Advertisement
ಸುದ್ದಿಗೋಷ್ಠಿಯಲ್ಲಿ ಚುನಾವಣೆಯ ಮಾಹಿತಿ ನೀಡಿದ ಅವರು, ಹಾಸನ ತಾಲೂಕಿನಲ್ಲಿ 45, ಅರಕಲಗೂಡು 45, ಚನ್ನರಾಯಪಟ್ಟಣ 84, ಸಕಲೇಶಪುರ 23 ಸದಸ್ಯ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆಎಂದು ತಿಳಿಸಿದರು. ಹಾಸನ ತಾಲೂಕಿನ ಮೊಸಳೆ ಹೊಸಹಳ್ಳಿ ಗ್ರಾಮ ಪಂಚಾಯ್ತಿಯ ಒಂದು ಹಾಗೂಸಕಲೇಶಪುರ ತಾಲೂಕಿನ 34 ಸದಸ್ಯ ಸ್ಥಾನಗಳಿಗೆ ಯಾವುದೇ ನಾಮಪತ್ರಗಳು ಸಲ್ಲಿಕೆಯಾಗಿಲ್ಲ. ದೇವಲದಕೆರೆ ಗ್ರಾಮ ಪಂಚಾಯಿತಿಯ 29 ಸ್ಥಾನಗಳಿಗೆ 28 ನಾಮ ಪತ್ರಗಳು ಸಲ್ಲಿಕೆಯಾಗಿದ್ದವು. ನಾಮಪತ್ರ ಹಿಂಪಡೆಯಲು ಡಿ.14ಕೊನೆಯ ದಿನಾಂಕವಾಗಿತ್ತು. ಈ ಗ್ರಾಮದಲ್ಲಿ ಅಧಿಕಾರಿಗಳು ಸಭೆ ಮಾಡಿ ಮನವರಿಕೆ ಮಾಡಲು ಪ್ರಯತ್ನಿಸಿದರೂ 28ನಾಮಪತ್ರ ಹಿಂಪಡೆಯಲಾಗಿದೆ. ಒಂದು ನಾಮಪತ್ರ ಮಾತ್ರ ಸಲ್ಲಿಕೆಯಾಗಿದೆ ಎಂದು ಹೇಳಿದರು.
Related Articles
Advertisement
ಮಾಧ್ಯಮಗಳಲ್ಲಿ ಪ್ರಚಾರ: ಜಿಪಂ ಸಿಇಒ ಬಿ.ಭಾರತಿ ಮಾತನಾಡಿ, ಜಿಲ್ಲೆಯಲ್ಲಿ ಬೀದಿ ನಾಟಕ, ಜನಪದ ಹಾಡುಗಳು, ಪೋಸ್ಟರ್ ಅಂಟಿಸುವುದು, ಬ್ಯಾನರ್‌ಹಾಕುವ ಮೂಲಕ ಮತದಾನದ ಜಾಗೃತಿಕಾರ್ಯಕ್ರಮ ನಡೆಸಲಾಗುತ್ತಿದೆ. ಮತದಾನದಿಂದಯಾರೂ ಹಿಂದೆ ಉಳಿಯಬೇಡಿ ಎಂದು, ಸ್ಥಳೀಯಕೇಬಲ್ ನೆಟ್‌ವರ್ಕ್, ರೇಡಿಯೋ ಮೂಲಕವು ಪ್ರಚಾರ ಮಾಡಲಾಗುತ್ತಿದೆ. ಮತದಾನ ಮಾಡುವಅಂಗವಿಕಲರಿಗೆ ವಿಶೇಷ ಸೌಲಭ್ಯಗಳನ್ನು ಕಲ್ಪಿಸ ಲಾಗುವುದು ಎಂದು ಹೇಳಿದರು.
ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಹಾಗೂ ವಿವಿಧಸ್ಥಳಗಳಿಗೆ ಅಂಟಿಸುವ ಪೋಸ್ಟರ್ ಬಿಡುಗಡೆ ಮಾಡ ಲಾಯಿತು. ಬಳಿಕ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬೀದಿ ನಾಟಕಕ್ಕೆ ಚಾಲನೆ ನೀಡಲಾಯಿತು. ಅಪರಜಿಲ್ಲಾಧಿಕಾರಿ ಕವಿತಾ ರಾಜರಾಂ ಅವರೂ ಈ ಸಂದರ್ಭದಲ್ಲಿ ಹಾಜರಿದ್ದರು.
ಸದಸ್ಯತ್ವ ಹರಾಜು: 43 ಜನರ ಮೇಲೆಕೇಸ್ : ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಶಾಂತಿಯುತವಾಗಿ ನಡೆಯಲು ಅಗತ್ಯಕಾನೂನುಕ್ರಮಕೈಗೊಳ್ಳಲಾಗಿದೆ. ಚುನಾವಣೆ ಅಕ್ರಮಗಳು ನಡೆಯುವುದರ ಮಾಹಿತಿ ನೀಡಿದರೆ ತಕ್ಷಣವೇ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿ ವಾಸ್‌ಗೌಡಸ್ಪಷ್ಟಪಡಿಸಿದರು. ಅರಕಲಗೂಡು ತಾಲೂಕು ರಾಮನಾಥಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಬಿಳಗುಲಿ ಗ್ರಾಮದಲ್ಲಿ ಹರಾಜಿನ ಮೂಲಕ ಸದಸ್ಯಸ್ಥಾನಕ್ಕೆ ಅವಿರೋಧ ಆಯ್ಕೆ ನಡೆಸಲಾಗಿತ್ತು. ಈ ಸಂಬಂಧ3 ಜನ ಹಾಗೂ ಸಂಗಡಿಗರು ಸೇರಿ 43 ಜನರ ವಿರುದ್ಧ ಐಪಿಸಿ ಕಲಂ171 ಹಾಗೂ 171ಎಫ್ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದರು.