರಮಿಸಿ ಈ ವಾರದ ಆರಂಭದಲ್ಲಿ ಇಲ್ಲಿಗೆ ಆಗಮಿಸಿದ “ವಾರ್‌ ಟ್ರೋಫಿ ಟ್ಯಾಂಕ್‌’ ಎಂದೇ ಪ್ರಸಿದ್ದವಾಗಿರುವ ವೈಜಯಂತ್‌ ಟ್ಯಾಂಕನ್ನು ಇಲ್ಲಿನ ರಿಲ್‌ಬಾಂಗ್‌ ಕ್ರಾಸಿಂಗ್‌ನಲ್ಲಿರುವ ರಿನೋ ಹೆರಿಟೇಜ್‌ ಮ್ಯೂಸಿಯಂನಲ್ಲಿ ಇರಿಸಲಾಗಿದೆ.

ವೈಜಯಂತ್‌ ಟ್ಯಾಂಕನ್ನು 1966ರಲ್ಲಿ ಭಾರತೀಯ ಸೇನೆಯ ಸೇವೆಗೆ ನಿಯೋಜಿಸಲಾಗಿತ್ತು; 2004ರಲ್ಲಿ ಅದಕ್ಕೆ ಶಾಶ್ವತ ವಿರಾಮವನ್ನು ನೀಡಲಾಗಿತ್ತು.  

Advertisement

Udayavani is now on Telegram. Click here to join our channel and stay updated with the latest news.

Next