Advertisement

ಜಿಲ್ಲೆಯಲ್ಲಿ 19 ತಾಲೂಕು ಪಂಚಾಯ್ತಿ ಕ್ಷೇತ್ರ ಕಡಿತ

12:37 PM Apr 05, 2021 | Team Udayavani |

ದೇವನಹಳ್ಳಿ: ತಾಪಂ ಸದಸ್ಯರ ಚುನಾಯಿತ ಅವಧಿ ಮುಗಿಯುತ್ತಿರುವುದರಿಂದ ಪ್ರಸ್ತುವರ್ಷದಲ್ಲೇ ಚುನಾವಣೆ ನಡೆಸಲುಆಯೋಗವು ಸಕಲ ಸಿದ್ಧತೆಗಳನ್ನುಮಾಡಿಕೊಳ್ಳುತ್ತಿದೆ. ಇದಕ್ಕಾಗಿ ಕ್ಷೇತ್ರಪುನರ್‌ ವಿಂಗಡಣೆ ಮಾಡಿ, ವರದಿಯೂ ಸಲ್ಲಿಸಲಾಗಿದೆ.

Advertisement

ರಾಜ್ಯ ಚುನಾವಣಾ ಆಯೋಗವುಪಂಚಾಯತ್‌ ರಾಜ್‌ ಕಾಯ್ದೆ 2016ರಂತೆಕ್ಷೇತ್ರವಾರು ಪುನರ್‌ ವಿಂಗಡಣೆ ಮಾಡಿ,ಜಿಲ್ಲೆಯಲ್ಲಿ ಈ ಹಿಂದೆ ಇದ್ದ 77 ತಾಪಂಕ್ಷೇತ್ರಗಳನ್ನು 58ಕ್ಕೆ ಇಳಿಸಿದೆ.ತಾಪಂ ಕ್ಷೇತ್ರ ವ್ಯಾಪ್ತಿಗೆ 12,500 ಜನಸಂಖ್ಯೆ ನಿಗದಿಗೊಳಿಸಿದೆ.

ದೇವನಹಳ್ಳಿ ತಾಲೂಕಿನಲ್ಲಿ ಸದ್ಯ 15 ತಾಪಂ ಕ್ಷೇತ್ರಗಳಿದ್ದು, ಅದರಲ್ಲಿಮೂರು ಕ್ಷೇತ್ರಗಳನ್ನು ಕಡಿಮೆ ಮಾಡಲಾಗಿದೆ. ದೊಡ್ಡಬಳ್ಳಾಪುರ ತಾಲೂಕಿನಲ್ಲಿ 22 ತಾಪಂಕ್ಷೇತ್ರಗಳ ಪೈಕಿ 6 ಕ್ಷೇತ್ರ ಕಡಿತಗೊಳಿಸಿ 16 ಸ್ಥಾನ ನಿಗದಿ ಮಾಡಲಾಗಿದೆ .

ಹೊಸಕೋಟೆ ತಾಲೂಕಿನಲ್ಲಿ 22 ತಾಪಂ ಕ್ಷೇತ್ರಗಳ ಪೈಕಿ 4 ಕ್ಷೇತ್ರಕಡಿತಗೊಳಿಸಿ, 18 ಸ್ಥಾನಕ್ಕೆ ನಿಗದಿ ಮಾಡಲಾಗಿದೆ.ನೆಲಮಂಗಲ ತಾಲೂಕಿನಲ್ಲಿ 18 ತಾಪಂ ಕ್ಷೇತ್ರಗಳಪೈಕಿ 6 ಕಡಿತಗೊಳಿಸಿ 12 ಕ್ಷೇತ್ರ ಮಾಡಲಾಗಿದೆ.

ತಾಲೂಕು ಪುನರ್‌ವಿಂಗಡಣೆ ಆದ ತಾಪಂ ಕ್ಷೇತ್ರ :

Advertisement

ದೇವನಹಳ್ಳಿ:ಕಾರಹಳ್ಳಿ, ವೆಂಕಟಗಿರಿಕೋಟೆ, ಚಿಕ್ಕನಹಳ್ಳಿ(ಗೊಡ್ಲುಮುದ್ದೇನ ಹಳ್ಳಿ), ಆವತಿ, ಕೊಯಿರಾ(ವಿಶ್ವನಾಥಪುರ), ಯಲಿಯೂರು, ಚನ್ನರಾಯಪಟ್ಟಣ, ಆಲೂರು ದುದ್ದನಹಳ್ಳಿ (ಕುಂದಾಣ), ಸಾದಹಳ್ಳಿ (ಕನ್ನಮಂಗಲ), ಬೈಚಾಪುರ (ಅಣ್ಣೇಶ್ವರ), ಗಂಗವಾರ ಚೌಡಪ್ಪನಹಳ್ಳಿ (ನಲ್ಲೂರು), ಬೂದಿಗೆರೆ.

ದೊಡ್ಡಬಳ್ಳಾಪುರ: ಕನಸವಾಡಿ, ಕೋಡಿಹಳ್ಳಿ(ಚನ್ನದೇವಿ ಅಗ್ರಹಾರ), ಅರಳುಮಲ್ಲಿಗೆ, ದರ್ಗಾಜೋಗಿಹಳ್ಳಿ, ತಿಪೂರು, ಚಿಕ್ಕಹೆಜ್ಜಾಜಿ, ದೊಡ್ಡಬೆಳವಂಗಲ, ಕಾಡುತಿಪೂ³ರು(ಸಕ್ಕರೆ ಗೊಲ್ಲಹಳ್ಳಿ), ಆರೊಢಿ, ಗುಂಡುಮಗೆರೆ, ಹಾಡೋನಹಳ್ಳಿ, ತೂಬಗೆರೆ, ಮೇಳೆಕೋಟೆ, ಕೊಣಘಟ್ಟ, ಕಂಟನಕುಂಟೆ, ಪಾಲನಜೋಗಿಹಳ್ಳಿ(ಕೊಡಿಗೇಹಳ್ಳಿ).

ನೆಲಮಂಗಲ: ಮಲ್ಲರಬಾಣವಾಡಿ (ಯಂಟಗಾನಹಳ್ಳಿ),ಕಣೇಗೌಡನಹಳ್ಳಿ, ಗೊಲ್ಲಹಳ್ಳಿ, ಟಿ-ಬೇಗೂರು, ದೊಡ್ಡಬೆಲೆ, ತ್ಯಾಮಗೊಂಡ್ಲು, ಮಣ್ಣೆ, ನರಸೀಪುರ, ಸೋಂಪುರ, ಲಕ್ಕೂರು, ಶಿವಗಂಗೆ, ಬಿಲ್ವಿನಕೋಟೆ(ಕೆರೆಕತ್ತಿಗನೂರು) ತಾಪಂ ಕ್ಷೇತ್ರಗಳಾಗಿವೆ.

ಹೊಸಕೋಟೆ: ಸೂಲಿಬೆಲೆ, ಅತ್ತಿಬೆಲೆ, ಕುಂಬಳಹಳ್ಳಿ(ಆಲಪ್ಪನಹಳ್ಳಿ),ನಂದಗುಡಿ, ಹಿಂಡಿಗನಾಳ (ನೆಲವಾಗಿಲು), ಬೈಲನರಸಾಪುರ, ಶಿವನಾಪುರ,ತಾವರೇಕೆರೆ, ಚೊಕ್ಕಹಳ್ಳಿ (ಚಿಕ್ಕಹುಲ್ಲೂರು), ಬೇಗೂರು (ಕಂಬಳೀಪುರ),ಸಮೇತನಹಳ್ಳಿ, ಕಣ್ಣೂರಹಳ್ಳಿ(ದೊಡ್ಡಗಟ್ಟಿಗನಬ್ಬಿ), ಮೇಡಿಮಲ್ಲಸಂದ್ರ, ಎಸ್‌.ನಾರಾಯಣಕೆರೆ, ಬೋಧನಹೊಸಹಳ್ಳಿ(ಅನುಗೊಂಡನಹಳ್ಳಿ), ಕಟ್ಟಿಗೇನಹಳ್ಳಿ(ವಾಗಟ), ಜಡಿಗೇನಹಳ್ಳಿ, ಅತ್ತಿವಟ್ಟ.

 

ತಾಲೂಕು                 ಕಡಿತಗೊಳಿಸಿದ ಕ್ಷೇತ್ರ

ದೇವನಹಳ್ಳಿ                     ಅರದೇಶನಹಳ್ಳಿ, ಬೆಟ್ಟಕೋಟೆ, ಹಾರೋಹಳ್ಳಿ

ದೊಡ್ಡಬಳ್ಳಾಪುರ           ಬಾಶೆಟ್ಟಿಹಳ್ಳಿ, ವರದನಹಳ್ಳಿ, ತಿಪ್ಪಾಪುರ, ಮೆಣಸಿ, ರಾಜಘಟ್ಟ, ಹಣಬೆ

ನೆಲಮಂಗಲ                   ಅರಶಿಣಕುಂಟೆ, ಬಸವನಪುರ ವಾಜರಹಳ್ಳಿ, ಸೋಲದೇವನಹಳ್ಳಿ, ವಿಶ್ವೇಶ್ವರಪುರ

ಹೊಸಕೋಟೆ                  ಸೊನ್ನಳ್ಳಿಪುರ, ಹಾಲಪ್ಪನಹಳ್ಳಿ, ಕಂಬಳಿಪುರ, ಚಿಕ್ಕಉಳ್ಳೂರು

 

-ಎಸ್‌.ಮಹೇಶ್‌

Advertisement

Udayavani is now on Telegram. Click here to join our channel and stay updated with the latest news.

Next