Advertisement

#Wesaluteyou: ರಕ್ತದಾನ ಮಾಡಿ ಯುವತಿಯ ಜೀವ ಉಳಿಸಿದ CRPF ಯೋಧರು

08:02 PM Nov 25, 2020 | Mithun PG |

ಶ್ರೀನಗರ: 19 ವರ್ಷದ ಯುವತಿಗೆ  ಇಬ್ಬರು ಸಿಆರ್‌ಪಿಎಫ್ ಯೋಧರು ರಕ್ತದಾನ ಮಾಡುವ ಮೂಲಕ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.

Advertisement

ಶ್ರೀನಗರದ ಶೇರ್‌-ಇ-ಕಾಶ್ಮೀರ್‌ ಇನ್‌ಸ್ಟಿಟ್ಯೂಟ್‌ ಆಫ್ ಮೆಡಿಕಲ್‌ ಸೈನ್ಸ್‌ (ಎಸ್‌ಕೆಐಎಂಎಸ್‌) ಆಸ್ಪತ್ರೆಯಲ್ಲಿ ಮೂತ್ರಪಿಂಡ ಕಸಿಗೆ ಒಳಗಾಗಿದ್ದ 19 ವರ್ಷದ ಯುವತಿಯೋರ್ವಳಿಗೆ ಸಿಆರ್‌ಪಿಎಫ್ ನ ಇಬ್ಬರು ಯೋಧರು ರಕ್ತದಾನ ಮಾಡಿದ್ದಾರೆ. ಆ ಮೂಲಕ ಗಡಿಯಲ್ಲಿ ನಿಂತು ದೇಶವನ್ನು ರಕ್ಷಣೆ ಮಾಡುವುದು ಮಾತ್ರವಲ್ಲದೆ ದೇಶದ ಒಳಗೂ ಹಲವರ ಜೀವ ಉಳಿಸುವ ಕೈಂಕರ್ಯದಲ್ಲಿ ತೊಡಗಿದ್ದಾರೆ.

ಬುಡ್ಗಾಂ ಜಿಲ್ಲೆಯ ಸಯೀದಾ ಎಂಬ ಯುವತಿ ಮೂತ್ರಪಿಂಡ ಕಸಿ ಚಿಕಿತ್ಸೆಗಾಗಿ ಶ್ರೀನಗರದ ಆಸ್ಪತ್ರೆಗೆ ದಾಖಲಾಗಿದ್ದರು. ಇವರಿಗೆ ರಕ್ತದ ಆವಶ್ಯಕತೆ ಇತ್ತು. ಇದನ್ನು ತಿಳಿದ ಸಿಆರ್‌ಪಿಎಫ್  73ನೇ ಬೆಟಾಲಿಯನ್‌ನ ಸಹಾಯಕ ಕಮಾಂಡೆಂಟ್‌ ಜಾವೇದ್‌ ಅಲಿ ಮತ್ತು ಕಾನ್‌ಸ್ಟೆಬಲ್‌ ರಂಜನ್‌ ಕುಮಾರ್‌ ರಕ್ತದಾನ ಮಾಡಿ ಯುವತಿಯ ಜೀವ ಉಳಿಸಿದ್ದಾರೆ.

ಇದನ್ನೂ ಓದಿ: ‌26/11 ದಾಳಿ ನಾಳೆಗೆ 12 ವರ್ಷ ಪೂರ್ಣ: ಗಣ್ಯರಿಂದ ಹುತಾತ್ಮರಿಗೆ ಗೌರವ ಸಮರ್ಪಣೆ

Advertisement

ಯೋಧರ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಶ್ಲಾಘನೆ ವ್ಯಕ್ತವಾಗಿದೆ. ಹಲವರು ಯೋಧರ ಈ ಕಾರ್ಯಕ್ಕೆ ಸೆಲ್ಯೂಟ್‌ ಎಂದಿದ್ದು, #HelpUsToHelpYou #DonateBloodSaveLife  ಎಂಬ ಹ್ಯಾಶ್‌ಟ್ಯಾಗ್‌ ಟ್ರೆಂಡ್‌ ಸೃಷ್ಟಿಸಿದೆ.

ಇದನ್ನೂ ಓದಿ: ಪಾಕ್ To ಕಾಂಬೋಡಿಯ: ಏರ್ ಲಿಫ್ಟ್ ಮೂಲಕ ‘ಕಾವನ್’ ಸ್ಥಳಾಂತರ: ಯಾರಿವನು ?

Advertisement

Udayavani is now on Telegram. Click here to join our channel and stay updated with the latest news.

Next