Advertisement
ಫೈನಲ್ ಹಣಾಹಣಿಯಲ್ಲಿ ಕಾರ್ಲೋಸ್ ಅಲ್ಕರಾಝ್ 6-4, 2-6, 7-6 (7 -1), 6-3 ಅಂತರದಿಂದ ನಾರ್ವೆಯ ಕ್ಯಾಸ್ಪರ್ ರೂಡ್ ಆಟಕ್ಕೆ ತೆರೆ ಎಳೆದರು. ಇದರೊಂದಿಗೆ ಈ ವರ್ಷದ ಎರಡೂ ಗ್ರ್ಯಾಮ್‌ಸ್ಲಾಮ್ ಫೈನಲ್‌ಗಳಲ್ಲಿ ರೂಡ್‌ಗೆ ಪ್ರಶಸ್ತಿಯ “ರೋಡ್’ ಮುಚ್ಚಲ್ಪಟ್ಟಿತು. ಕಳೆದ ಫ್ರೆಂಚ್ ಓಪನ್ ಪಂದ್ಯಾವಳಿಯಲ್ಲೂ ಅವರು ಪ್ರಶಸ್ತಿ ಸುತ್ತು ತಲುಪಿದ್ದರು. ಅಲ್ಲಿ ರಫೆಲ್ ನಡಾಲ್‌ಗೆ ಶರಣಾಗಿ ಮೊದಲ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಯಿಂದ ವಂಚಿತರಾಗಿದ್ದರು. ಇಲ್ಲಿ ಸ್ಪೇನ್‌ನ ಯುವ ಆಟಗಾರನ ಬಲೆಗೆ ಬಿದ್ದರು.
ಈ ವರ್ಷ ಎರಡು ಮಾಸ್ಟರ್-1000 ಪ್ರಶಸ್ತಿ ಜಯಿಸಿದ ಸಾಧನೆ ಕಾರ್ಲೋಸ್ ಅಲ್ಕರಾಝ್ ಅವರದಾಗಿತ್ತು. ಆದರೆ ಯುಎಸ್ ಓಪನ್‌ಗೂ ಮೊದಲು ನಡೆದ ಮಾಂಟ್ರಿಯಲ್ ಕೂಟದ ಮೊದಲ ಸುತ್ತಿನಲ್ಲೇ ಅನುಭವಿಸಿದ ಸೋಲು, ಸಿನ್ಸಿನಾಟಿ ಮಾಸ್ಟರ್ ಕ್ವಾರ್ಟರ್ ಫೈನಲ್‌ನಲ್ಲಿ ಎದುರಾದ ಸೋಲು ಅಲ್ಕರಾಝ್ ಅವರ ಆತ್ಮವಿ ಶ್ವಾಸವನ್ನು ಕುಸಿಯುವಂತೆ ಮಾಡಿದ್ದು ಸುಳ್ಳಲ್ಲ. ಅಲ್ಲದೇ ಫೈನಲ್‌ಗೂ ಹಿಂದಿನ 3 ಪಂದ್ಯಗಳಲ್ಲಿ ಸತತ 5 ಸೆಟ್‌ಗಳ ಹೋರಾಟವನ್ನು ಅವರು ನಡೆಸಿದ್ದರು. ನಂಬರ್ ವನ್ ರ್‍ಯಾಂಕಿಂಗ್
ಯುಎಸ್ ಓಪನ್ ಗೆಲುವಿನೊಂದಿಗೆ ಕಾರ್ಲೋಸ್ ಅಲ್ಕರಾಝ್ ಇನ್ನೊಂದು ಹೆಗ್ಗಳಿಕೆಗೂ ಪಾತ್ರರಾದರು. ಅವರೀಗ ವಿಶ್ವದ ನಂಬರ್ ವನ್ ಟೆನಿಸಿಗನೆಂಬ ಗೌರವಕ್ಕೆ ಭಾಜನರಾಗಿದ್ದಾರೆ. ರಷ್ಯಾದ ಡ್ಯಾನಿಲ್ ಮೆಡ್ವೆಡೇವ್ ಈ ಸ್ಥಾನದಿಂದ ಕೆಳಗಿಳಿದರು. 1973ರಲ್ಲಿ ಎಟಿಪಿ ರ್‍ಯಾಂಕಿಂಗ್ ಆರಂಭವಾದಂದಿನಿಂದ ನಂ.1 ಆಟಗಾರನೆನಿಸಿದ ವಿಶ್ವದ ಕಿರಿಯ ಟೆನಿಸಿಗನೆಂಬುದು ಅಲ್ಕರಾಝ್ ಹಿರಿಮೆ.
Related Articles
ಜೆಕ್ ಗಣರಾಜ್ಯದ ಕ್ಯಾಥರಿನಾ ಸಿನಿಯಕೋವಾ- ಕ್ರೆಜಿಕೋವಾ ಯುಎಸ್ ಓಪನ್ ವನಿತಾ ಡಬಲ್ಸ್ ಪ್ರಶಸ್ತಿ ಜಯಿಸಿದ್ದಾರೆ. ಅದೃಷ್ಟದ ಸಂಪೂರ್ಣ ಬೆಂಬಲ ಪಡೆದ ಇವರು ಆತಿಥೇಯ ಅಮೆರಿಕದ ಕ್ಯಾಟಿ ಮೆಕ್‌ನಾಲಿ-ಟಯ್ಲರ್ ಟೌನ್ಸೆಂಡ್ ವಿರುದ್ಧ 3-6, 7-5, 6-1 ಅಂತರದ ಗೆಲುವು ಸಾಧಿಸಿದರು.
Advertisement